ಕೊರೊನಾ ಲಾಕ್ಡೌನ್, ಏರಿಕೆಯಾಗುತ್ತಿರುವ ಪೆಟ್ರೋಲ್ – ಡೀಸೆಲ್ ಬೆಲೆ ಮೊದಲಾದ ಕಾರಣಗಳಿಂದ ಈಗಾಗಲೇ ಕುಸಿತ ಕಂಡಿದ್ದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರ ಮಧ್ಯೆ ಮತ್ತೊಂದು ಹೊರೆ ಹೊರಲು ಸಾರ್ವಜನಿಕರು ಸಿದ್ಧರಾಗಬೇಕಿದೆ.
ಹೌದು, ದೇಶದ ಟೆಲಿಕಾಂ ಕಂಪನಿಗಳು ದರ ಹೆಚ್ಚಳಕ್ಕೆ ಸಿದ್ಧತೆ ನಡೆಸಿವೆ ಎನ್ನಲಾಗಿದ್ದು, ಆರು ತಿಂಗಳ ಬಳಿಕ ಹಾಗೂ ಮುಂದಿನ 18 ತಿಂಗಳ ಅವಧಿಯಲ್ಲಿ ಒಟ್ಟು ಎರಡು ಹಂತಗಳಲ್ಲಿ ದರ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಆಪರೇಟರ್ ಗಳ ಆದಾಯ ಕುಸಿತ ಹಾಗೂ ಕೊರೊನಾ ಸೋಂಕಿನ ಪರಿಣಾಮದಿಂದಾಗಿ ತೀವ್ರ ನಷ್ಟವನ್ನು ಅನುಭವಿಸುತ್ತಿರುವ ಟೆಲಿಕಾಂ ಕಂಪನಿಗಳಿಗೆ ದರ ಹೆಚ್ಚಳ ಮಾಡುವುದು ಅನಿವಾರ್ಯ ಎನ್ನಲಾಗಿದ್ದು, ಆದರೆ ಪ್ರಸ್ತುತ ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿರುವ ಕಾರಣ ಇದನ್ನು ಕೆಲ ತಿಂಗಳುಗಳ ಮಟ್ಟಿಗೆ ಮುಂದೂಡಲಾಗಿದೆ ಎನ್ನಲಾಗಿದೆ.