Ad Widget

ಅಂತ್ಯಸಂಸ್ಕಾರದ ವೇಳೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಅರಂತೋಡು ಗ್ರಾಮ ಗೌಡ ಸಮಿತಿ ನಿರ್ಧಾರ

ಅಂತ್ಯಸಂಸ್ಕಾರದ ವೇಳೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಅರಂತೋಡು ಗ್ರಾಮ ಗೌಡ ಸಮಿತಿ ನಿರ್ಧಾರ

. . . . . . .

ಗ್ರಾಮ ಗೌಡ ಸಮಿತಿ ಅರಂತೋಡಿನ ವತಿಯಿಂದ ಗೌಡ ಸಮುದಾಯದ ವ್ಯಕ್ತಿಯ ಅಂತಿಮ ನಮನ ಕಾರ್ಯದಲ್ಲಿ ಕೆಲ ಬದಲಾವಣೆ ತಂದು ಇತರರಿಗೆ ಮಾದರಿಯಾಗಲು ತೀರ್ಮಾನಿಸಿದ್ದು, ಆ ಬಗ್ಗೆ ಪ್ರಕಟಣೆ ನೀಡಿ ಕೆಳ ಕಾಣಿಸಿದ ಬದಲಾವಣೆ ಗಳನ್ನು ಪಾಲಿಸಲು ಸಮದಾಯಕ್ಕೆ ವಿನಂತಿಸಿದೆ.

ಗೌಡ ಗ್ರಾಮ ಸಮಿತಿ ಆರಂತೋಡು, ಗ್ರಾಮದ ಕುಟುಂಬಗಳ ಮುಖ್ಯಸ್ಥರು, ಹಿರಿಯರು, ಚಿಂತಕರು, ಊರುಗೌಡರು ಸೇರಿ ಚರ್ಚಿಸಿ ವಿಮರ್ಶಿಸಿ ತೆಗೆದುಕೊಂಡ ನಿರ್ಧಾರಗಳಾಗಿವೆ ಎಂದಿದೆ.

1)ಆರಂತೋಡು ಗ್ರಾಮದ ಗೌಡ ಜನಾಂಗದ ಕುಟುಂಬದ ಮನೆಗಳಲ್ಲಿ ವ್ಯಕ್ತಿಯೋರ್ವ ಮರಣ ಹೊಂದಿದಾಗ ಸಂಬಂಧಿಕರು, ನೆಂಟರು, ಆಪ್ತರು ಮಿತ್ರರು ಊರಿನವರು ಬಟ್ಟೆ, ಗಂಧದ ಹಾರ, ಹೂವಿನ ಮಾಲೆ, ಅಗರಬತ್ತಿ ಮೊದಲಾದ ವಸ್ತುಗಳನ್ನು ತಂದು ಶವಕ್ಕೆ ಒಪ್ಪಿಸುವುದರಿಂದ ರಾಶಿ ರಾಶಿ ಸುಡುವುದು, ಮತ್ತು ಬಿಸಾಡುವುದು, ಇದೊಂದು ಪ್ರಯೋಜನವಿಲ್ಲದ ವ್ಯವಸ್ಥೆಯಾಗಿದೆ. ಅನಾವಶ್ಯಕವಾಗಿ ಹಣದ ಪೋಲಾಗುವಿಕೆ ಎಂಬುದು ಅಂತ್ಯಸಂಸ್ಕಾರದಲ್ಲಿ ಕಂಡು ಬಂದ ಚಿತ್ರಣವಾಗಿದೆ.

2) ಅಂತಿಮ ನಮನ ಸಲ್ಲಿಸಲು ಬರುವ ಸಮಯದಲ್ಲಿ ಮೇಲೆ ತಿಳಿಸಿರುವ ವಸ್ತುಗಳ ಬದಲಾಗಿ ಅದೇ ಮೌಲ್ಯದ ಹಣವನ್ನು ಮೃತ ದೇಹದ ಹತ್ತಿರ ಬುಟ್ಟಿ/ಪಾತ್ರೆಯನ್ನು ಇಟ್ಟು ಅದರಲ್ಲಿ ಹಾಕುವುದರಿಂದ ಸಂಗ್ರಹಗೊಂಡ ಹಣವನ್ನು ಸಂಸ್ಕಾರದಿಂದ ಹಿಡಿದು ಮುಂದಿನ ಕಾರ್ಯಕ್ರಮಗಳಿಗೆ ಉಪಯೋಗಿಸುವುದರಿಂದ ಖರ್ಚಿನ ಭಾರವನ್ನು ಸರಿದೂಗಿಸಲು ಸಾಧ್ಯವಿದೆ. ಹಾಗೆ ಸಂಗ್ರಹಗೊಂಡ ಹಣವನ್ನು ಮನೆಯವರು ಉಪಯೋಗಿಸಲು ಇಷ್ಟಪಡದಿದ್ದಲ್ಲಿ
ಮೃತರ ಹೆಸರಲ್ಲಿ ವಿದ್ಯಾಸಂಸ್ಥೆಗಳಿಗೋ, ದೇವಸ್ಥಾನಗಳಿಗೂ ನಿಧಿಯಾಗಿ ನೀಡಬಹುದು.

3)ಗ್ರಾಮದ ಕುಟುಂಬಗಳಲ್ಲಿ ವ್ಯಕ್ತಿಯೋರ್ವ ಮರಣ ಹೊಂದಿದಾಗ ಕುಟುಂಬದ ಯಜಮಾನ ಯಾ ಊರಗೌಡರು ತೆರಳಿ ಹಣ ಹಾಕಲು ಬುಟ್ಟಿ ಯಾ ಪಾತ್ರೆಯನ್ನು ಇಡಲು ವ್ಯವಸ್ಥೆ ಮಾಡುವುದು. ಶವಕ್ಕೆ ಬಟ್ಟೆ, ಗಂಧದ ಮಾಲೆ, ಊದುಬತ್ತಿ, ಕೊರತೆಯಾಗದಂತೆ ಮೃತರ ಮನೆಯವರು,ಸೋದರದವರು, ರಕ್ತ ಸಂಬಂಧಿಗಳು ವ್ಯವಸ್ಥೆ ಮಾಡಿಕೊಳ್ಳುವುದು.

ಹಾಗಾಗಿ ಮುಂದಿನ ದಿವಸಗಳಲ್ಲಿ ಅರಂತೋಡು ಗ್ರಾಮದ ಗೌಡ ಕುಟುಂಬಸ್ಥರು ಮೇಲೆ ತಿಳಿಸಿರುವ ವಿಷಯವನ್ನು ಅನುಷ್ಠಾನಗೊಳಿಸಲು ಬದ್ಧರಾಗಬೇಕಾಗಬೇಂದು ವಿನಂತಿಸಿದೆ.

ಈ ನಿಯಮ ಪಾಲನೆಯಾದರೆ ಬಡ ಜನರ ಮನೆಗೆ ಬಹಳಷ್ಟು ಸಹಕಾರಿ ಹಾಗೂ ಮಾದರಿ ಕಾರ್ಯವಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!