Ad Widget

ಬೆಳ್ಳಾರೆ : ಕಲ್ಲಪ್ಪಣೆ ಕುಂಞಿಪ್ಪ ಅಜ್ಜ ತರವಾಡು ಕುಟುಂಬದ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ

ಬೆಳ್ಳಾರೆಯ ಕಲ್ಲಪ್ಪಣೆ ಕುಂಞಿಪ್ಪ ಅಜ್ಜ ತರವಾಡು ಕುಟುಂಬದ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಆ. 06 ರಂದು ಪೆರುವಾಜೆಯ ಜೆ.ಡಿ. ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ನಿರ್ದೇಶಕರಾದ ಹನೀಫ್ ನೆಟ್ಟಾರವರ ಗೌರವ ಉಪಸ್ಥಿತಿಯಲ್ಲಿ ಕುಟುಂಬದ ಹಿರಿಯರೂ ಆದ ಮೂಸ ಕಲ್ಲಪ್ಪಣೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆಯನ್ನು ನೀಡಿದರು. ಮುಸ್ತಫ ಸಖಾಫಿ ಈಶ್ವರಮಂಗಲ ಮತ್ತು ಇಸ್ಮಾಯಿಲ್ ಮದನಿ ಚೆನ್ನಾರು ದುಃಅ ಆಶೀರ್ವಚನಾ ನೀಡಿದರು.

. . . . . .

ಕುಂಞಿಪ್ಪ ಅಜ್ಜ ತರವಾಡಿನ ನೆಟ್ಟಾರು, ಮೈಸೂರು, ಈಶ್ವರಮಂಗಲ, ಚೆನ್ನಾರು ಮತ್ತು ಕಲ್ಲಪ್ಪಣೆ ಮನೆತನದ ಎಲ್ಲರೂ ಒಂದೇ ಸೂರಿನಡಿ ಬೆಳಗ್ಗಿನಿಂದ ರಾತ್ರಿವರೆಗೂ ಸೇರುವುದರ ಮೂಲಕ ಕುಟುಂಬದ ಐಕ್ಯತೆಯನ್ನು ಸಾರಲಾಯಿತು. ಇಸ್ಮಾಯಿಲ್ ಕುಂಞಿಪ್ಪ ಅಜ್ಜ ಕೇರಳದ ಮಂಜೇಶ್ವರದಿಂದ ಬೆಳ್ಳಾರೆಗೆ ತಲುಪಿದ ಚರಿತ್ರೆಯನ್ನು ಕಾರ್ಯಕ್ರಮದ ಸಂಚಾಲಕರಾದ ಸಂಶುದ್ದೀನ್ ಈಶ್ವರಮಂಗಲ ಪ್ರೊಜಕ್ಟರ್ ಸ್ಕ್ರೀನ್‌ನಲ್ಲಿ ಹಳೆಯ ಚಿತ್ರಗಳ ಸಹಿತ ವಿವರಿಸುವುದರ ಮೂಲಕ ಕುಟುಂಬದ ಇತಿಹಾಸದ ಪುಟಗಳನ್ನು ತೆರೆದಿಟ್ಟರು. ಬೆಳಗ್ಗಿನಿಂದ ರಾತ್ರಿವರೆಗೂ ನಡೆದ ಕಾರ್ಯಕ್ರಮದಲ್ಲಿ ಹಲವು ರೀತಿಯ ಒಳಾಂಗಣ ಕ್ರೀಡೆಗಳು, ಫನ್ನಿ ಗೇಮ್ಸ್, ಹಾಡು, ಭಾಷಣ ಮತ್ತು ಬೇರೆ ಬೇರೆ ರೀತಿಯ ಟ್ಯಾಲೆಂಟ್‌ಗಳು ಸೇರಿದ ಕುಟುಂಬಸ್ಥರಿಗೆ ಮನರಂಜನೆಯನ್ನು ನೀಡಿತು. ಸಭಾಂಗಣದ ಒಳಗೆ ಗೂಡಂಗಡಿ ಮತ್ತು ಮಕ್ಕಳ ಆಟದ ಹಾಲ್ ವಿಶೇಷ ಆಕರ್ಷಣೆಯಾಗಿತ್ತು. ಕುಟುಂಬಸ್ಥರು ಕೇರಳ ಮತ್ತು ಕರ್ನಾಟಕ ರಾಜ್ಯದ ವಿವಿಧ ತಿಂಡಿ ತಿನಿಸುಗಳ ಖಾದ್ಯಗಳನ್ನು ಸವಿದರು. ಕುಟುಂಬದ ಹಿರಿಯರಿಗೆ ಮತ್ತು ಅಳಿಯಂದಿರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡುವ ಮೂಲಕ ಗೌರವಿಸಲಾಯಿತು.

ಪ್ರಾಸ್ತಾವಿಕ ಮತ್ತು ಸ್ವಾಗತವನ್ನು ಮಹಮ್ಮದ್ ಚೆನ್ನಾರ್ ನಿರ್ವಹಿಸಿದರು. ಬಶೀರ್ ಕಲ್ಲಪ್ಪಣೆ ಕಾರ್ಯಕ್ರಮದಲ್ಲಿ ಪಾಲಿಸಬೇಕಾದ ನಿಯಮ ನಿರ್ದೇಶನಗಳನ್ನು ನೀಡಿದರು ಮತ್ತು ಲತೀಫ್ ಈಶ್ವರಮಂಗಲ ಈವೆಂಟ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!