Ad Widget

ಅಗ್ನಿವೀ‌ರ್ ಕಿಶೋರ್ ಅವರಿಗೆ ತಾಯ್ನಾಡಿನಲ್ಲಿ ಅದ್ದೂರಿ ಸ್ವಾಗತ

ಭಾರತ ದೇಶದ ಯುವ ಸೈನಿಕರ ತಂಡವಾದ ಅಗ್ನಿವೀರ್ ತರಬೇತಿ ಮುಗಿಸಿ ತಾಯ್ನಾಡಿಗೆ ಬಂದಿಳಿದ ಅಗ್ನಿವೀರ್ ಕಿಶೋರ್ ಶೇಷನಡ್ಕ ಅವರನ್ನು ಕನಕಮಜಲಿನಲ್ಲಿ ಮತ್ತು ಜಾಲ್ಸೂರು ಗ್ರಾಮದಲ್ಲಿ ಅಗ್ನಿವೀರ್ ಯೋಧನನ್ನು ಗ್ರಾಮಸ್ಥರು ಸ್ವಾಗತಿಸಿ ಬರಮಾಡಿಕೊಂಡರು. ಕನಕಮಜಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಅಗ್ನಿವೀರ್ ಕಿಶೋರ್ ಅವರಿಗೆ ಬರುತ್ತಿದ್ದಂತೆ ರಸ್ತೆಯಲ್ಲಿ ರಾಷ್ಟ್ರಧ್ವಜ ನೀಡಿ ಸ್ವಾಗತಿಸಿದರು.ಜಾಲ್ಸೂರು ಗ್ರಾಮದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಏರ್ಪಡಿಸಿ ಸ್ವಾಗತಿಸಿ, ಸನ್ಮಾನಿಸಿ, ಬರಮಾಡಿಕೊಂಡರು. ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಭಜನಾ ಮಂದಿರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಿಶೋರ್ ಅವರನ್ನು ಭಜನಾ ಮಂದಿರದ ಅಧ್ಯಕ್ಷ ಎಸ್.ಬಾಬು ಪಾಟಾಳಿ ಅರಿಯಡ್ಕ ಜಾಲ್ಸೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಸೇರಿದಂತೆ ಗ್ರಾಮಸ್ಥರು ಹಾರ ಹಾಕಿ ಬರಮಾಡಿಕೊಂಡರು.ಈ ಸಂದರ್ಭದಲ್ಲಿ ತಿಲೋತ್ತಮ ಗೌಡ ಕೊಲ್ಲಂತಡ್ಕ, ಹೇಮಂತ್ ಮಠ, ಬಾಲಕೃಷ್ಣ ಗೌಡ ಕಜೆಗದ್ದೆ, ಗಂಗಾಧರ ಕಾಳಮನೆ, ಶೇಖರ ಕಾಳಮನೆ, ವಚನ್ ಕಾಳಮನೆ, ಕವನ್ ಕಾಳಮನೆ, ಸಿ.ಹೆಚ್. ಖಾದರ್ ಕದಿಕಡ್ಕ ಸೇರಿದಂತೆ ಜಾಲ್ಕೂರು ಮತ್ತು ಕನಕಮಜಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading