ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದವರಿಗೆ ಶಾಸಕ ಸಂಜೀವ ಮಠಂದೂರು ವಾರ್ ರೂಮ್ ಮೂಲಕ ಸುಮಾರು 30 ಸಾವಿರ ಕುಟುಂಬಗಳಿಗೆ ಅಗತ್ಯವಸ್ತುಗಳ ಆಹಾರದ ಪೊಟ್ಟಣ ವಿತರಣೆ ಮಾಡಿದರು. ಕೊರೊನಾ ಸೋಂಕಿನಿಂದ ಪುತ್ತೂರು ಜನತೆ ಮುಕ್ತವಾಗಬೇಕೆಂಬ ನಿಟ್ಟಿನಲ್ಲಿ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಆಯುರ್ವೇದಿಕ್ ಮಾತ್ರೆಗಳನ್ನು ಉಚಿತ ವಿತರಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಸುಳ್ಯದಲ್ಲಿ ಕೂಡ ವಿತರಣೆ ಮಾಡಲು ಅವಕಾಶವಿಲ್ಲವೇ? ಸುಳ್ಯಕ್ಕೆ ಆಯುರ್ವೇದಿಕ್ ಮಾತ್ರೆ ಸರಬರಾಜು ಆಗುವುದಿಲ್ಲವೇ? ಸುಳ್ಯದಲ್ಲಿ ವಾರ್ ರೂಮ್ ಎಲ್ಲಿ ?ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.