ಕರ್ನಾಟಕದ ಕಾಂಗ್ರೆಸ್ ನೂತನ ಅಧ್ಯಕ್ಷ ರಾಗಿ ಡಿಕೆ.ಶಿವಕುಮಾರ್ ನೇಮಕವಾಗಿ ಸುಮಾರು 3 ಕಳೆದಿದೆ. ಆದರೇ ಪಟ್ಟಾಭಿಷೇಕ ಕಾರ್ಯಕ್ರಮ ಕ್ಕೆ ಕೊರೊನಾ ಲಾಕ್ ಡೌನ್ ಮಾಡಿತು. ಹಲವು ಬಾರಿ ದಿನ ನಿಗದಿಯಾಗಿ ವಿಘ್ನ ಬಂದು ಕೊನೆಗೆ ಇಂದು ಪಟ್ಟಾಭಿಷೇಕ ನಡೆಯಲಿದೆ.ಇದೀಗ ಕಾರ್ಯಕ್ರಮ ಸ್ವರೂಪ ಬದಲಾಗಿ ಡಿಜಿಟಲ್ ಟಚ್ ನೀಡಲಾಗಿದೆ. ಹಾಗೂ ಈ ವರ್ಚುವಲ್ ಪದಗ್ರಹಣ ಕಾರ್ಯಕ್ರಮ ಒಂದು ದಾಖಲೆ ನಿರ್ಮಿಸುವ ಸಾಧ್ಯತೆ ಇದೆ.
ಡಿಕೆ ಶಿವಕುಮಾರ್ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ನ ಚಿತ್ರಣ ಬದಲಾಗಿದೆ. ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಕಂಡುಬರುತ್ತಿದೆ. ಇನ್ನೂ ಬಿಜೆಪಿ ಹಾಗೂ ಜೆಡಿಎಸ್ ಎಲ್ಲಿ ಎಡವಿದರೂ ಡಿಕೆಶಿ ಅದನ್ನು ಬಳಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ಸಾಧ್ಯತೆ ನಿಚ್ಚಳವಾಗಿದೆ.
ಡಿ.ಕೆ.ಶಿ ಪದಗ್ರಹಣ ಕಾರ್ಯಕ್ರಮ ಡಿಜಿಟಲ್ ರೂಪ ಪಡೆದಿದ್ದು,ರಾಜ್ಯ 10 ಸಾವಿರ ಕಡೆಗಳಲ್ಲಿ ವೀಕ್ಷಣೆಗೆ ಅವಕಾಶ ಮಾಡಲಾಗಿದೆ. ಹಾಗೂ ಸಾಮಾಜಿಕ ಜಾಲತಾಣಗಳನ್ನು ಸಕ್ರೀಯವಾಗಿಸಿದ್ದಾರೆ. ಈ ಮೂಲಕ ಲೈವ್ ಮಾಡಲು ಸಿದ್ದತೆ ಪೂರ್ಣಗೊಳಿಸಿದ್ದಾರೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ಇಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕೋವಿಡ್ ಸೂಚನಾ ಕ್ರಮಗಳನ್ನು ಪಾಲಿಸಿ ಕಾರ್ಯಕರ್ತರು ಆಗಮಿಸಿಸುವಂತೆ ಪ್ರಕಟಣೆ ನೀಡಿದೆ.