ಸುಳ್ಯ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಓರ್ವ ವೈದ್ಯರಿಗೆ ಕರೋನ ವೈರಸ್ ಸೋಂಕು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ನಿಲ್ಲಿಸಿ ಅವರು ತೀವ್ರ ಸಂಕಷ್ಟ ಕ್ಕೆ ಒಳಗಾಗಿರುತ್ತಾರೆ. ಡಯಾಲಿಸಿಸ್ ಒದಗಿಸಲು ಹೊರ ಗುತ್ತಿಗೆದಾರ ಸಂಸ್ಥೆಯ ವತಿಯಿಂದ ಬದಲಿ ವ್ಯವಸ್ಥೆ ಮಾಡಿಸಬೇಕಾದ ಜನಪ್ರತಿನಿಧಿಗಳು ಈ ವಿಚಾರ ತಿಳಿದುಕೊಂಡೇ ಇಲ್ಲ. ಮೂತ್ರ ಪಿಂಡದ ಸಮಸ್ಯೆಯವರ ಗೋಳು ಕೇಳಿದವರಿಲ್ಲ. ಅದಕ್ಕಾಗಿ ಇಂದು ಹೊರಗುತ್ತಿಗೆದಾರರನ್ನು ನೇಮಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮಾನ್ಯ ಜಿಲ್ಲಾಧಿಕಾರಿ ಗಳಿಗೆ ಮಾತನಾಡಿ ತುರ್ತು ವ್ಯವಸ್ಥೆ ಮಾಡಲು ಕೋರಿದ್ದೇನೆ. ಮಾನ್ಯ ಜಿಲ್ಲಾಧಿಕಾರಿ ಗಳು ತಕ್ಷಣ ಕ್ರಮ ಕೈಗೊಳ್ಳು,ವ ಭರವಸೆ ನೀಡಿದ್ದಾರೆ. ಸಮಸ್ಯೆಗಳ ಪರಿಹಾರದ ಭರವಸೆ ಮೂಡಿದೆ. ಎಂದು ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Saturday
- November 2nd, 2024