ಸಂಪಾಜೆಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ

ಪೆಲ್ತಡ್ಕದಿಂದ ಸಂಪಾಜೆ ತನಕ ಸ್ವಚ್ಛತಾ ಅಭಿಯಾನ

ಸಂಪಾಜೆ: ಭಾರತದ ಸಂವಿಧಾನ ದಿನಾಚರಣೆಯ ಅಂಗವಾಗಿ ನವೆಂಬರ್ 26ರಂದು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೆಲ್ತಡ್ಕದಿಂದ ಸಂಪಾಜೆ ತನಕ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

. . . . . . . . .

ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ನಡೆದ ಈ ಸ್ವಚ್ಛತಾ ಅಭಿಯಾನದಲ್ಲಿ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮಸೀದಿ ಮತ್ತು ಚರ್ಚ್ ಸಮಿತಿಗಳ ಸದಸ್ಯರು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಮತ್ತು ಕೃಷಿ ಇಲಾಖೆಯ ಸಿಬ್ಬಂದಿ, ಸಂಜೀವಿನಿ ಒಕ್ಕೂಟದ ಸದಸ್ಯರು, ಆಟೋ ಚಾಲಕರ ಸಂಘದ ಪ್ರತಿನಿಧಿಗಳು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.

. . . . . . .

ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ನಹೀಂ ಫೈಝಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ. ಹಮೀದ್ ಗೂನಡ್ಕ, ಸುಮತಿ ಶಕ್ತಿವೇಲು, ಸುಂದರಿ ಮುಂಡಡ್ಕ, ಮಾಜಿ ಉಪಾಧ್ಯಕ್ಷರಾದ ಎಸ್.ಕೆ. ಹನೀಫ್, ಮಾಜಿ ಸದಸ್ಯರಾದ ನಾಗೇಶ್ ಪಿ.ಆರ್., ವಿಮಲ ಪ್ರಸಾದ್, ಅನುಪಮ, ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾದ ಪಿ.ಕೆ. ಉಮ್ಮರ್, ಕಾರ್ಯದರ್ಶಿ ಉಸ್ಮಾನ್ ಗೂನಡ್ಕ, ಕಲ್ಲುಗುಂಡಿ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಎಂ.ಸಿ. ಅಬೂಬಕ್ಕರ್, ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯ ಸಾಜಿದ್ ಅಜ್ಹರಿ, ಅಬ್ದುಲ್ ಖಾದರ್ ಮೊಟ್ಟಂಗಾರ್, ಮುಸ್ತಾಫ ಪಾಂಡಿ, ಸಂಪಾಜೆ ಬದ್ರ್ ಜುಮಾ ಮಸೀದಿಯ ಅಧ್ಯಕ್ಷರು, ಹೋಲಿ ಟ್ರಿನಿಟಿ ಚರ್ಚ್ ಸಮಿತಿಯ ಲುಕಾಸ್ ಕುರಿಯಕೋಸ್, ಜೋನಿ, ಪ್ರಕಾಶ್, ಜೋಯಿ, ಜೋಸೆಫ್, ಪಾಪ್ಪಿ, ಕ್ರೈಸ್ತ ಸಂಘಟನೆಯ ಸಂತೋಷ್ ಕ್ರಾಸ್ತಾ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಾಮಚಂದ್ರ ಕಲ್ಲಗದ್ದೆ, ಮುಖ್ಯೋಪಾಧ್ಯಾಯರಾದ ಸಂಪತ್ ಕುಮಾರ್, ಹನುಮಂತ ಮಾಸ್ಟರ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಅಲ್ಲದೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್ ಹಾಗೂ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರಾದ ಧರ್ಮಕಲಾ, ಪುಷ್ಪವತಿ, ಪುಷ್ಪ, ಆರೋಗ್ಯ ಇಲಾಖೆಯ ಹರ್ಷಿತಾ, ಆಶಾ ಕಾರ್ಯಕರ್ತೆಯರು, ಕೃಷಿ ಪತ್ತಿನ ಸಹಕಾರಿ ಸಂಘದ ವ್ಯವಸ್ಥಾಪಕರಾದ ವೀರೇಂದ್ರ ಜೈನ್, ಕೃಷ್ಣವೇಣಿ, ಮಮ್ತಾಜ್, ಆಂಬುಲೆನ್ಸ್ ಸಂಘಟನೆಯ ತಾಜ್ ಟರ್ಲಿ, ಶರತ್ ಕಿಲಾರ್, ಆಟೋ ಚಾಲಕರ ಸಂಘದ ಯಶೋಧರ, ಸುಧಾಕರ್, ಒಡಿಯೂರು ಸಂಘದ ರತ್ನಾವತಿ, ಕೃಷಿ ಸಖಿ ಮೋಹಿನಿ ಪೇರಡ್ಕ, ಮುರಾರಿ ಪೆಲ್ತಡ್ಕ, ಸಾಧುಮೋನ್ ಪೇರಡ್ಕ, ಸಂಜೀವಿನಿ ಒಕ್ಕೂಟದ ಕಾಂತಿ, ಭಾರತಿ, ಯಶೋಧ, ಯಮುನಾ ಹೋಟೆಲ್ ಕಲ್ಲುಗುಂಡಿ ಹಾಗೂ ಟೀ ಸ್ಟೋರಿ ಸಿಬ್ಬಂದಿಗಳು, ಶಿಲ್ಪ, ಸನತ್, ವೆಂಕಪ್ಪ ಗೌಡ ಪೆರುಂಗೋಡಿ, ಮೋಹನಾಂಗಿ ತೆಕ್ಕಿಲ್, ಯಾದವ ಕಲ್ಲುಗುಂಡಿ, ಕಿಶೋರ್ ಬಿ.ಎಸ್., ಸಮದ್ ಗೂನಡ್ಕ, ಹಸೈನಾರ್ ಚಟ್ಟೆಕಲ್ಲು, ಸುಂದರ ಚಟ್ಟೆಕಲ್ಲು, ಮಾಜಿ ಪಂಚಾಯತ್ ಸದಸ್ಯೆ ರಜನಿ ಶರತ್, ಮಂಜುನಾಥ್ ಕಲ್ಲುಗುಂಡಿ, ಗ್ರಾಮ ಒನ್ ಕೇಂದ್ರದ ಕಿಶೋರ್ ಕುಮಾರ್, ಖಲೀಲ್ ಪೇರಡ್ಕ, ಕಿಶೋರ್ ಪಿ.ಬಿ. ಮತ್ತಿತರರು ಭಾಗವಹಿಸಿದ್ದರು.

ವಿವಿಧ ಧರ್ಮ, ಸಂಘಟನೆ ಹಾಗೂ ಇಲಾಖೆಗಳ ಪ್ರತಿನಿಧಿಗಳು ಒಗ್ಗೂಡಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದ್ದು, ಗ್ರಾಮದ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿ ಅಭಿಯಾನ ಗಮನ ಸೆಳೆಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading