Ad Widget

ಚಂದ್ರಯಾನ ಯಶಸ್ಸಿನಲ್ಲಿ ಕಾರ್ಯನಿರ್ವಹಿಸಿದ ಉಬರಡ್ಕದ ವೇಣುಗೋಪಾಲ್ ಭಟ್ ರವರ ಮನೆಗೆ ಕಾಂಗ್ರೆಸ್ ನಿಯೋಗ ಭೇಟಿ – ಹೆತ್ತವರಿಗೆ ಅಭಿನಂದನೆ

ಭಾರತದ ಬಾಹ್ಯಕಾಶ ಸಂಸ್ಥೆ ಇಸ್ರೋದ ಮಹಾತ್ವಂಕಾಕ್ಷಿ ಚಂದ್ರಯಾನ -3 ಯೋಜನೆ ಯಶಸ್ವಿ ಯಾಗಿ ಉಡ್ಡಯನ ಗೊಂಡು ಚಂದ್ರನ ದಕ್ಷಿಣ ದ್ರುವದಲ್ಲಿ ಯಶಸ್ವಿ ಯಾಗಿ ಲ್ಯಾಂಡ್ ಆಗಿ ಜಗತ್ತಿನಲ್ಲಿ 4 ನೇ ರಾಷ್ಟ್ರವಾಗಿ ಹೊರಹೋಮ್ಮಿದ ಈ ಅಭೂತ ಪೂರ್ವ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಿದ ಉಬರಡ್ಕ ಗ್ರಾಮದ ಶ್ರೀ ಅನಂತೇಶ್ವರ ಭಟ್ ರವರ ಪುತ್ರ ಇಸ್ರೋ ವಿಜ್ಞಾನಿ ಶ್ರೀ ವೇಣುಗೋಪಾಲ್ ಭಟ್ ರವರಿಗೆ ಗೌರವ ಸಲ್ಲಿಸಲು ಇಂದು ಸುಳ್ಯದ ಕಾಂಗ್ರೆಸ್ ಮುಖಂಡರನ್ನೊಳಗೊಂಡ ನಿಯೋಗ ದಿಂದ ಉಬರಡ್ಕದ ಮನೆಗೆ ಭೇಟಿ ನೀಡಿ ವೇಣುಗೋಪಾಲ್ ಭಟ್ ರವರ ತಂದೆ ತಾಯಿಯಾದ ಶ್ರೀ ಅನಂತೇಶ್ವರ ಭಟ್ ಶ್ರೀಮತಿ ಸಾವಿತ್ರಿ ದಂಪತಿಗಳಿಗೆ ಅಭಿನಂದಿಸಿ ಗೌರವಿಸಲಾಯಿತು. ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡರವರು ಶಾಲು ಹೊದಿಸಿ, ಫಲ ಪುಷ್ಪ ನೀಡಿ ಆತ್ಮೀಯವಾಗಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೆಂಕಪ್ಪ ಗೌಡರು ಚಂದ್ರಯಾನ -3 ಯಶಸ್ವಿಯಾಗಿರುವುದು ಇಡೀ ದೇಶವೇ ಸಂಭ್ರಮ ಪಡುವ ಸನ್ನಿವೇಶವಾಗಿದೆ. ಈ ಮಹಾನ್ ಕಾರ್ಯದಲ್ಲಿ ಸುಳ್ಯದ ವಿಜ್ಞಾನಿಗಳು ಸಹ ಭಾಗವಹಿಸಿ ತಮ್ಮ ಸೇವೆಯನ್ನು ಒದಗಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಶ್ರೀ ವೇಣುಗೋಪಾಲ್ ಭಟ್ ರವರ ಅನುಪಸ್ಥಿತಿಯಲ್ಲಿ ಅವರ ಕುಟುಂಬ ಸದಸ್ಯರು ಅದರಲ್ಲೂ ಅವರ ತಂದೆ ತಾಯಿಗೆ ಸನ್ಮಾನಿಸಿ ಗೌರವಿಸುವುದು ನಮ್ಮ ಭಾಗ್ಯ ಮತ್ತು ಕರ್ತವ್ಯ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಸುಳ್ಯದ ಎಲ್ಲಾ ತಂತ್ರಜ್ಞರಿಗೆ ಮಂತ್ರಿಗಳನ್ನು ಕರೆಯಿಸಿ ಸಾರ್ವಜನಿಕವಾಗಿ ಮಾಡುವವರಿದ್ದೇವೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಿತ್ರಾವತಿ, ಉಬರಡ್ಕ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಗೌಡ, ಉಬರಡ್ಕ ನರಸಿಂಹ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಜತ್ತಪ್ಪ ಗೌಡ ಶರವು, ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಕೆ ಗೋಕುಲ್ ದಾಸ್ ಸುಳ್ಯ, ಮಾಜಿ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ, ಮಾಜಿ ಮಾಧ್ಯಮ ಸಂಯೋಜಕ ಭವಾನಿಶಂಕರ್ ಕಲ್ಮಡ್ಕ, ಸಾಮಾಜಿಕ ಜಾಲತಾಣ ಮಾಜಿ ಸಂಚಾಲಕ ಚೇತನ್ ಕಜೆಗದ್ದೆ, ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕ, ಪ್ರಮುಖರಾದ ವಿಜಯ ಕುಮಾರ್ ಆಲೆಟ್ಟಿ, ಜಗನ್ನಾಥ ಶೆಟ್ಟಿ ಉಬರಡ್ಕ, ಗಂಗಾಧರ ನಾಯರ್, ರಾಧಾಕೃಷ್ಣ ದಾಸ್, ಗುಡ್ಡಪ್ಪ ಕೇದಂಬಾಡಿ, ಸಂಜೀವ ಬಡ್ಡೆ ಕಲ್ಲು, ಭುವನೇದ್ರ ದಾಸ್, ಬಾಲಚಂದ್ರ ಶೆಟ್ಟಿ ಹಿತ್ಲು, ಬಾಲಪ್ರಕಾಶ ಶೆಟ್ಟಿಹಿತ್ಲು, ಗೋಪಾಲ ಕೃಷ್ಣ ಶೆಟ್ಟಿ ಹಿತ್ಲು, ಸತೀಶ್ಚಂದ್ರ ಪಟ್ರುಕೋಡಿ, ಅರುಣ ಕುಮಾರ್, ಶೀನಪ್ಪ, ಗಣೇಶ ಪಾಲಡ್ಕ, ಶುಭಕರ ನಾಯಕ್, ಚೇತನ್ ಅಮೈ, ರವಿರಾಜ್ ರಾವ್ ಕಂಬಳಿಮೂಲೆ, ಚಂದ್ರಶೇಖರ ಮಧೂರು ಮೂಲೆ, ವೇಣುಗೋಪಾಲ್ ಭಟ್ ರವರ ಸಹೋದರ ಈಶ್ವರ ಕುಮಾರ್,ಪ್ರವೀಣ್ ಕ್ರಾಸ್ತ, ಶ್ರೀಮತಿ ಸಂಧ್ಯಾ ಮತ್ತು ಮಕ್ಕಳು ಉಪಸ್ಥಿತರಿದ್ದರು. ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಅಮೈ ವಂದಿಸಿದರು.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!