ಅಯಾಯ ಪ್ರದೇಶಕ್ಕೆ ರೈ ಇಂಡೇನ್ ಗ್ಯಾಸ್ ಸಂಸ್ಥೆಯಿಂದ ಗ್ರಾಹಕರಿಗೆ ಪ್ರತಿ 15 ದಿನಕ್ಕೊಮ್ಮೆ ಗ್ಯಾಸ್ ಬಟಾವಡೆ ಆಗುತ್ತಿರುವುದು ಒಳ್ಳೆಯ ವಿಚಾರ . ಆದರೆ ಈ ಬಾರಿ ಬಟಾವಡೆ ಮಾಡುವ ಸಂದರ್ಭದಲ್ಲಿ ಗ್ರಾಹಕರಿಂದ ಒಂದೊಂದು ರೀತಿಯ ಮೊತ್ತ ಪಡೆಯುತ್ತಿರುವುದು ಕಂಡು ಬಂದಿದೆ .ಈ ಬಗ್ಗೆ ಗ್ರಾಹಕರು ಇಂಡೇನ್ ಗ್ಯಾಸ್ ಏಜನ್ಸಿ ಗೆ ಫೋನ್ ಮಾಡಿ ಕೇಳಿದಾಗ ಗ್ಯಾಸ್ ಮೊತ್ತ ಹಾಗು ಡೆಲಿವರಿ ಮೊತ್ತ ಒಟ್ಟು ಸೇರಿ ರೂ 630 ಎಂದು ಒಬ್ಬರು ಹೇಳಿದ್ದರೆ , ಮತ್ತೊಬ್ಬರು ಫೋನ್ ಮಾಡಿದಾಗ 640 ಎಂದು ಹೇಳುತ್ತಾರೆ . ಆದರೆ ಗ್ಯಾಸ್ ವಾಹನದವರು ಗ್ರಾಹಕರ ಕೈಯಿಂದ 660 ಪಡೆದುಕೊಂಡಿರುತ್ತಾರೆ . ಗ್ರಾಹಕರು ಕೂಡಲೆ ದೂರವಾಣಿ ಕರೆ ಮಾಡಿದಕ್ಕೆ ರೂ 640 ನಿಡುವಂತೆ ಕೊನೆಗೆ ತಿಳಿಸಿರುತ್ತಾರೆ . ಹಾಗಾಗಿ ಯಾರಲ್ಲೂ ಹಣ ಇಲ್ಲದಂತ ಸಂದರ್ಭದಲ್ಲಿ ಇಂತಹ ಗ್ಯಾಸ್ ಏಜೆನ್ಸಿಗಳು ಜನಸಾಮಾನ್ಯರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ . ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಆಗದಂತೆ ರೈ ಇಂಡೇನ್ ಗ್ಯಾಸ್ ಏಜನ್ಸಿ ಯವರು ಕ್ರಮ ತೆಗೆದುಕೊಳ್ಳಬೇಕು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆಯವರು ಗ್ರಾಹಕರ ಪರವಾಗಿ ಅಗ್ರಹಿಸಿರುತ್ತಾರೆ.
ಈ ಬಗ್ಗೆ ವಿಚಾರಿಸಲು ಅಮರ ಸುದ್ದಿ ಏಜೆನ್ಸಿಯವರನ್ನು ಸಂಪರ್ಕಿಸಿದಾಗ ಸಂಪರ್ಕಕಕ್ಕೆ ಲಭ್ಯರಾಗಿಲ್ಲ.