ದಿನದಿಂದ ದಿನಕ್ಕೆ ದೇಶದಲ್ಲಿ, ರಾಜ್ಯದಲ್ಲಿ , ಜಿಲ್ಲೆಯಲ್ಲಿ , ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಕ್ಯೆ ಹೆಚ್ಚಳವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ , ಜಿಲ್ಲಾಡಳಿತ , ತಾಲೂಕು ಆಡಳಿತ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಲ್ಲದೆ ರಾಜ್ಯ ಸರಕಾರ ಕೊರೊನ ಪ್ರಕರಣದ ಅವ್ಯವಹಾರದಲ್ಲಿ ತೊಡಗಿರುವುದು ನಾಚಿಕೆಯ ಸಂಗತಿ . ಇದರ ಸಮಗ್ರ ತನಿಖೆಯಾಗಬೇಕು . ಕೆಲವು ದಿನಗಳ ಹಿಂದೆ ಸುಳ್ಯದಲ್ಲಿ ಕೊರೊನ ಪ್ರಕರಣ ಜಾಸ್ತಿಯಾಗುತ್ತಿದ್ದು ಓರ್ವ ಮಹಿಳೆ ಕೂಡ ನಿಧನ ಹೊಂದಿರುವುದು ಕಂಡು ಬಂದಿದೆ . ಈ ಬಗ್ಗೆ ಮಾನ್ಯ ಶಾಸಕರಾಗಲಿ , ತಾಲೂಕು ಆಡಳಿತವಾಗಲಿ ಇದರ ಬಗ್ಗೆ ಏನು ಕ್ರಮ ತೆಗೆದುಕೊಂಡಿದೆ ಎಂಬುದು ತಿಳಿಯುತ್ತಿಲ್ಲ . ತಾಲೂಕು ಅರೋಗ್ಯ ಕೇಂದ್ರಕ್ಕೆ ಎಷ್ಟು ಬಾರಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದೀರಿ ?ಆರೋಗ್ಯಾಧಿಕಾರಿಗಳ , ತಾಲೂಕು ಆಡಳಿತದ ,ಆಶಾ ಕಾರ್ಯಕರ್ತೆಯರ , ಕೊರೊನ ವಾರಿಯರ್ ಗಳ ಸಭೆ ಎಷ್ಟು ಕರೆದಿದ್ದೀರಿ ಗೊತ್ತಿಲ್ಲ. ಸುಳ್ಯ ತಾಲೂಕಿನಲ್ಲಿ ಮಾನ್ಯ ಶಾಸಕರು , ಜನಪ್ರತಿನಿದಿಗಳು , ಅಧಿಕಾರಿಗಳು ಸರಿಯಾಗಿ ಕೊರೊನ ನಿಯಂತ್ರಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು . ಸಮುದಾಯಕ್ಕೆ ಹಬ್ಬದಂತೆ ನೋಡಿಕೊಳ್ಳಬೇಕು ಮತ್ತು ಕೊರೊನ ವಾರಿಯರ್ ಗೆ ಸಲಕರಣೆ ನೀಡಬೇಕು . ವಿಫಲವಾದರೆ ಅದಕ್ಕೆಲ್ಲ ತಾಲೂಕು ಆಡಳಿತ , ಮಾನ್ಯ ಶಾಸಕರು , ಹೊಣೆಗಾರರಾಗಬೇಕಾಗುತ್ತದೆ . ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಗೌಡ ಕೊಯಿಂಗಾಜೆ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ
- Friday
- November 1st, 2024