ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಬಹು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಉಮೇಶ್ವರಿಯವರು ಧ್ವಜಾರೋಹಣಗೈದರು. ಬಳಿಕ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಮುಂದೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರು ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಪುಟಾಣಿಗಳು ಭಾಷಣ, ಯೋಧರ ಚರಿತ್ರೆ ಓದುವುದು, ದೇಶಭಕ್ತಿ ಗೀತೆ ಹಾಡುವುದು ಸೇರಿದಂತೆ ಲಘು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಚಂದ್ರಶೇಖರ್ ಬಾಳುಗೋಡು ಇವರು ಸ್ವಾತಂತ್ರೋತ್ಸವದ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ದಾನಿಗಳಾದ ಚಂದ್ರಶೇಖರ್ ಮಾವಿನಕಟ್ಟೆ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಲ್ಲದೆ ದಾನಿಗಳಾದ ಮೋಹನ್ ಸುಬ್ರಮಣ್ಯ ಇವರು ಕೊಡುಗೆಯಾಗಿ ಬ್ಯಾಡ್ಜ್ ಹಾಗೂ ಬೆಲ್ಟನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಿದರು. ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಜಯ್ ಕುಮಾರ್ ಚಾರ್ಮಾತ, ಹರೀಶ್ ಕೊಯಿಲ, ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಮೋಹನ್ ನಾಯ್ಕ ಚಾರ್ಮಾತ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿಕ್ಷಕರುಗಳಾದ ವನಜಾಕ್ಷಿ ಹಾಗೂ ಸುಧಾರಾಣಿ ಇವರು ಸಂದರ್ಭೋಚಿತವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಪಾರೆಪ್ಪಾಡಿ ಸ್ವಾಗತಿಸಿ, ಮೋಕ್ಷ ರವರು ವಂದಿಸಿದರು. ಈ ಕಾರ್ಯಕ್ರಮದ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಗುತ್ತಿಗಾರು ಇದರ ಆಡಳಿತ ಮಂಡಳಿಯವರು ಲಡ್ಡು ನೀಡಿ ಸಹಕರಿಸಿದರು. ಅಲ್ಲದೆ ಹಲವಾರು ಮಂದಿ ಶಾಲಾ ಹಿತೈಷಿಗಳು ಸಿಹಿ ತಿಂಡಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.