Ad Widget

ಸುಳ್ಯ ಸರ್ಕಾರಿ ಆಸ್ಪತ್ರೆಯ ಐಸಿಯು ಘಟಕಕ್ಕೆ ಕೊರೋನಾ ಮಹಾಮಾರಿ ಕಾಲು ಇಟ್ಟಿತೇ? – ನಿನ್ನೆ ಪ್ರಥಮ ಬಲಿ

ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ , ಹೃದಯಾಘಾತದಿಂದ ಮೃತಪಟ್ಟ ಸುಳ್ಯದ ಕೆರೆಮೂಲೆ ನಿವಾಸಿ ರೋಟರಿ ಶಾಲೆ ಸುಂದರಿಯವರ ಕೊರೋನ ಪರೀಕ್ಷೆಯ ವರದಿ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ . ಅವರು ವಾರದ ಹಿಂದೆ ಅಸೌಖ್ಯಕ್ಕೊಳಗಾಗಿ ಸುಳ್ಯದ ಸರಕಾರಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ದಾಖಲಾಗಿದ್ದರು ಎಂದು ಹೇಳಲಾಗುತ್ತಿದೆ.. ಅದೇ ಸಮಯದಲ್ಲಿ ಆ ವಾರ್ಡಿನಲ್ಲಿ ಸೋಣಂಗೇರಿಯ ವೃದ್ಧರೊಬ್ಬರು ಕೂಡ ದಾಖಲಾಗಿದ್ದು ಅವರು ಅಲ್ಲಿಂದ ಮಂಗಳೂರಿಗೆ ಚಿಕಿತ್ಸೆಗೆ ಹೋಗಿದ್ದರು . ಮಂಗಳೂರಿನಲ್ಲಿ ಆ ವೃದ್ಧರಿಗೆ ಕೊರೋನಾ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು . ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೊರೋನಾ ಪರೀಕ್ಷೆ ನಡೆಸಿದಾಗ ಒಬ್ಬ ನರ್ಸ್ ಗೆ ಸೋಂಕು ದೃಢಪಟ್ಟಿತ್ತು . ಅದೇ ನರ್ಸ್ ಐಸಿಯುನಲ್ಲಿ ದಾಖಲಾಗಿದ್ದ ಸುಂದರಿಯವರಿಗೂ ಚಿಕಿತ್ಸೆ ನೀಡುತ್ತಿದ್ದರೆನ್ನಲಾಗಿದೆ . ಸುಂದರಿಯವರನ್ನು ಕೂಡ ಎರಡು ದಿನಗಳ ಹಿಂದೆ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು ಅಲ್ಲಿ ಕೊರೋನ ಪರೀಕ್ಷೆಗೆ ಗಂಟಲ ದ್ರವ ತೆಗೆಯಲಾಗಿದ್ದು , ವರದಿ ಬರುವ ಮೊದಲೇ ಸುಂದರಿಯರು ಹೃದಯಾಘಾತದಿಂದ ಮೃತಪಟ್ಟಿದ್ದರು . ಕೊರೊನಾ ಪರೀಕ್ಷೆಯ ವರದಿ ಬರಲು ಬಾಕಿ ಇದ್ದುದರಿಂದ ಅವರ ಮೃತದೇಹವನ್ನು ಬಿಟ್ಟು ಕೊಟ್ಟಿರಲಿಲ್ಲ . ನಿನ್ನೆ ರಾತ್ರಿ ಕೊರೋನಾ ಪರೀಕ್ಷೆಯ ವರದಿ ಬಂದಿದ್ದು , ಅದು ಪಾಸಿಟಿವ್ ಆಗಿತ್ತೆಂದು ಅವರ ಮನೆಯ ಮೂಲಗಳಿಂದ ಸುದ್ದಿಗೆ ಗೊತ್ತಾಗಿದೆ . ಈ ಹಿನ್ನೆಲೆಯಲ್ಲಿ ಸುಂದರಿಯವರ ಮೃತದೇಹದ ಅಂತ್ಯಕ್ರಿಯೆ ಮಂಗಳೂರಿನಲ್ಲಿಯೇ ನಡೆಯಲಿದೆ ಎಂದು ತಿಳಿದುಬಂದಿದೆ.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!