ಸುಳ್ಯದಲ್ಲಿ ಇಂದು ಲೋಕಾಯುಕ್ತ ಇಲಾಖೆ ಮಿಂಚಿನ ದಾಳಿ ನಡೆಸಿ ಲಂಚ ಸ್ವೀಕರಿಸಿದ ಗ್ರಾಮ ಆಡಳಿತಾಧಿಕಾರಿಯನ್ನು ಖೆಡ್ಡಕ್ಕೆ ಬೀಳಿಸಿದ್ದು, ಇದೀಗ ನ್ಯಾಯಮೂರ್ತಿ ಸೌಮ್ಯ ಜೆ ಎಮ್ ಎಫ್ ಸಿ 3ನೇ ಬೆಂಚು ಇವರ ಮುಂದೆ ಹಾಜರುಪಡಿಸಿದ್ದು ಗ್ರಾಮ ಆಡಳಿತಾಧಿಕಾರಿ ಮಿಯಾಸಾಬ್ ಮುಲ್ಲಾ ಅವರಿಗೆ ಅ 29ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರು ಕಾರಾಗೃಹಕ್ಕೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಮಿಯಾಸಾಬ್ ಮುಲ್ಲಾ ಹೇಳಿಕೆಯ ಪ್ರಕಾರ ತಾನು ದೂರುದಾರರಿಗೆ ಈ ಹಿಂದೆ ಮೂರು ಸಾವಿರ ರೂಪಾಯಿಗಳನ್ನು ನೀಡಿದ್ದು ಆ ಹಣವನ್ನು ಇಂದು ಕೊಟ್ಟಿದ್ದಾರೆ ಎಂದು ಭಾವಿಸಿ ತೆಗೆದುಕೊಂಡಿರುತ್ತೇನೆ. ಅಲ್ಲದೇ ಅವರ ಖಾತೆ ಬದಲಾವಣೆ ವಿಚಾರದಲ್ಲಿ ಲಂಚ ಪಡೆದಿಲ್ಲ ಎಂದು ಹೇಳಿಕೆ ನೀಡಿರುವುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಜಾಮೀನಿಗಾಗಿ ಪ್ರಯತ್ನಿಸಿ ಮಂಗಳೂರಿಗೆ ತೆರಳಿದ ಕೆಲ ಗ್ರಾಮ ಆಡಳಿತಾಧಿಕಾರಿಗಳು ಬರಿಗೈಯಲ್ಲಿ ಹಿಂತಿರುಗುತ್ತಿದ್ದಾರೆ ಎಂದು ತಿಳಿದುಬಂದಿದೆ.