ಸುಳ್ಯ ಸರ್ಕಾರಿ ಆಸ್ಪತ್ರೆಯ ಕೆಲವು ವೈದ್ಯರು ಮತ್ತು ನರ್ಸ್ ಗಳಿಗೆ ಕೋವಿಡ್ ಪಾಸಿಟಿವ್ ಬಂದ ಕಾರಣದಿಂದ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇದರಿಂದ ಸ್ವಾಭಾವಿಕವಾಗಿ ರೋಗಿಗಳಿಗೆ ಸಂಕಷ್ಟ ಎದುರಾಗಿದೆ.ಹಾಗೂ ಪ್ರಮುಖವಾಗಿ ಡಯಾಲಿಸಿಸ್ ಮಾಡುವ ರೋಗಿಗಳ ಬವಣೆ ಚಿಂತಾಜನಕವಾಗಿದೆ. ಸರ್ಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಗೆ ತೆರಳುವವರೆಲ್ಲರು ಬಡವರು ಆಗಿದ್ದಾರೆ.ಲಾಕ್ ಡೌನ್ ಕಾರಣದಿಂದ ಅನೇಕ ಮಂದಿ ಕೆಲಸ ಇಲ್ಲದೆ ಅತಂತ್ರರಾಗಿದ್ದಾರೆ ಮತ್ತು ತುಂಬಾ ಮಂದಿ ಕಷ್ಟದಲ್ಲಿದ್ದಾರೆ.ಹಾಗಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಯ ಸೀಲ್ ಡೌನ್ ತೆರವುಗೊಳ್ಳುವವರೆಗೆ ಡಯಾಲಿಸಿಸ್ ರೋಗಿಗಳಿಗೆ ಸುಳ್ಯದಲ್ಲೇ ಬೇರೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರಾದ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ ರವರ ನೇತೃತ್ವದಲ್ಲಿ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೆ ತಹಶಿಲ್ದಾರರು ಪೂರಕವಾಗಿ ಸ್ಪಂದಿಸಿ 13 ನೇ ತಾರೀಖಿನಿಂದ ಸರ್ಕಾರದ ವತಿಯಿಂದಲೇ ಉಚಿತ ಡಯಾಲಿಸಿಸ್ ಮತ್ತು ಕೋವಿಡ್ ಟೆಸ್ಟ್ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕಾರ್ಯದರ್ಶಿ ಮುಸ್ತಫಾ ಎಂ.ಕೆ,ಸುಳ್ಯ ನಗರ ಸಮಿತಿ ಉಪಾಧ್ಯಕ್ಷರಾದ ಇಕ್ಬಾಲ್ ಸುಳ್ಯ,
ಯೂತ್ ಬ್ರಾಂಚ್ ಸದಸ್ಯ ರಿಝ್ವಾನ್ ಪಿಎಫ್ಐ ಸುಳ್ಯ ಡಿವಿಷನ್ ಅಧ್ಯಕ್ಷರಾದ ಫೈಝಲ್ ಬೆಳ್ಳಾರೆ ಉಪಸ್ಥಿತರಿದ್ದರು