Ad Widget

ಕಾಂಗ್ರೆಸ್ ಪಕ್ಷದ ವರ್ಚಸ್ಸು ಇಂದಿಗೂ ಉತ್ತಮವಾಗಿದೆ – ಹಿರಿಯ ನಾಯಕ ವೆಂಕಟ್ರಮಣ ಭಟ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮೂರು ಕಾರ್ಯಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಬೆಂಗಳೂರು ಕೆಪಿಸಿಸಿ ಕಾರ್ಯಾಲಯದಲ್ಲಿ ಜುಲೈ ೨ ರಂದು ನಡೆಯಿತು. ಇದರ ಅಂಗವಾಗಿ ಸುಳ್ಯ ತಾಲೂಕಿನಾದ್ಯಂತ ಏಕ ಕಾಲದಲ್ಲಿ ಸುಮಾರು ೩೧ ಗ್ರಾಮ ಪಂಚಾಯತ್ ವಾರ್ಡ್ ಗಳಲ್ಲಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಹಾಗೂ ಝೂಮ್ ನೇರ ವೀಕ್ಷಣಾ ಕಾರ್ಯಕ್ರಮಗಳು ನಡೆಯಿತು. ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ‌ ಸುಳ್ಯ ಬ್ಲಶಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಅಧ್ಯಕ್ಷತೆ ವಹಿಸಿದ್ದರು.  ಕಾಂಗ್ರೆಸ್ ನ ಹಿರಿಯ ನಾಯಕ ನ.ಪಂ ಮಾಜಿ ಅಧ್ಯಕ್ಷ ಎಂವಿ‌ವೆಂಕಟ್ರಮಣ ಭಟ್ ಕಾರಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಕಾಂಗ್ರೆಸ್ ಪಕ್ಷ ಇದೀಗ ಕೆಲವು ವರ್ಷಗಳಿಂದ ಚುನಾವಣೆಗಳಲ್ಲಿ ಸೋಲುತ್ತಿದ್ದರೂ ಇಂದಿಗೂ ಕಾಂಗ್ರೆಸ್ ಪಕ್ಷದ ವರ್ಚಸ್ಸು ಉತ್ತಮ ರೀತಿಯಲ್ಲಿದೆ. ಮಾಜಿ ಪ್ರಧಾನ ಮಂತ್ರಿಗಳಾದ ದಿ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ರವರ ದೇಶ ಅಭಿವೃದ್ಧಿ ಚಿಂತನೆ ಗಳು ತಂತ್ರಜ್ಞಾನದ ಕೊಡುಗೆಗಳು ದೇಶದ ಜನತೆಗಾಗಿ ಅತ್ಯಂತ  ಹೇರಳವಾಗಿ ನೀಡಿದವರು ಕಾಂಗ್ರೆಸ್ ನವರಾಗಿದ್ದಾರೆ ಎಂದು ಹೇಳಿದರು. ಮನಮೋಹನ್ ಸಿಂಗ್ ರವರ ಅಧಿಕಾರ ಅವಧಿಯಲ್ಲಿ  ದೇಶದ ಆರ್ಥಿಕತೆಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಲು ನಾಯಕರು ಕಾರ್ಯಕರ್ತರು , ನಾಯಕರುಗಳು ಒಟ್ಟಾಗಿ ಶ್ರಮಿಶಬೇಕೆಂದು ಕರೆ ನೀಡಿದರು. ಅಧ್ಯಕ್ಷರ ನೆಲೆಯಲ್ಲಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ರಾಜ್ಯದಲ್ಲಿ ಹೊಸ ಸಂಚಲನ ಮಾಡಿದೆ. ತನ್ನೊಂದಿಗೆ ಇಡೀ ಕಾಂಗ್ರೆಸ್ ಕಾರ್ಯಕರ್ತರನ್ನು ಒಂದುಗೂಡಿಸಿ ಪ್ರಮಾಣವಚನಕ್ಕೆ ಸೇರಿಸಿ ಪ್ರತಿಜ್ಞಾವಿಧಿ ಭೋದಿಸುವ ಕಾರ್ಯಕ್ರಮ ಅಭೂತಪೂರ್ವ ಯಶಸ್ಸಿಗೆ ಡಿ.ಕೆ.ಶಿವಕುಮಾರ್ ರವರು ಕಾರಣರಾಗಿದ್ದಾರೆ. ಇಂದು ತಾಲೂಕಿನ 31 ಗ್ರಾಮ ಪಂಚಾಯತ್ ಬೂತ್ ಗಳಲ್ಲಿ ಏಕಕಾಲದಲ್ಲಿ ಪ್ರತಿಜ್ಞಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಿ ನಡೆಯುತ್ತಿದೆ. ಇದಕ್ಕೆ ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ನಾಯಕರ ಶ್ರಮ ಎಂದರು.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಲಿದೆ ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ.ಉಸ್ತುವಾರಿ ಜಿ.ಕೃಷ್ಣಪ್ಪ ,ಕೆಪಿಸಿಸಿ ಸದಸ್ಯ ಡಾ.ರಘು ಕಾರ್ಯಕ್ರಮ ಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಜಿ.ಪಂ.ಸದಸ್ಯ ಐ.ಕುಂಞಿಪಳ್ಳಿ, ಮಾಜಿ ನ.ಪಂ.ಸದಸ್ಯ ಜನಾರ್ದನ ಗೌಡ ಮೋಂಟಡ್ಕ, ಡಿಸಿಸಿ ವೀಕ್ಷಕ ಮಹೇಶ್ ರೈ ಅಂಕೊತ್ತಿಮಾರು, ಮಾಜಿ ಶಾಸಕ ಕುಶಲ, ತಾ.ಯೂತ್ ಕಾಂಗ್ರೆಸ್ ಅಧ್ಯಕ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಜ್ಞಾ ಸಮಾರಂಭದ ಉಸ್ತುವಾರಿ ಯಸ್. ಸಂಶುದ್ದೀನ್ ಸ್ವಾಗತಿಸಿ , ಜನಾರ್ದನ ಮೋಂಟಡ್ಕ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಡಿಕೆಶಿ ಯವರ ಪದಗ್ರಹಣ ಕಾರ್ಯಕ್ರಮ ವನ್ನು ವೀಕ್ಷಿಸಲು ಬೃಹತ್ ಪರದೆ ಹಾಗೂ ಝೂಮ್ ಕಾರ್ಯಕ್ರಮ ಕ್ಕೆ ಟಿವಿ ಗಳನ್ನು ಅಳವಡಿಸಲಾಗಿತ್ತು. ಪಕ್ಷದ ಮುಖಂಡರಾದ ಸುಧೀರ್ ರೈ ಮೇನಾಲ, ಗೋಕುಲ್ ದಾಸ್, ಪಿ.ಎ.ಮಹಮ್ಮದ್, ಮುಸ್ತಫಾ ಜನತಾ, ಶರೀಫ್ ಕಂಠಿ, ಬಾಲಕೃಷ್ಣ ಭಟ್ ಕೊಡಂಕೇರಿ, ಶಾಫಿ ಕುತ್ತಮೊಟ್ಟೆ, ಸುಜಯ ಕೃಷ್ಣ, ಪ್ರೇಮಾ ಟೀಚರ್ , ಶ್ರೀಲತಾ ಬೂಡು,  ಮೊದಲಾದವರು ಭಾಗವಹಿಸಿದ್ದರು. ಪಕ್ಷದ ವಕ್ತಾರ ನಂದರಾಜ್ ಸಂಕೇಶ್ ಮಾಧ್ಯಮ ವಕ್ತಾರ ಭವಾನಿಶಂಕರ ಕಲ್ಮಡ್ಕ ಮೊದಲಾದವರು ಸಹಕರಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!