ಆಕ್ಷೇಪಣೆಯಿದೆ ಎಂದು ಸುಳ್ಳು ಕಾರಣ ನೀಡಿ ಪ್ರಸ್ತಾವನೆಯಲ್ಲಿರುವ ಸಡಕ್ ರಸ್ತೆಯನ್ನು ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಜುಲೈ 5 ರಂದು ಕೂಟೇಲಿನಲ್ಲಿ ಸಭೆ ನಡೆಸಿ ಚರ್ಚಿಸಿದ್ದರು. ಪ್ರದಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 2015 ರಲ್ಲಿ ಮನವಿ ಸಲ್ಲಿಸಲಾಗಿತ್ತು .ಆ ಸಂದರ್ಭದಲ್ಲಿ ಲೊಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಅಂಗಾರ ಈ ಪ್ರದೇಶದ ರಸ್ತೆ ಹಾದುಹೋಗುವ ಸ್ಥಳ ಪರಿಶೀಲನೆ ಮಾಡಿಸಿ ಉರವರಿಂದ ಅರ್ಜಿ ಸಲ್ಲಿಸಲಾಗಿತ್ತು.
ಈ ರಸ್ತೆಯ ಭಾಗದಲ್ಲಿ ಯಾರು ಕೂಡ ರಸ್ತೆ ಅಭಿವೃದ್ಧಿ ಯ ಆಕ್ಷೇಪಣೆ ಸಲ್ಲಿಸಿಲ್ಲ, ಯಾರೋ ಸುಳ್ಳು ಆಕ್ಷೇಪಣೆ ಸೃಷ್ಟಿಸಿರಬಹುದೆಂದೂ, ಈ ರಸ್ತೆಯನ್ನೆ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿ ಪಡಿಸುವಂತೆ ಸಂಸದರಿಗೆ ಒತ್ತಾಯ ಮಾಡಿದ್ದರು. ಆದರೂ ಇಲಾಖೆಗೆ ಯಾರು ಆಕ್ಷೇಪಣೆ ಮಾಡುತ್ತಿಲ್ಲ ಎನ್ನುವುದರ ಬಗ್ಗೆ ಲಿಖಿತ ದಾಖಲೆ ಬೇಕಾಗಿರುವುದರಿಂದ ಈ ಬಗ್ಗೆ ಚರ್ಚಿಸಲು ಪುನಃ ಜುಲೈ 9 ರಂದು ಅರಂಬೂರು ಭಜನಾಮಂದಿರದಲ್ಲಿ ಗ್ರಾಮಸ್ಥರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಸ್ತೆಯ ಬದಿಯ ಜಾಗದವರ ಒಪ್ಪಿಗೆ ಪತ್ರ ಪಡೆದು ಸಂದದರು ಹಾಗೂ ಇಲಾಖೆಗೆ ಕಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜುಲೈ 5 ಹಾಗೂ ಜುಲೈ 9 ರಂದು ನಡೆದ ಸಭೆಯಲ್ಲಿ ಕುಕ್ಕುಂಬಳ -ಅಂಜಿಕಾರು -ಪಾಲಡ್ಕ -ಮಜಿಗುಂಡಿ -ಅರಂಬೂರು – ನೆಡ್ಚಿಲು -ಕೂಟೆಲು -ಬಾಗದ ಜನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೂಟೆಲಿನಲ್ಲಿ ಕೂಡ ಸಭೆ ಸೇರಿದ್ದರು .
ಈ ಎರಡು ಸಭೆಗಳಲ್ಲಿ ಶ್ರೀಪತಿ ಭಟ್ ಮಜಿಗುಂಡಿ ,ಬಾಲಕೃಷ್ಣ ಆಳ್ವ ಅರಂಬೂರು,ಎನ್.ಎ. ಜಯರಾಮ ನೆಡ್ಚಿಲು, ಸೂರ್ಯ ಅಂಜಿಕಾರು , ಶಿವಶಂಕರ ಪಾಲಡ್ಕ , ಮಿಲಿಟರಿ ನಾರಾಯಣ ಅರಂಬೂರು , ಉಕ್ರಪ್ಪ ನೆಡ್ಚಿಲು, ಕೊರಗಪ್ಪ ಮಾಸ್ತರ್ ನೆಡ್ಚಿಲು, ಗೊಪಾಲಕೃಷ್ಣ ಕೂಟೆಲು, ಪುಷ್ಪರಾಜ ಮಜಿಗುಂಡಿ , ಮಹೇಶ್ ಪಡ್ಪು , ಕೃಷ್ಣ ಪ್ರಶಾದ್ ಬಡಿಕಾನ, ಉದಯನಾರಾಯಣ ಭಟ್ ಮಜಿಗುಂಡಿ ,ಜಗದೀಶ್ ಸರಳಿಕುಂಜ, ಕೃಷ್ಣ ನಾಯಕ್ ಅರಂಬೂರು, ಗಂಗಾಧರ್ ನೆಡ್ಚಿಲು,ಯೋಗೀಶ ಅರಂಬೂರು, ಈಶ್ವರ ಮೂಲ್ಯ ಮಜಿಗುಂಡಿ, ಉಮೇಶ ನಾಯ್ಕ್ ಮತ್ತಿತರರು ಭಾಗವಹಿಸಿದ್ದರು.
ಈ ರಸ್ತೆ ಕುಕ್ಕುಂಬಳ ಅರಂಬೂರು ಆಗಿ ಅಲೆಟ್ಟಿ ಸುಮಾರು 9 ಕಿ ಮೀ ಉದ್ದವಿದ್ದು ಎಲ್ಲೂ ಕೂಡಾ ಡಾಮರ್ ಅಥವಾ ಕಾಂಕ್ರೀಟ್ ರಸ್ತೆ ನಿರ್ಮಾಣ ವಾಗಿಲ್ಲ. ಅಲೆಟ್ಟಿ ಗ್ರಾಮದಲ್ಲಿ ಸುಮಾರು 1500 ಕ್ಕಿಂತ ಹೆಚ್ಚು ಜನರಿದ್ದು 250 ಕ್ಕಿಂತ ಹೆಚ್ಚು ಮನೆಗಳಿವೆ. ಇದರಲ್ಲಿ 100 ಕ್ಕಿಂತ ಹೆಚ್ಚು ಪರಿಶಿಷ್ಟ ಪಂಗಡದವರ ಮನೆಗಳಿವೆ.