ಶಸ್ತ್ರಚಿಕಿತ್ಸೆಯ ಬಳಿಕ ಕಾಲುಗಳ ಸ್ವಾಧೀನ, ಬಲಗಣ್ಣಿನ ದೃಷ್ಟಿ ಕಳೆದುಕೊಂಡ ಸುಮತಿ ಜಗನ್ನಾಥ – ಚಿಕಿತ್ಸೆಗೆ ಸಾರ್ವಜನಿಕರ ನೆರವಿನ ನಿರೀಕ್ಷೆ

ಸುಳ್ಯ : ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಕೋಶದಲ್ಲಿದ್ದ ಫೈಬ್ರಾಯ್ಡ್ (FIBROID) ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದ ಬಳಿಕ ಸುಮತಿ ಜಗನ್ನಾಥ (46) ಅವರು ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿ, ಎರಡೂ ಕಾಲುಗಳ ಸ್ವಾಧೀನ ಹಾಗೂ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಸಾರ್ವಜನಿಕರ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಕೋಡಿಯಂಗಡಿ ಮನೆಯ ನಿವಾಸಿಯಾಗಿರುವ ಸುಮತಿ ಜಗನ್ನಾಥ ಅವರು ಖಾಸಗಿ ಔಷಧಾಲಯದಲ್ಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆಗೆ ನೆರವಾಗುತ್ತಿದ್ದರು. ಇವರ ಪತಿ ಚಾಲಕರಾಗಿ ದುಡಿಯುತ್ತಿದ್ದು, ದಂಪತಿಗೆ ಒಬ್ಬಳೇ ಮಗಳಿದ್ದಾಳೆ. ಈಕೆ ಸುಳ್ಯದ ಗಾಂಧಿನಗರದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ಅನಾರೋಗ್ಯದಿಂದಾಗಿ ಸುಮತಿ ಅವರು ಈಗ ಎರಡೂ ಕಾಲುಗಳ ಶಕ್ತಿ ಕಳೆದುಕೊಂಡು ಹಾಸಿಗೆಯಲ್ಲೇ ಇರುವ ಪರಿಸ್ಥಿತಿ ಎದುರಾಗಿದೆ. ಬಲಗಣ್ಣಿನ ದೃಷ್ಟಿಯನ್ನೂ ಕಳೆದುಕೊಂಡಿದ್ದಾರೆ. ಕುಟುಂಬದ ಆಧಾರವಾಗಿದ್ದ ಸುಮತಿ ಅವರೇ ಈಗ ಇತರರ ಆರೈಕೆಯನ್ನು ಅವಲಂಬಿಸುವಂತಾಗಿದೆ. ಪತಿಯ ದುಡಿಮೆಯೊಂದೇ ಕುಟುಂಬಕ್ಕೆ ಆಧಾರವಾಗಿದ್ದು, ಮಗಳ ವಿದ್ಯಾಭ್ಯಾಸ ಹಾಗೂ ಚಿಕಿತ್ಸಾ ವೆಚ್ಚವನ್ನು ಭರಿಸುವುದು ಕುಟುಂಬಕ್ಕೆ ದೊಡ್ಡ ಸವಾಲಾಗಿದೆ. ಸರಕಾರದಿಂದ ದೊರೆತ ಮನೆಯಲ್ಲಿ ವಾಸಿಸುತ್ತಿರುವ ಈ ಕುಟುಂಬಕ್ಕೆ ಸದ್ಯ ಯಾವುದೇ ಸ್ಥಿರ ಆದಾಯದ ಮೂಲವಿಲ್ಲ.
ಪ್ರಸ್ತುತ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 24-10-2026ರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಹೆಚ್ಚಿನ ಚಿಕಿತ್ಸಾ ವೆಚ್ಚಕ್ಕಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಾರ್ವಜನಿಕರ ನೆರವಿನ ಅಗತ್ಯವಿದೆ.

ದಾನಿಗಳಲ್ಲಿ ನೆರವಿಗೆ ಮನವಿ
ಸುಮತಿ ಜಗನ್ನಾಥ ಅವರ ಚಿಕಿತ್ಸೆಗೆ ಮಾನವೀಯ ನೆಲೆಯಲ್ಲಿ ಸಾರ್ವಜನಿಕರು, ದಾನಿಗಳು ಹಾಗೂ ಸಂಘ-ಸಂಸ್ಥೆಗಳು ತಮ್ಮಿಂದಾದ ಆರ್ಥಿಕ ನೆರವನ್ನು ನೀಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ. ಈ ನೆರವಿನ ಮನವಿಯನ್ನು ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಹೆಚ್ಚಿನ ಜನರಿಗೆ ತಲುಪಿಸಲು ಸಹಕರಿಸುವಂತೆಯೂ ಕೋರಿದ್ದಾರೆ.

ನೆರವು ನೀಡಲು ಬ್ಯಾಂಕ್ ವಿವರಗಳು
1. ಸುಮತಿ ಜಗನ್ನಾಥ
ಬ್ಯಾಂಕ್: ಬ್ಯಾಂಕ್ ಆಫ್ ಬರೋಡಾ
ಖಾತೆ ಸಂಖ್ಯೆ: 83740100002644
IFSC: BARBOVJPUDA
ಶಾಖೆ: ಮೇನ್ ರೋಡ್, ಪುತ್ತೂರು

2. ಡಾ. ಕೆ. ರಾಜಾ
ಬ್ಯಾಂಕ್: ಆಕ್ಸಿಸ್ ಬ್ಯಾಂಕ್
ಖಾತೆ ಸಂಖ್ಯೆ: 922010012658114
IFSC: UTIB0001002
ಶಾಖೆ: ಪುತ್ತೂರು

ನೆರವು ನೀಡಿದವರು ದಯವಿಟ್ಟು ಸುಮತಿ ಜಗನ್ನಾಥ ಅವರ ಮೊಬೈಲ್ ಸಂಖ್ಯೆ 7259912126ಕ್ಕೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 7259912126 / 9448164308 ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading