ಪಂಜದ ಪಲ್ಲೋಡಿ ಕಾಲಾನಿಯಲ್ಲಿರುವ ಮನೆಯೊಂದರಲ್ಲಿ 4 ದಿನದಿಂದ ರಾಜು ಎಂಬುವರು ಮಲಗಿದ್ದಲ್ಲೇ ಇರುವುದನ್ನು ಸ್ಥಳೀಯ ಪಂಚಾಯತ್ ಸದಸ್ಯೆ ನಿರ್ಮಲ ಗಮನಿಸಿ ಪಂಚಾಯತ್ ಆಡಳಿತಾಧಿಕಾರಿ ಗೆ ತಿಳಿಸಿದರು. ಕೂಡಲೇ ಆಡಳಿತಾಧಿಕಾರಿ ದೇವಿಪ್ರಸಾದ್ ಕಾನತ್ತೂರು ಪಂಜ ಸರಕಾರಿ ಆಸ್ಪತ್ರೆ ವೈಧ್ಯರಿಗೆ ತಿಳಿಸಿದರು. ಪಿಡಿಓ ಪುರುಷೋತ್ತಮ ಎಂ. , ಡಾ. ಮಂಜುನಾಥ್ ಜೊತೆ ಸ್ಥಳಕ್ಕೆ ತೆರಳಿ ಅಸೌಖ್ಯದಿಂದ ಮಲಗಿದ್ದವ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿರುತ್ತಾರೆ. ಅತ ಮನೆಯಲ್ಲಿ ಬಿದ್ದು ಪೆಟ್ಟಾಗಿದ್ದಿರಬಹುದೆಂದು ತಿಳಿದುಬಂದಿದೆ.
- Thursday
- November 21st, 2024