ಗೌರವಧನ ಹೆಚ್ಚಳಕ್ಕೆ ಅಗ್ರಹಿಸಿ ಜು. 10 ರಿಂದ ಆಶಾ ಕಾರ್ಯಕರ್ತೆಯರ ರಾಜ್ಯವ್ಯಾಪಿ ಮುಷ್ಕರಕ್ಕೆ ಮುಂದಾಗಿದ್ದು, ಕೋವಿಡ್ ಕೆಟ್ಟ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆ ನೋವು ಶುರುವಾಗಿದೆ. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಈ ಕುರಿತು ಮಾಹಿತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೋವಿಡ್ ಕಾಲದಲ್ಲಿ ಕೇಂದ್ರ ಸರಕಾರ ನೀಡುತ್ತಿರುವ ಮಾಸಿಕ ಎರೆಡು ಸಾವಿರ ಪ್ರೋತ್ಸಾಹ ಧನ ಕಳೆದ ಮೂರು ತಿಂಗಳಿಂದ ಬಂದಿಲ್ಲ, ಇದಲ್ಲದೇ ನಿರಂತರವಾಗಿ ಮೂರು ತಿಂಗಳಿಂದ ಆಶಾ ಕಾರ್ಯಕರ್ತೆಯರು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಅವರಿಗೆ ಈ ಸನ್ಮಾನ, ಹೂವಿನ ಸುರಿಮಳೆ ಅಗತ್ಯವಿಲ್ಲ. ಅದರಿಂದ ಹೊಟ್ಟೆ ತುಂಬುವುದಿಲ್ಲ. ನಮ್ಮ ಮೇಲೆ ಗೌರವ ಇದ್ದರೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
42 ಸಾವಿರ ಆಶಾ ಕಾರ್ಯಕರ್ತೆಯರಲ್ಲಿ 18-19 ಸಾವಿರ ಆಶಾ ಕಾರ್ಯಕರ್ತೆಯರಿಗೆ ₹3 ಸಾವಿರ ಸಹಾಯಧನ ಇನ್ನೂ ಮುಟ್ಟಿಲ್ಲ ಅಂತ ಆರೋಪಿಸಿದರು.
- Monday
- November 25th, 2024