ಸುಳ್ಯದ ಮೊಬೈಲ್ ಗ್ಯಾರೇಜ್ ಸಂಸ್ಥೆಯವರು ಫೇಸ್ಬುಕ್ ಮತ್ತು ಇನ್ಸ್ಟ್ರಾಗ್ರಾಮ್ ನಲ್ಲಿ ನಡೆಸಲು ಉದ್ದೇಶಿಸಿರುವ ಫೋಟೋ ಸೌಂದರ್ಯ ಸ್ಪರ್ದೆಯು ಹಿಂದು ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡೇ ನಡೆಯುತ್ತಿದೆ, ಈ ಫೋಟೋ ಗಳು ಮುಂದೆ ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಆಗುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಹಿಂದು ಜಾಗರಣ ವೇದಿಕೆ ಕಾರ್ಯದರ್ಶಿ ಅಜಿತ್ ಹೊಸಮನೆ ಪೋಲೀಸ್ ಅಧೀಕ್ಷರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ರವಾನೆಯಾಗುತ್ತಿದೆ. ಈ ಸ್ಪರ್ಧೆಯು ಹಿಂದು ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡೇ ನಡೆಯುತ್ತಿದೆ ಅನ್ನುವ ವಿಶೇಷ ಒಕ್ಕಣೆಯೊಂದು ಮುಸ್ಲಿಂ ಗ್ರೂಪ್ ಗಳಲ್ಲಿ ರವಾನೆಯಾಗುತ್ತಿರುವ ಮಾಹಿತಿಯೂ ಲಭ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾದ ಹೆಣ್ಣು ಮಕ್ಕಳ ವಿವಿಧ ಭಂಗಿಯ ಪೋಟೋಗಳು , ಅಶ್ಲೀಲ ಪೇಜ್ ಮತ್ತು ಪೇಕ್ ಅಕೌಂಟ್ ಗಳಲ್ಲಿ ರವಾನೆಯಾಗುವ ಹೆಣ್ಣು ಮಕ್ಕಳ ಫೋಟೋಗಳು ಕಾಣಸಿಗುತ್ತದೆ. ಈ ಸ್ಪರ್ಧೆಗೆ ಬಂದ ಫೋಟೋ ಇಂತಹ ಚಟುವಟಿಕೆಗಳಿಗೆ ಬಳಕೆಯಾಗಿ ಅನಾಹುತಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಗಳು ಹೆಚ್ಚಾಗಿರುವ ಲಕ್ಷಣಗಳು ಕಂಡುಬರುತ್ತಿದೆ.
ಯಾವುದೇ ಮುಸಲ್ಮಾನ ಹೆಣ್ಣುಮಕ್ಕಳು ತಮ್ಮ ದೇಹ ಸೌಂದರ್ಯ ಪ್ರದರ್ಶನ ಮಾಡುವ ಇಂತಹ ಸ್ಪರ್ದೆಗಳಲ್ಲಿ ಭಾಗವಹಿಸುವುದಿಲ್ಲ ಅನ್ನುವುದು ಸಾಮಾನ್ಯ ಜನರಿಗೆ ಗೊತ್ತಿರುವ ಸಂಗಾತಿ. ಹೀಗಿದ್ದರೂ ಮುಸಲ್ಮಾನರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸ್ಪರ್ದೆಯ ಹಿಂದಿನ ದುರುದ್ದೇಶದ ಬಗ್ಗೆ ಅನುಮಾನಗಳು ಮೂಡುತ್ತದೆ.
ಹೆಣ್ಣುಮಕ್ಕಳ ವಿವಿಧ ಭಂಗಿಯ ಫೋಟೋಗಳನ್ನು ಯಾವುದೇ ಗುರುತು ಪರಿಚಯವಿರದ ವ್ಯಕ್ತಿಗಳು ನಡೆಸುವ ಸ್ಪರ್ಧೆಗೆ ಕಳುಹಿಸುವ ಫೋಟೋಗಳು ಅಶ್ಲೀಲ ಪೇಜ್ ಅಥವಾ ಫೇಕ್ ಅಕೌಂಟ್ ಗಳಲ್ಲಿ ಬಳಕೆಯಾಗುವುದಿಲ್ಲ ಎಂದು ಏನೂ ಖಾತರಿ, ಅದು ದುರ್ಬಳಕೆ ಆದರೆ ಅದಕ್ಕೆ ಯಾರು ಹೊಣೆ. ಇದರಿಂದ ಅನಾಹುತವೇ ಹೊರತು ಯಾರಿಗೂ ಯಾವುದೇ ಲಾಭವಿಲ್ಲ. ಆದುದರಿಂದ ಮೊಬೈಲ್ ಗ್ಯಾರೇಜ್ ಸುಳ್ಯ ಸಂಸ್ಥೆಯವರು ಫೇಸ್ಬುಕ್ ಮತ್ತು ಇನ್ಸ್ಟ್ರಾಗ್ರಾಮ್ ನಲ್ಲಿ ನಡೆಸುವ ಉದ್ದೇಶಿಸಿರುವ ಸ್ಪರ್ದೆಗೆ ಯಾವುದೇ ಅವಕಾಶ ಮಾಡಿಕೊಡದೇ, ಯಾವುದೇ ಇಲಾಖೆಯ ಪರವಾನಿಗೆ ಪಡೆಯದೇ ಸ್ಪರ್ಧೆಯನ್ನು ನಡೆಸುತ್ತಿರುವ ಮತ್ತು ಇದರಿಂದ ಸಾಮಾಜಿಕ ಸ್ವಾಸ್ಥ್ಯ ಮತ್ತು ಸುಳ್ಯದ ಸ್ವಾಸ್ಥ್ಯವನ್ನು ಹಾಳು ಮಾಡಲು ಕಾರಣಕರ್ತರಾಗಿರುವ ಮೊಬೈಲ್ ಗ್ಯಾರೇಜ್ ಸಂಸ್ಥೆಯ ಮಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಮುಂದೆ ಆಗಬಹುದಾದ ಅನಾಹುತ ತಪ್ಪಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕಾಗಿ ಮನವಿಯಲ್ಲಿ ಒತ್ತಾಯಿಸಿದೆ.