ದೇಶದಲ್ಲಿ ಕೊರೋನ ಮಹಾಮಾರಿ ಜನರ ಜೀವದೊಂದಿಗೆ ರುದ್ರ ತಾಂಡವ ವಾಡುತ್ತಿದೆ. ದಿನದಿಂದ ದಿನಕ್ಕೆ ಎಲ್ಲಾ ಕಡೆ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರು ಹೆಚ್ಚಾಗುತ್ತಲೇ ಇದ್ದಾರೆ. ರಾಜ್ಯ ದಲ್ಲಿ ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಈ ಮಹಾಮಾರಿ ಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಅಗತ್ಯ ಆರೋಗ್ಯ ಪರಿಕರಗಳನ್ನು ಒದಗಿಸುವಲ್ಲಿ ಮತ್ತು ಆಸ್ಪತ್ರೆ ಗಳಲ್ಲಿ ಬೆಡ್ ಗಳನ್ನು ಪೂರೈಸಲು ಪರಿಣಾಮ ಕಾರಿಯಾದ ಕ್ರಮ ಕೈಗೊಳ್ಳದೆ , ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸ ಕ್ಕೆ ತೆಗೆದುಕೊಂಡು ಅಗತ್ಯ ವ್ಯವಸ್ಥೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಮಂತ್ರಿ ಗಳು ಅಧಿಕಾರಿಗಳು ಈ ಸಂದರ್ಭದಲ್ಲಿಯೂ ಹಗರಣಗಳನ್ನು ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ನೆರೆ ರಾಜ್ಯ ಗಳನ್ನು ನೋಡಿ ಯಾರಾದರೂ ಕೊರೋನ ವಿರುದ್ಧ ಕ್ರಮ ಕೈಗೊಳ್ಳಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಸುಳ್ಯ ತಾಲೂಕಿನಲ್ಲಿಯೂ ಕೊರೋನ ಮಹಾಮಾರಿ ವಕ್ಕರಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಂಭವವಿದೆ ಮತ್ತು ಇದರಿಂದ ಸುಳ್ಯ ದ ಜನತೆ ಆತಂಕಕ್ಕೀಡಾಗಿದ್ದಾರೆ. ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನ ಕೇಸುಗಳು ದಾಖಲಾಗಿವೆ. ಅಲ್ಲದೆ ಸೀಲ್ಡೌನ್ ಸಹ ಮಾಡಿದ್ದಾರೆ. ಮಳೆಗಾಲ ವಾದ್ದರಿಂದ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು. ಆಸ್ಪತ್ರೆ ಗೆ ಹೋಗಲು ಅವಕಾಶ ಇಲ್ಲವಾದರೆ ಜನಸಾಮಾನ್ಯರ ಅವಸ್ಥೆ ಏನು? ಖಾಸಗಿ ಆಸ್ಪತ್ರೆಗಳು, ಖಾಸಗಿ ಕ್ಲಿನಿಕ್ ಗಳು ಅವೈಜ್ಞಾನಿಕ ರೀತಿಯಲ್ಲಿ ಬಡವರಿಂದ ಲೂಟಿ ಮಾಡುವ ವರದಿಗಳು ಕಂಡುಬರುತ್ತಿದ್ದು ಸುಳ್ಯ ತಾಲೂಕು ಆಡಳಿತ ಹಾಗೂ ಶಾಸಕ ಅಂಗಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಕೊರೋನ ಪ್ರಕರಣಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು ಕೂಡಲೇ ಎಚ್ಚೆತ್ತು ಕೊಂಡು ಅಗತ್ಯ ವ್ಯವಸ್ಥೆ ಮಾಡುವಲ್ಲಿ ಸಜ್ಜಾಗಬೇಕು ಎಂದು ಕಾಂಗ್ರೆಸ್ ಮಾಧ್ಯಮ ಸಂಯೋಜಕ ಭವಾನಿಶಂಕರ ಕಲ್ಮಡ್ಕ ಪತ್ರಿಕಾ ಹೇಳಿಕೆ ನೀಡಿದ್ದಾರೆ.
- Tuesday
- November 26th, 2024