ಸುಳ್ಯದ ತೊಡಿಕಾನದಲ್ಲಿ ನಿನ್ನೆ ನಡೆದ ನೈತಿಕ ಪೊಲೀಸ್ ಗಿರಿ ನಡೆದಿದೆ ಎಂಬ ಆರೋಪದಡಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಸಂದೇಶ ಹೋಗುವ ರೀತಿ ವರದಿ ನೀಡಿದ್ದಾರೆಂಬ ಆರೋಪದಡಿಯಲ್ಲಿ ಮೂರು ವೆಬ್ ಸೈಟ್ ನ್ಯೂಸ್ ಗಳ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ ಪೊಲೀಸ್ ಠಾಣೆಯಲ್ಲಿ ವರದಿಯಾಗಿರುವ ಅ ಕ್ರ 87/2023 ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಿಡುಗಡೆಯ ಬಗ್ಗೆ ಸಾಮಾಜಿಕ ಅಂತರ್ಜಾಲ 3 ಮಾಧ್ಯಮಗಳಲ್ಲಿ ಉದ್ದೇಶಪೂರ್ವಕವಾಗಿ ಜನರಲ್ಲಿ ಪೊಲೀಸರ ಬಗ್ಗೆ ತಪ್ಪು ಸಂದೇಶ ಹೋಗುವ ರೀತಿಯಲ್ಲಿ ಮತ್ತು ಧರ್ಮಗಳ ಮದ್ಯೆ ಕೋಮು ಸಾಮರಸ್ಯ ಕದಡುವ ರೀತಿಯಲ್ಲಿ ನೈಜ ಘಟನೆಯನ್ನು ತಿರುಚಿ ತಪ್ಪಾಗಿ ದಿನಾಂಕ :13.08.2023ರಂದು ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡಿ ಅಂತರ್ಜಾಲದಲ್ಲಿ ಪ್ರಕಟಿಸಿದ್ದು,ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 88/2023 ಕಲಂ: 505(1), 153(A) IPC ಮತ್ತು ಕಲಂ: 123 KP Act ಪ್ರಕರಣ ದಾಖಲಾಗಿರುತ್ತದೆ.” ಎಂದು ಎಫ್.ಐ.ಆರ್. ನಲ್ಲಿ ಹೇಳಲಾಗಿದೆ.