ಕೊರೊನ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಯುವಜನ ಸಂಯುಕ್ತ ಮಂಡಳಿ ಮಹಾ ಸಭೆ ಮುಂದೂಡಿಕೆಯಾಗಿದೆ.
ಸುಳ್ಯ ಸರಕಾರಿ ಆಸ್ಪತ್ರೆಯ 6 ಜನ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗಲಿರುವುದು ಇಂದು ದೃಢಪಟ್ಟಿರುತ್ತದೆ. ತಾಲೂಕಿನಲ್ಲಿ ರೋಗ ಭೀತಿ ಹೆಚ್ಚಿರುವುದರಿಂದ ಜುಲೈ 11 ಶನಿವಾರ ದಂದು ನಿಗದಿಯಾಗಿದ್ದ ಮಂಡಳಿಯ ಮಹಾಸಭೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಅಧ್ಯಕ್ಷ ರಾದ ಶಂಕರ ಪೆರಾಜೆ ತಿಳಿಸಿದ್ದಾರೆ.
- Friday
- November 1st, 2024