ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ದೇವಗಿರಿ ನಿವಾಸಿ ಪ್ರಸ್ತುತ ಮೂಡಬಿದಿರೆಯಲ್ಲಿ ನೆಲೆಸಿ ಬಸ್ಸು ಚಾಲಕನಾಗಿದ್ದ 41 ವರ್ಷದ ವ್ಯಕ್ತಿ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಇದರ ಮಧ್ಯೆ ಅವರ ಗಂಟಲದ್ರವ ಪರೀಕ್ಷೆ ನಡೆಸಿದ್ದು ಕೊರೋನ ಧೃಡ ಪಟ್ಟಿದ್ದು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.ನಿನ್ನೆ ಮರಣಹೊಂದಿದ ವ್ಯಕ್ತಿಯ ಸಂಬಂಧಿಕರು ಅಂತ್ಯಕ್ರಿಯೆ ನಡೆಸುವುದೆಂದು ತೀರ್ಮಾನಿಸಿದ್ದರು .ಅದರಂತೆ ಸರಕಾರದ ಎಲ್ಲಾ ನಿಯಮಗಳನ್ನು ಪೂರ್ತಿಗೊಳಿಸಿ ಶವವನ್ನು ದೇವಗಿರಿಗೆ ಆಂಬುಲೆನ್ಸ್ ಮೂಲಕ ತಂದಾಗ ಯಾರು ಕೂಡ ಸಂಬಂಧಿಕರು ಹತ್ತಿರ ಬಾರದೆ ಇದ್ದ ಸಂದರ್ಭದಲ್ಲಿ ಆಂಬುಲೆನ್ಸ್ ಡ್ರೈವರ್ ಎಸ್ಕೆ ಎಸ್ ಎಸ್ ಎಫ್ ವಿಖಾಯ ಜಿಲ್ಲಾ ನೇತಾರರಿಗೆ ತಿಳಿಸಿದಾಗ ತಕ್ಷಣ ವಿಖಾಯ ಜಿಲ್ಲಾ ಚಯರ್ಮ್ಯಾನ್ ಇಸ್ಮಾಯಿಲ್ ತಂಙಳ್ ,ಕನ್ವೀನರ್ ಆಸಿಫ್ ಕಬಕ ಉಪ್ಪಿನಂಗಡಿ ವಲಯ ವಿಖಾಯ ಕಾರ್ಯದರ್ಶಿ ಸಿದ್ದೀಕ್ ನೀರಾಜೆ ,ಸ್ತಳೀಯ ಅಜಿತ್ ಗಂಡಿಬಾಗಿಲು ಸಹಕರಿಸಿದರು .ಕೊರೋನದಿಂದ ಮರಣ ಹೊಂದಿದ ಕ್ರಿಶ್ಚಿಯನ್ ವ್ಯಕ್ತಿಯ ಶವ ಸಂಸ್ಕಾರ ಮಾಡಿ ಸಮುದಾಯಕ್ಕೆ ಮಾದರಿಯಾಗಿದ್ದಾರೆ ವಿಖಾಯ ಕಾರ್ಯಕರ್ತರು.
- Thursday
- November 21st, 2024