Ad Widget

ಓಡಬಾಯಿ ತೂಗು ಸೇತುವೆಗೆ ಗ್ರಾಮ ಪಂಚಾಯತ್ ವತಿಯಿಂದ ಸೋಲಾರ್ ಲೈಟ್ ಅಳವಡಿಕೆ, ಕಂಬ ಹತ್ತಿ ದೀಪ ಅಳವಡಿಸಿದ ವಿಪತ್ತು ನಿರ್ವಾಹಣ ತಂಡದ ಸದಸ್ಯರು.

. . . . . . .

ಗ್ರಾಮ ಪಂಚಾಯತ್ ಅಜ್ಜಾವರದ ವತಿಯಿಂದ ದೊಡ್ಡೇರಿ ತೂಗು ಸೇತುವೆಗೆ ಗ್ರಾಮ ಪಂಚಾಯತ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ ಅನುದಾನದಲ್ಲಿ ಸೆಲ್ಕೋ ಸೋಲಾರ್ ರವರ ಸೋಲಾರ್ ದೀಪ ಅಳವಡಿಕೆ ಮಾಡಲಾಗಿದೆ.


ಸುಳ್ಯದ ಪ್ರಮುಖ ಪ್ರವಾಸಿತಾಣ ಹಾಗೂ ದೊಡ್ಡೇರಿ ಭಾಗದ ಜನರನ್ನು ನಗರಕ್ಕೆ ಜೋಡಿಸುವ ಮುಖ್ಯ ತೂಗುಸೇತುವೆ ಓಡಬಾಯಿಯಲ್ಲಿದ್ದು ಈ ತೂಗು ಸೇತುವೆಗೆ ವಿದ್ಯುತ್ ವ್ಯವಸ್ಥೆ ಬೇಕೆನ್ನುವುದು ಈ ಭಾಗದ ಜನರ ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಸ್ಪಂದಿಸಿ ಅಜ್ಜಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತ್ಯವತಿ ಬಸವನಪಾದೆ ಸದಸ್ಯರಾದ ರತ್ನಾವತಿ ಹಾಗೂ ಜಯರಾಮ ಇವರು ಸ್ಥಳೀಯ ಪ್ರತಿನಿಧಿಗಳಾಗಿದ್ದು ಇವರ ಮುತುವರ್ಜಿಯಲ್ಲಿ ಈ ಸೋಲಾರ್ ಚಾಲಿತ ವಿಧ್ಯುತ್ ದೀಪವನ್ನು ಅಳವಡಿಸಲಾಗಿದೆ ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹರ್ಷಿತ್ ದೊಡ್ಡೇರಿ, ಸುನಿಲ್ ದೊಡ್ಡೇರಿ ರವರು ಸೋಲಾರ್ ದೀಪವನ್ನು ಬೃಹದಾಕರದ ಕಂಬಕ್ಕೆ ಅಳವಡಿಸುವ ಕೆಲಸವನ್ನು ಮಾಡಿದ್ದಾರೆ.ಈ ಸಂದರ್ಭದಲ್ಲಿ ಸೆಲ್ಕೊ ಸೋಲಾರ್ ಮ್ಯಾನೇಜರ್ ಆಶಿಕ್ , ಸೆಲ್ಕೊ ಸಿಬ್ಬಂದಿಗಳು ಊರಿನ ನಾಗರಿಕರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!