Ad Widget

ಸುಳ್ಯದ ಪ್ರಥಮ ಕೃಷಿ ಪರಿಕರದ ಮಳಿಗೆ ಭಾರತ್ ಆಗ್ರೋ 50 ವರ್ಷದ ಸಂಭ್ರಮ

ಸುಳ್ಯದ ಪ್ರಥಮ ಕೃಷಿ ಪರಿಕರಗಳ ಮಳಿಗೆ, ರೊ| ರಾಮಚಂದ್ರ ಪಿ. ಇವರ ಮಾಲಕತ್ವದಲ್ಲಿ 1974 ರಲ್ಲಿ ಸ್ಥಾಪಿತವಾದ ಭಾರತ್ ಆಗ್ರೋ ಸರ್ವಿಸಸ್ ಮತ್ತು ಸಪ್ಲೆಸ್ ಸಂಸ್ಥೆಗೆ ಐವತ್ತು ವರ್ಷ ತುಂಬಿದ ಪ್ರಯುಕ್ತ ಮಾರ್ಚ್ 07, 2024 ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ‘ಆಗ್ರೋ ಸುವರ್ಣ ಸಂಭ್ರಮ’ ನಡೆಯಲಿದೆ ಎಂದು ಆಗ್ರೋ ಸಂಸ್ಥೆಯ ಮಾಲಕರಾದ ರಾಮಚಂದ್ರ ಪಿ ತಿಳಿಸಿದರು.

. . . . . . . . .

ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ಮಾರ್ಚ್ 7 ರ ಅಪರಾಹ್ನ 3.30 ರಿಂದ ಚಾಲನೆಗೊಳ್ಳಲಿದೆ.

ಕೃಷಿಕರಿಗೆ ಅಗತ್ಯ ಮಾಹಿತಿಯ ‘ ಆಗ್ರೋ ಕೃಷಿ ಚಿಂತನ’:

ಅಪರಾಹ್ನ 3.30 ಕ್ಕೆ ಸರಿಯಾಗಿ ಭಾರತದ ಪ್ರಸಿದ್ಧ ಪರಿಸರ ತಜ್ಞ ಡಾ.ಆರ್.ಕೆ.ನಾಯರ್ ಇವರ ಅಧ್ಯಕ್ಷತೆಯಲ್ಲಿ ‘ಆಗ್ರೋ ಕೃಷಿ ಚಿಂತನೆ’ ಎಂಬ ಕಾರ್ಯಕ್ರಮ ನಡೆಯಲಿದ್ದು ನಾಡಿನ ಅನುಭವೀ ಕೃಷಿ ತಜ್ಞರಿಂದ ಕೃಷಿಯ ಬಗೆಗಿನ ವಿಶೇಷ ಮಾಹಿತಿ ಉಪನ್ಯಾಸ ನಡೆಯಲಿದೆ. ಸ್ವಯಂಚಾಲಿತ ನೀರಾವರಿ ವಿಧಾನದ ಬಗ್ಗೆ ಶ್ರೀ ಅನಂತ ರಾಮಕೃಷ್ಣ ಪೆರುವಾಯಿ, ಕನಿಷ್ಟ ನೀರಿನಲ್ಲಿ ಅಡಿಕೆ ಕೃಷಿ ಬಗ್ಗೆ ಶ್ರೀ ಪ್ರವೀಣ ಕೇಶವ ಮೈರುಗ ಕುರುಡಪದವು ಹಾಗೂ ಟ್ಯಾಂಕ್ ಗಳ ಬಳಕೆ – ಮಳೆ ಕೊಯ್ದು ವಿಷಯದ ಬಗ್ಗೆ ಶ್ರೀ ಮುರಳೀಧರ ಬಂಗಾರಡ್ಕ ಮಾತಾಡಲಿದ್ದಾರೆ. ವಿಶೇಷ ಕೃಷಿ ಚಿಂತನದಲ್ಲಿ ಪ್ರಕೃತಿ- ಯಂತ್ರ- ಬದುಕು ವಿಚಾರದಲ್ಲಿ ಡಾ.ಆರ್.ಕೆ.ನಾಯರ್ ಮಾತಾಡಲಿದ್ದಾರೆ. ಶ್ರೀ ಮಹೇಶ್ ಪುಚ್ಚಪ್ಪಾಡಿ ಹಾಗೂ ರಮೇಶ್ ದೇಲಂಪಾಡಿ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.

ಆಗ್ರೋ ಸುವರ್ಣ ಸಂಭ್ರಮದ ಉದ್ಘಾಟನೆ:

ಸಂಜೆ 5.00 ಗಂಟೆಗೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದ ಇವರ ಅಧ್ಯಕ್ಷತೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು|ಭಾಗೀರಥಿ ಎಸ್.ಮುರುಳ್ಯ ರವರು ಆಗ್ರೋ ಸುವರ್ಣ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಮೊಕೇಸರರಾದ ಡಾ.ಟಿ.ಹರಪ್ರಸಾದ್ ಶುಭಾಶಂಸನೆಗೈಯ್ಯಲಿದ್ದಾರೆ. ಇದೇ ಸಂದರ್ಭದಲ್ಲಿ ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ನಿರ್ದೇಶನದ ಆಗೋ ಸಾಕ್ಷ್ಯಚಿತ್ರವನ್ನು ರೋಟರಿ ಜಿಲ್ಲೆ 3181 ರ ಮಾಜಿ ಗವರ್ನರ್ ರೊ। ಸುರೇಶ್ ಚಂಗಪ್ಪ ಬಿಡುಗಡೆಗೊಳಿಸಲಿದ್ದಾರೆ. ಐವತ್ತು ವರ್ಷದ ಆಗ್ರೋ ಸಾಧನೆಯ ಅವಲೋಕವನ್ನು ಲಯನ್ಸ್ ಜಿಲ್ಲೆ 317-ಡಿ ಇದರ ಮಾಜಿ ಗವರ್ನರ್ ಆಗಿರುವ ಶ್ರೀ ಎಂ.ಬಿ.ಸದಾಶಿವ ಇವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾದ ಶ್ರೀ ಪಿ.ಬಿ.ಸುಧಾಕರ ರೈ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ರೊ| ಆನಂದ ಖಂಡಿಗೆ ಹಾಗೂ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪೂರ್ವಾಧ್ಯಕ್ಷರಾದ ಶ್ರೀ ನಿತ್ಯಾನಂದ ಮುಂಡೋಡಿಯವರು ಭಾಗವಹಿಸಲಿದ್ದಾರೆ. ನಿವೃತ್ತ ಮುಖ್ಯ ಶಿಕ್ಷಕರಾದ ಅಚ್ಚುತ ಅಟ್ಟೂರು ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

ಹಿರಿಯ ಸಾಧಕರಿಗೆ ಆಗ್ರೋ ಗೌರವ ಸನ್ಮಾನ:

ಆಗೋ ಸುವರ್ಣ ಸಂಭ್ರಮ ಉದ್ಘಾಟನಾ ಸಂದರ್ಭದಲ್ಲಿ ನಾಡಿನ ಐದು ಹಿರಿಯ ಸಾಧಕರಿಗೆ ಆಗ್ರೋ ಗೌರವ ಸನ್ಮಾನ ನೀಡಲಾಗುವುದು. ಪದ್ಮಶ್ರೀ ಪುರಸ್ಕೃತ ತೂಗು ಸೇತುವೆ ಸರದಾರ ಖ್ಯಾತಿಯ ಶ್ರೀ ಗಿರೀಶ್ ಭಾರದ್ವಾಜ್, ಗ್ರೀನ್ ಗೀರೋ ಆಫ್ ಇಂಡಿಯಾ ಖ್ಯಾತಿಯ ಗುಜರಾತ್ ನ ಡಾ. ಆರ್.ಕೆ.ನಾಯರ್, ಹಿರಿಯ ಪ್ರಗತಿಪರ ಕೃಷಿಕರಾದ ಶ್ರೀ ಸುಬ್ರಾಯ ಭಟ್ ಮಾಪಲ ತೋಟ, ಗೋಣಿಕೊಪ್ಪ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಎಂ. ಗೌರಿ ಶಂಕರ್ ಹಾಗೂ ಹಿರಿಯ ಕೃಷಿಕರಾದ ಸಂಪಾಜಿಯ ಶ್ರೀ ಶಂಕರ್ ಪ್ರಸಾದ್ ರೈ ಇವರುಗಳು ಗೌರವ ಸನ್ಮಾನಕ್ಕೆ ಭಾಜನರಾಗಿದ್ದಾರೆ.

ಆಗ್ರೋ ಸಾಂಸ್ಕೃತಿಕ ಸಂಜೆ: 160 ಕಲಾವಿದರಿಂದ ಸಾಂಸ್ಕೃತಿಕ ಕಲಾ ವೈಭವ:

ಪ್ರಸಿದ್ಧ ರಂಗ ನಿರ್ದೇಶಕ ಡಾ.ಜೀವನ್ ರಾಂ ಸುಳ್ಯರ ಸಂಯೋಜನೆಯಲ್ಲಿ ಸಂಜೆ 7.00 ಕ್ಕೆ ಎಸ್.ಡಿ.ಯಂ.ಶಿಕ್ಷಣ ಸಂಸ್ಥೆ ಉಜಿರೆ ಇಲ್ಲಿನ ಸುಮಾರು 160 ಕ್ಕಿಂತಲೂ ಹೆಚ್ಚು ಕಲಾವಿದರಿಂದ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದೆ. ಕೇರಳದ ಮೋಹಿನಿಯಾಟ್ಟಂ, ಗುಜರಾತ್ ನ ದಾಂಡಿಯಾ- ಗರ್ಭ ನೃತ್ಯ ಒರಿಸ್ಸಾದ ಒಡಿಸ್ಸಿ ಕರಾವಳಿಯ ಯಕ್ಷಗಾನ ಬ್ಯಾಲೆಟ್, ಭರತನಾಟ್ಯ ಶಿವತಾಂಡವ ರೂಪಕ, ಸ್ಪಾನಿಶ್ ಪ್ಲೆಮೆಂಕೋ ಕ್ರಿಯೇಟಿವ್ ಡ್ಯಾನ್ಸ್, ಸೆಮಿ ಕ್ಲಾಸಿಕಲ್ ಡ್ಯಾನ್ಸ್ ಕೇರಳದ ತೆಯ್ಯಂ ಆಧಾರಿತ ನರಸಿಂಹಾವತಾರ, ಶ್ರೀರಾಮ ಪಟ್ಟಾಭಿಷೇಕ ವಿಶೇಷ ನೃತ್ಯ ರೂಪಕ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲಾ ಕಾರ್ಯಕ್ರಮಗಳೂ ಸಮಯಕ್ಕೆ ಸರಿಯಾಗಿ ನಡೆಯಲಿದ್ದು ಕೃಷಿಕರು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಭಾರತ್ ಆಗ್ರೋ ಸರ್ವಿಸಸ್ ನ ಮಾಲಕರಾದ ರೊ| ಪಿ. ರಾಮಚಂದ್ರರವರು   ತಿಳಿಸಿದ್ದಾರೆ.
ರೊ| ಆನಂದ ಖಂಡಿಗ,  ರೊ| ಪ್ರಭಾಕರ ನಾಯರ್, ರೊ| ದಳ ಸುಬ್ರಾಯ ಭಟ್,  ಡಾ| ಜೀವನ್ ರಾಂ ಸುಳ್ಯ, ರೊ| ಡಾ. ಪುರುಷೋತ್ತಮ ಕೆ. ಜಿ. ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿಯಲ್ಲಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading