Ad Widget

ದ.ಕ ಜಿಲ್ಲೆಯಲ್ಲಿ ಗುರುವಾರ ಲಾಕ್ ಡೌನ್ ಅಂತ್ಯ: ಸಚಿವ ಶ್ರೀನಿವಾಸ್ ಪೂಜಾರಿ – ಸಚಿವರು ಏನೆಲ್ಲಾ ಹೇಳಿದ್ದಾರೆ ಇಲ್ಲಿದೆ ವಿಡಿಯೋ

ಜಿಲ್ಲೆಯಲ್ಲಿ ಕೊರೊನಾ ಮುಂಜಾಗೃತಾ ಕ್ರಮವಾಗಿ ಹೇರಿರುವ ಲಾಕ್ ಡೌನ್ ನಾಳೆ ಕೊನೆಗೊಳ್ಳಲಿದ್ದು‌ ಗುರುವಾರದಿಂದ ಜಿಲ್ಲೆಯಲ್ಲಿ ಯಾವುದೇ ಲಾಕ್ ಡೌನ್ ಇರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯವನ್ನುದ್ದೇಶಿಸಿ ಮಾತನಾಡಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಎಲ್ಲಿಯೂ ಲಾಕ್ ಡೌನ್ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದು‌. ಈ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಗುರುವಾರದಿಂದ ಯಾವುದೇ ಲಾಕ್ ಡೌನ್ ಇಲ್ಲ ಎಂದು ಸಚಿವ ಕೋಟ ತಿಳಿಸಿದ್ದಾರೆ.
ಈಗ ಇರುವ ಒಂದು ವಾರದ ಲಾಕ್ ಡೌನ್ ಗುರುವಾರ ಮುಂಜಾನೆ 5 ಗಂಟೆ ತನಕ ಮಾತ್ರ ಇರಲಿದೆ. ಗುರುವಾರದಿಂದ ದ.ಕ‌ ಜಿಲ್ಲೆ ಎಂದಿನಂತೆ ಸಂಪೂರ್ಣ ಓಪನ್ ಆಗಲಿದೆ. ಈ ಹಿಂದೆ ಅವಕಾಶ ನೀಡಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಚಟುವಟಿಕೆ ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ.

. . . . . . .

ಸಚಿವರು ಏನೆಲ್ಲಾ ಹೇಳಿದ್ದಾರೆ ಈ ವಿಡಿಯೋ ನೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!