ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವ್ಯಾಪ್ತಿಯಲ್ಲಿರುವ ಎಲ್ಲಾ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳ ಕಬ್, ಬುಲ್ ಬುಲ್, ಸ್ಕೌಟ್, ಗೈಡ್, ರೋವರ್, ರೇಂಜರ್ ವಿದ್ಯಾರ್ಥಿಗಳಿಗೆ ಗೀತಗಾಯನ ಸ್ಪರ್ಧೆಯು 24.08.2023 ಗುರುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡ್ಪಿನಂಗಡಿಯಲ್ಲಿ ಜರುಗಿತು.
ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ ಕೆ ಇವರ ಅಧ್ಯಕ್ಷತೆಯಲ್ಲಿ ನಡೆದ ಗೀತಗಾಯನ ಸ್ಪರ್ಧೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡ್ಪಿನಂಗಡಿಯ ಎಸ್‌ಡಿಎಂಸಿ ಅಧ್ಯಕ್ಷ ದಾವೂದ್ ಮುಚ್ಚಿಲ ಉದ್ಘಾಟಿಸಿ, ಶುಭ ಹಾರೈಸಿದರು. ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷೆ ವಿಮಲಾರಂಗಯ್ಯ ಭಾಗವಹಿಸಿ, ದೇಶಭಕ್ತಿಯನ್ನು ಮೈಗೂಡಿಸಲು ಉತ್ತಮ ಕಾರ್ಯಕ್ರಮವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ವಾಸುದೇವ ನಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಉದಯಕುಮಾರ್ ರೈ ಎಸ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕಿ ಧರ್ಮಾವತಿ ವಂದಿಸಿದ ಈ ಉದ್ಘಾಟನಾ ಕಾರ್ಯಕ್ರಮವನ್ನು ಜೊತೆ ಕಾರ್ಯದರ್ಶಿ ಸರೋಜಿನಿ ಕೆ ನಿರೂಪಿಸಿದರು.
ಬಳಿಕ ಎಲ್ಲ ವಿಭಾಗಗಳ ಗೀತ ಗಾಯನ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯನ್ನು ಸಹಾಯಕ ಕಾರ್ಯದರ್ಶಿ ಶಿವಪ್ರಸಾದ್, ಉಪಾಧ್ಯಕ್ಷ ದಾಮೋಧರ ನೇರಳ, ಸ್ಕೌಟ್ ಶಿಕ್ಷಕ ಬಾಲಕೃಷ್ಣ ಕೊಲ್ಲಮೊಗ್ರ ನಿರ್ವಹಿಸಿದರು.
ಕಣ್ವಶ್ರೀ ಸಾಂಸ್ಕೃತಿಕ ಕಲಾಕೇಂದ್ರದ ಸಂಚಾಲಕರಾದ ಸದಾನಂದ ಎ, ರಂಗಕರ್ಮಿ ಕೃಷ್ಣಪ್ಪ ಬಂಬಿಲ, ಪುರೋಹಿತ್ ಸಚಿನ್ ಶರ್ಮ ನಿರ್ಣಾಯಕರಾಗಿ ಸಹಕರಿಸಿದರು.
13 ಸ್ಕೌಟ್ ತಂಡ, 15 ಗೈಡ್ ತಂಡ, 2 ಕಬ್ ತಂಡ, 2 ಬುಲ್ ಬುಲ್ ತಂಡ, ಹಾಗೂ 1 ರೇಂಜರ್ ತಂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಎಸ್ ಡಿ ಎಂ ಸಿ ಅಧ್ಯಕ್ಷ ದಾವೂದ್ ಮುಚ್ಚಿಲ ಅಧ್ಯಕ್ಷತೆ ವಹಿಸಿದ ಸಮರೋಪ ಕಾರ್ಯಕ್ರಮದಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಅಕ್ರಿಕಟ್ಟೆ, ಶಿಕ್ಷಣ ಸಂಯೋಜಕಿ ಸಂಧ್ಯಾಕುಮಾರಿ, ನಿವೃತ್ತ ಶಿಕ್ಷಕರಾದ ಕುಸುಮಾಧರ ಗೌಡ, ಮುತ್ತಪ್ಪ ಗೌಡ, ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ ಕೆ, ಕೋಶಾಧಿಕಾರಿ ವಾಸುದೇವ ನಡ್ಕ, ಮುಖ್ಯಶಿಕ್ಷಕಿ ಧರ್ಮಾವತಿ ಭಾಗವಹಿಸಿದರು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ವಿಮಲಾರಂಗಯ್ಯ ಸ್ವಾಗತಿಸಿ, ಉದಯಕುಮಾರ್ ರೈ ವಂದಿಸಿದ ಸಮಾರೋಪ ಕಾರ್ಯಕ್ರಮವನ್ನು ಗೈಡ್ ಶಿಕ್ಷಕಿ ರಾಜೀವಿ ಬೆಳ್ಳಾರೆ ನಿರೂಪಿಸಿದರು. ವೇದಾವತಿ ನಾಗತೀರ್ಥ, ಸಹನಾ ಬಿ ಬಿ, ಶುಭ ಬಾಳಿಲ ದಾಖಲೆ ವಿಭಾಗದಲ್ಲಿ ಸಹಕರಿಸಿದರು.
*ವಿಜೇತರ ಪಟ್ಟಿ*
*ಕಬ್ ವಿಭಾಗ*
*ಪ್ರಥಮ*: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಅಲೆಕ್ಕಾಡಿ
*ದ್ವಿತೀಯ*: ಕೆಪಿಎಸ್ ಪ್ರಾಥಮಿಕಶಾಲೆ ಬೆಳ್ಳಾರೆ
*ಬುಲ್ ಬುಲ್ ವಿಭಾಗ*
*ಪ್ರಥಮ*: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಅಲೆಕ್ಕಾಡಿ
*ದ್ವಿತೀಯ*: ಕೆಪಿಎಸ್ ಪ್ರಾಥಮಿಕಶಾಲೆ ಬೆಳ್ಳಾರೆ
*ಸ್ಕೌಟ್ ವಿಭಾಗ*
*ಪ್ರಥಮ*: ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ
*ದ್ವಿತೀಯ*: ವಿದ್ಯಾಬೋಧಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ
*ತೃತೀಯ*: ಕೆವಿಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರ
*ಗೈಡ್ ವಿಭಾಗ*
*ಪ್ರಥಮ*: ಕೆಪಿಎಸ್ ಪ್ರೌಢಶಾಲೆ ಬೆಳ್ಳಾರೆ
*ದ್ವಿತೀಯ*: ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ
*ತೃತೀಯ*: ಎಸ್ ಎಸ್ ಪಿ ಯು ಅನುದಾನಿತ ಪ್ರೌಢಶಾಲಾ ವಿಭಾಗ ಸುಬ್ರಹ್ಮಣ್ಯ
*ರೇಂಜರ್ ವಿಭಾಗ*
*ಪ್ರಥಮ*: ಕೆ ಎಸ್ ಎಸ್ ಅನುದಾನಿತ ಮಹಾವಿದ್ಯಾಲಯ ಸುಬ್ರಹ್ಮಣ್ಯ