ಡೆಂಗ್ಯೂ ಮತ್ತು ಮಹಾಮಾರಿ ಕೊರೊನಾ ಹರಡುತ್ತಿದ್ದು ನ. ಪಂ ವ್ಯಾಪ್ತಿಯಲ್ಲಿ ಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡಬೇಕಾಗಿದೆ. ಈ ಹಿಂದೆ ಅಳವಡಿಸಿದ ಪೈಪ್ ಕಳಪೆ ಮಟ್ಟದ್ದಾದ ಕಾರಣ ಹಲವೆಡೆ ಪೈಪ್ ಒಡೆದು ಹೋಗಿರುತ್ತದೆ.ನೀರಿನ ಸಂಪರ್ಕದ ಒತ್ತಡ ಹೆಚ್ಚಾಗುವುದರಿಂದ ಸಂಪರ್ಕ ಸ್ಥಳ (ಜ್ಯೋಂಟ್ )ದಲ್ಲಿ ಪೈಪ್ ಒಡೆಯುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಆದರೆ ನೀರಿಗಾಗಿ ಸುಳ್ಯದ ಜನತೆ ನ. ಪಂ.ನ್ನು ಆಶ್ರಯಿಸಿದ್ದಾರೆ. ಆದ್ದರಿಂದ ನ.ಪಂ.ಸದಸ್ಯರು ಮತ್ತು ಆಡಳಿತಾಧಿಕಾರಿಗಳು ಮುತುವರ್ಜಿ ವಹಿಸಿ ಶುದ್ಧವಾದ ಕುಡಿಯುವ ನೀರು ಮತ್ತು ಪರಿಸರವನ್ನು ಸ್ವಚ್ಚವಾಗಿಡುವಲ್ಲಿ ಕ್ರಮ ಕೈಗೊಳ್ಳ ಬೇಕಾದ ಅನಿವಾರ್ಯತೆ ಇದೆ ಎಂದು ಸುಳ್ಯದ ನಾಗರಿಕರು ಒತ್ತಾಯಿಸಿದ್ದಾರೆ.
- Tuesday
- November 26th, 2024