ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸುಳ್ಯದಲ್ಲಿಯೂ ಸಹ ಇಂದು ಲಾಕ್ ಡೌನ್ ಹೇರಲಾಗಿತ್ತು.
11 ಗಂಟೆ ತನಕ ಅಗತ್ಯ ವಸ್ತುಗಳಿಗ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸುಳ್ಯ ಪೊಲೀಸ್ ಠಾಣೆ ಸಮೀಪದ ಅಂಗಡಿಯೊಂದು ಸಂಜೆ ಸುಮಾರು 6.30 ರ ತನಕ ಅರ್ಧ ಬಾಗಿಲು ತೆರೆದಿದ್ದು, ವ್ಯಾಪಾರ ವಹಿವಾಟು ನಡೆಸುತ್ತಿತ್ತು.
ಇದನ್ನು ಗಮನಿಸಿದರೆ ಲಾಕ್ ಡೌನ್ ನಿಯಮಗಳಲ್ಲಿ ಸಮಾನತೆ ಇಲ್ಲವೇ ? ಅಥವಾ ಅಧಿಕಾರಿಗಳ ಪರ್ಮಿಷನ್ ಇದೆಯೇ ? ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಏನೇ ಆದರೂ ಸಂಬಂಧಪಟ್ಟವರು ಗಮನಹರಿಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಆಗ ಮಾತ್ರ ಸರಕಾರದ ಆದೇಶಿಸಿದ ಲಾಕ್ ಡೌನ್ ನ ಫಲಶ್ರುತಿ ಬರಬಹುದು. ಅಲ್ಲದೇ ಹೋದರೇ ಕಾಟಾಚಾರಕ್ಕೆ ಲಾಕ್ ಡೌನ್ ಮಾಡಿದಂತಾಗುವುದಿಲ್ಲವೇ?. ಜಿಲ್ಲೆಯಲ್ಲಿ ಇಂದು ಕೂಡ ಅತೀ ಹೆಚ್ಚು ಸೋಂಕಿತ ಪ್ರಕರಣ, ಮರಣ ಪ್ರಮಾಣ ದಾಖಲಾಗಿದೆ. ಸಮರ್ಪಕವಾಗಿ ಲಾಕ್ ಡೌನ್ ಆಗದೇ ಇದ್ದರೇ ಒಂದು ತಿಂಗಳು ಮುಂದುವರಿದರೂ ಅಚ್ಚರಿಯಿಲ್ಲ.
ಒಟ್ಟಿನಲ್ಲಿ ಖಾಕಿ ಪಡೆಯು ಲಾಟಿ ಹಿಡಿದು ಬುದ್ದಿ ಹೇಳದೇ ಹೋದರೇ ಜನರಿಗೆ ಬುಧ್ಧಿ ಬರುವುದು ಅನುಮಾನ ಎಂದೆನಿಸುತ್ತಿದೆ.