ಸುಳ್ಯ ಕೆವಿಜಿ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 52 ವರ್ಷದ ವಸಂತ ಎಂಬವರು ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ವರದಿಯಾಗಿದೆ.
ಇವರು ಕೆಲ ದಿನಗಳ ಹಿಂದೆ ಕುಡಿತದ ಚಟ ಹೊಂದಿದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಆತ್ಮಹತ್ಯೆ ಮಾಡಿಕೊಂಡಿದ್ದು ಇದೀಗ ಮೃತ ದೇಹವನ್ನು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಮೃತರು ಪತ್ನಿ ಗೀತಾ, ಪುತ್ರ ನಾಗೇಶ್, ಪುತ್ರಿಯರಾದ ನಳಿನಿ ಹಾಗೂ ನಯನರವರನ್ನು ಅಗಲಿದ್ದಾರೆ.