Ad Widget

ಪ್ಲಾಟಿಂಗ್ ಸಮಸ್ಯೆ ಪರಿಹಾರಕ್ಕೆ ಸುಳ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಂಜಿತ್ ರೈ ಮೇನಾಲ ಕಂದಾಯ ಸಚಿವರಿಗೆ ಮನವಿ – ಸಕಾರಾತ್ಮಕ ಸ್ಪಂದನೆ.

. . . . . .

ಸುಳ್ಯ ತಾಲೂಕಿನ ಪ್ಲಾಟಿಂಗ್ ಆಗದೆ ಕಡತ ಬಾಕಿ ಇರುವುದರಿಂದ ಜನರಿಗೆ ಆಗುತ್ತಿರುವ ಸಮಸ್ಯೆ ನಿವಾರಣೆಗೆ ಸುಳ್ಯ ಯುವ ಕಾಂಗ್ರೇಸ್ ಉಪಾಧ್ಯಕ್ಷ ರಂಜಿತ್ ರೈ ಮೇನಾಲ ಇವರ ನೇತೃತ್ವದ ತಂಡವು ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೆಗೌಡರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಸುಳ್ಯ ತಾಲೂಕಿನಲ್ಲಿ ಪ್ಲಾಟಿಂಗ್ ಆಗದೆ ಹಲವು ಕಡತಗಳು ಬಾಕಿ ಇದೆ. ಬಹು ಮುಖ್ಯವಾಗಿ ಅಜ್ಜಾವರ ಗ್ರಾಮದಲ್ಲಿ ಪ್ಲಾಟಿಂಗ್ ಆಗದೇ ಆಗುತ್ತಿರುವ ಸಮಸ್ಯೆಯ ಕುರಿತು ತಿಳಿಸಿದರಲ್ಲದೆ ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಅವರು ಕೇಳಿಕೊಂಡಿದ್ದು ಈ ಸಂದರ್ಭದಲ್ಲಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಸೌಕತ್ ಅಲಿ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!