ವಿಶ್ವದಾದ್ಯಂತ ಕೊರೊನ ಮಹಾಮಾರಿ ಸೋಂಕಿನಿಂದ ಜನರು ಕಂಗಾಲಾಗಿ ಹೋಗಿದ್ದು ಉದ್ಯೋಗವಿಲ್ಲದೆ , ಹಣವಿಲ್ಲದೆ ಕಷ್ಟದ ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ . ಶಾಲಾ ಕಾಲೇಜು ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಳೆದ ಬಾರಿಯ ಫೀಸು ಕಟ್ಟದೆ ಬಾಕಿಯಾಗಿರುತ್ತದೆ . ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿ ಫೀಸು ಕಟ್ಟುವಂತೆ ಒತ್ತಾಯ ಮಾಡುತ್ತಿರುವ ವಿಷಯ ಮಾದ್ಯಮಗಳಲ್ಲಿ ಕಂಡು ಬಂದಿರುತ್ತದೆ . ಆದರೆ ಯಾವುದೇ ಪೋಷಕರ ಹತ್ತಿರ ಹಣವಿಲ್ಲದೆ ಪರದಾಡುತ್ತಿದ್ದಾರೆ . ಹಾಗಾಗಿ ಈ ಫೀಸು ಕಟ್ಟಲು ಸಾಧ್ಯವಾಗುತ್ತಿಲ್ಲ . ಸರಕಾರವು ವಿದ್ಯಾಸಂಸ್ಥೆಗಳಿಗೆ ವಿದ್ಯಾರ್ಥಿಗಳ ಕೈಯಿಂದ ಫೀಸು ಕಟ್ಟಲು ಕಲಾವಕಾಶ ಕೊಡಬೇಕೆಂದು ಮತ್ತು ಅದೇಶ ಮಾಡಬೇಕೆಂದು ಸರಕಾರಕ್ಕೆ ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಜ್ ಕಟ್ಟೆಕಾರ್ ರವರು ಅಗ್ರಹಿಸಿರುತ್ತಾರೆ
- Thursday
- November 28th, 2024