Ad Widget

ಸುಬ್ರಾಯ ಚೊಕ್ಕಾಡಿಯವರಿಗೆ 80 ರ ಸಂಭ್ರಮ- ಸನ್ಮಾನ

*ತಾನು ಅನುಭವಿಸಿದ ಕಠಿಣ  ಸನ್ನಿವೇಶಗಳನ್ನು ಸೃಜನಶೀಲ ವಾಗಿ ಅಭಿವ್ಯಕ್ತಿಸಿದ ಕವಿ ಶ್ರೀ ಸುಬ್ರಾಯ ಚೊಕ್ಕಾಡಿಯವರು.ಬರೆಯಲು ಆರಂಭಿಸಿದಾಗಿನ ಹೊಸತನ-ಫ್ರೆಶ್ ನೆಸ್ ಈಗಲೂ ಅವರ ಕವಿತೆಗಳಲ್ಲಿ ಕಾಣುತ್ತದೆ.ಪರಿಸರದ ನಡುವಿನ  ಜೀವನ ಅವರನ್ನು ಮತ್ತಷ್ಟು ವಿದ್ವತ್ ಪೂರ್ಣವಾಗಿಸಿತು.ಹಿರಿಯರು ಕಿರಿಯರೆನ್ನದೆ ಎಲ್ಲರನ್ನು ಅವರು ತಲುಪಿದರು.ವರುಷ 80 ಆದರೂ ಈಗಲೂ ಅದೇ ಮುಗ್ಧತೆ ಅವರಲ್ಲಿದೆ.ತನ್ನ ಮನೆಯಂಗಳದ ಅನುಭವಗಳನ್ನು ಕಾವ್ಯ ರೂಪಕ್ಕಿಳಿಸಿದ ಚೊಕ್ಕಾಡಿಯವರಿಗೆ ಸಿಗಬೇಕಾದ ಗೌರವ ಇನ್ನೂ ಸಿಕ್ಕಿಲ್ಲ.ಅವರು ತನಗಾಗಿ ಏನನ್ನೂ ಹಂಬಲಿಸಲಿಲ್ಲ.ನಾವೆಲ್ಲರೂ ಈ ಬಗ್ಗೆ ಪ್ರಯತ್ನಿಸಿಬೇಕಾಗಿದೆ.” ಎಂದು ಹಿರಿಯ ಬರಹಗಾರ ,ಜಾನಪದ ವಿದ್ವಾಂಸರ,ಉಪನ್ಯಾಸ ಡಾ.ಪೂವಪ್ಪ ಕಣಿಯೂರು ಅಭಿಪ್ರಾಯಿಸಿದರು.*       

. . . . .

*ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಫ್ರೆಂಡ್ಸ್ ಕ್ಲಬ್ ಪೈಲಾರು(ರಿ.) ಇವರ ಸಹಯೋಗದಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರ 80 ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿಆಯೋಜಿಸಿದ್ದ ಸುಬ್ರಾಯ ಚೊಕ್ಕಾಡಿ ಬದುಕು, ಬರಹ-ಒಂದು ಅವಲೋಕನ ಕಾರ್ಯಕ್ರಮದಲ್ಲಿ ಚೊಕ್ಕಾಡಿಯವರ ಕಲ್ಲು ಮಂಟಪ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.*         *ಯುವ ಬರಹಗಾರ-ಶಿಕ್ಷಕ ಅರವಿಂದ ಚೊಕ್ಕಾಡಿ ಮಾತನಾಡಿ “ಸುಬ್ರಾಯ ಚೊಕ್ಕಾಡಿಯವರು ಆಕಾಶಕ್ಕೆ ಲಗ್ಗೆ ಇಟ್ಟ ಪಾರಿಜಾತ.ಸಣ್ಣ ಹೂವು ಪಾರಿಜಾತದ ಪರಿಮಳ ಹೇಗೆ ಪಸರಿಸುತ್ತದೆಯೋ ಹಾಗೆ ಚೊಕ್ಕಾಡಿಯಿಂದ ಸುಬ್ರಾಯ ಚೊಕ್ಕಾಡಿಯವರ ಕಂಪು ದೇಶ-ವಿದೇಶಗಳಿಗೆ ಹರಡಿದೆ. ವಿದ್ವತ್ ಕಾವ್ಯ ಮತ್ತು ಖುಷಿಯ ಪದ್ಯ ಎರಡನ್ನೂ ಬರೆದ ಚೊಕ್ಕಾಡಿಯವರು ಎಲ್ಲ ಬೌದ್ಧಿಕ ವರ್ಗಕ್ಕೂ ತಲುಪುತ್ತಾರೆ.ಆಧುನಿಕ ಸಾಹಿತ್ಯವನ್ನು ಕರಾವಳಿಗೆ  ತಂದವರಲ್ಲಿ ಚೊಕ್ಕಾಡಿಯವರು ಪ್ರಮುಖರು.ನನ್ನ ಅಧ್ಯಯನಗಳನ್ನು ಯಾವ ರೀತಿಯಲ್ಲಿ ಗ್ರಹಿಸುವ ಮತ್ತು ಹೇಳುವ ವಿದಾನಗಳನ್ನು ರೂಢಿಸಿಕೊಳ್ಳಬೇಕು ಎಂದು ಕಲಿಸಿದ್ದು ಚೊಕ್ಕಾಡಿಯವರು. ಚೊಕ್ಕಾಡಿಯವರು ನಮಗೆಲ್ಲ ಹೆಮ್ಮೆಮತ್ತು ಅಭಿಮಾನದ ಸಂಕೇತವಾಗಿದ್ದಾರೆ” ಎಂದು ಹೇಳಿದರು.*       *ಶಿಕ್ಷಕ-ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ಅವರು ಬೆಂಗಳೂರಿನ ಮಾಲಿನಿ ಗುರುಪ್ರಸನ್ನ,ಸಿಂಧೂರಾವ್.ಟಿ ಮತ್ತು ಹರೀಶ್ ಕೇರ ಸಂಪಾದಿಸಿರುವ ಚೊಕ್ಕಾಡಿಯವರ ಬಗೆಗಿನ ಅಭಿನಂದನಾ ಗ್ರಂಥ  “ವಿಹಂಗಮ”  ಬಿಡುಗಡೆಗೊಳಿಸಿದರು.ಚೊಕ್ಕಾಡಿಯವರ ಸಾಹಿತ್ಯದ ಮೇಲೆ ಬೆಳಕು ಬೀರುವ ಅಭಿನಂದನಾ ಗ್ರಂಥ ಹೊರತಂದ ಅವರ ಅಭಿಮಾನಿಗಳ ಶ್ರಮವನ್ನು ಶ್ಲಾಘಿಸಿದರು.*     *ಸಾಹಿತ್ಯ ಪರಿಷತ್ತು ಮತ್ತು ಫ್ರೆಂಡ್ಸ್ ಕ್ಲಬ್ ನ ವತಿಯಿಂದ ಸುಬ್ರಾಯ ಚೊಕ್ಕಾಡಿಯವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.*       *ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಚೊಕ್ಕಾಡಿಯವರು ತನ್ನ ಕಾವ್ಯ ಯಾನದಲ್ಲಿ ಜೊತೆಯಾದ ಎಲ್ಲರನ್ನು ಸ್ಮರಿಸಿದರು.ಯಾವುದಕ್ಕೂ ಹಂಬಲಿಸಿ ಬರೆದವನಲ್ಲ ನಾನು.ನನ್ನ ಪರಿಸರ ನನ್ನ ಬರವಣಿಗೆಗೆ ಸ್ಫೂರ್ತಿ ಯನ್ನೊದಗಿಸಿತು.ನನ್ನ ಊರಿನಲ್ಲೆ ನನ್ನ ಪ್ರೀತಿ ಪಾತ್ರರ ನಡುವೆ  ಗೌರವಿಸಿ ನನ್ನ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದ್ದಕ್ಕಾಗಿ  ಸಾಹಿತ್ಯ ಪರಿಷತ್ತು ಮತ್ತು ಫ್ರೆಂಡ್ಸ್ ಕ್ಲಬ್ ಗೆ ಧನ್ಯವಾದಗಳನ್ನರ್ಪಿಸಿದರು.*      *ಸಮಾರಂಭದ ಅಧ್ಯಕ್ಷತೆ ಯನ್ನು ವಹಿಸಿದ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಹರಪ್ರಸಾದ್ ತುದಿಯಡ್ಕ ಮಾತನಾಡಿ ” ಸುಬ್ರಾಯ ಚೊಕ್ಕಾಡಿಯವರಂತ ಕವಿಗಳು ನಮ್ಮ ತಾಲೂಕಿನಲ್ಲಿರುವುದು ನಮಗೆಲ್ಲ ಹೆಮ್ಮೆ.ಅವರ ಸಾಹಿತ್ಯ ಸೇವೆಯನ್ನು ಅವರ 80ರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವಲೋಕಿಸಿ ಗೌರವಿಸುವ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಸಂತೋಷದಿಂದ ಮಾಡುತ್ತಿದೆ” ಎಂದು ಹೇಳಿದರು.*        *ವೇದಿಕೆಯಲ್ಲಿ ಸುಬ್ರಾಯ ಚೊಕ್ಕಾಡಿಯವರ ಪತ್ನಿ ಶ್ರೀಮತಿ ಲಕ್ಷ್ಮೀ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಚಂದ್ರಶೇಖರ ಪೇರಾಲು ಮತ್ತು ತೇಜಸ್ವಿ ಕಡಪಳ, ಕೋಶಾಧಿಕಾರಿ  ದಯಾನಂದ ಆಳ್ವ ಹಾಗೂ ಚೊಕ್ಕಾಡಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ  ಶ್ರೀ ಚಂದ್ರಶೇಖರ ಮೂಕಮಲೆ ಉಪಸ್ಥಿತರಿದ್ದರು. ಚಂದ್ರಶೇಖರ ಪೇರಾಲು ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ತೇಜಸ್ವಿ ಕಡಪಳ ಧನ್ಯವಾದಗೈದರು.ಚರಿಷ್ಮಾ ಕಡಪಳ ಪ್ರಾರ್ಥಿಸಿ, ಸುಶ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು.ಯಕ್ಷಿತಾ ಪಾರೆ ಮತ್ತು ಫ್ರೆಂಡ್ಸ್ ಕ್ಲಬ್ ನ  ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರ ಖ್ಯಾತ ಗಾಯಕ ರಮೇಶ್ ಮೆಟ್ಟಿನಡ್ಕರವರಿಂದ ಸುಬ್ರಾಯ ಚೊಕ್ಕಾಡಿಯವರ ಗೀತೆಗಳ ಗಾಯನ ಕಾರ್ಯಕ್ರಮ ಜರಗಿತು.ಚೊಕ್ಕಾಡಿಯವರ ಅಭಿಮಾನಿಗಳು ಮತ್ತು ಸಾಹಿತ್ಯಾಭಿಮಾನಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!