ದ್ವಾದಶ ರಾಶಿಗಳ ದಿನ ಭವಿಷ್ಯ




ದಿನಾಂಕ:27-11-2026 ಶುಕ್ರವಾರ
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197
*01,🐏ಮೇಷರಾಶಿ🐏*
📃,ನಿಮ್ಮನ್ನು ನೀವು ವಿಮರ್ಶಿಸುವ ಸಕಾಲ ಇದು. ನೀವು ಸಾಗಿ ಬಂದ ದಾರಿಯನ್ನು ಮತ್ತೊಮ್ಮೆ ಸಿಂಹಾವಲೋಕನ ಮಾಡಿಕೊಳ್ಳಿ. ಇದು ನಿಮ್ಮ ಮುಂದಿನ ಬಾಳಿನ ಮಾರ್ಗಸೂಚಿ ಆಗುವುದು. ನಿಮ್ಮ ಶಕ್ತಿಯ ಸೂಕ್ತ ನಿರ್ವಹಣೆಯಿಂದ ಕಾರ್ಯದಲ್ಲಿ ಜಯ ಹೊಂದಬೇಕು,
ಗಮನಿಸಿ:-ಮಾನಸಿಕ ಶಾಂತಿಗಾಗಿ ಕೆಲವು ದಾನ ಧರ್ಮಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ,
ಪರಿಹಾರ:-ತಂದೆತಾಯಿಯರ ಆಶೀರ್ವಾದ ಪಡೆಯಿರಿ,
*02,🐂ವೃಷಭರಾಶಿ🐂*
📃,ನಿಮ್ಮ ಬಗೆಗಿನ ಕೆಲವು ವಿಚಾರಗಳನ್ನು ತಿಳಿದು ನಿಮ್ಮ ಪ್ರಗತಿಯನ್ನು ಚಿವುಟಿ ಹಾಕುವ ಪ್ರಯತ್ನಗಳನ್ನು ಕೆಲವರು ಮಾಡುತ್ತಿರುವರು. ಇಂತಹ ಜನರಿಂದ ಆದಷ್ಟು ದೂರ ಉಳಿಯುವುದು ಒಳ್ಳೆಯದು,
ಗಮನಿಸಿ:- ಇಂದು ನಿಮಗೆ ದೊರಕುವ ಹೊಸ ಅವಕಾಶಗಳ ಬಗ್ಗೆ ವಿಮರ್ಶೆನೇ ಮಾಡುವುದು ಉತ್ತಮ,
ಪರಿಹಾರ:-ಹನುಮಾನ್‌ ಚಾಲೀಸ್‌ ಪಠಣ ಮಾಡಿ,
*03,🧜‍♀️ಮಿಥುನರಾಶಿ🧜‍♀️*
📃,ಏಕಾಏಕಿ ದೊಡ್ಡ ದೊಡ್ಡ ಯೋಜನೆಗಳನ್ನು ಬೆನ್ನು ಹತ್ತದಿರಿ. ಅಟ್ಟವನ್ನು ಏರದವರು ಬೆಟ್ಟವನ್ನು ಏರಬಹುದೇ? ಹಾಗಾಗಿ ತಾಳ್ಮೆಯಿಂದ ನಿಮ್ಮ ಮುಂದೆ ಇರುವ ಸರಳ ಕೆಲಸಗಳನ್ನು ಮನಸ್ಸುಕೊಟ್ಟು ಮಾಡಿ ಮತ್ತು ಆತ್ಮವಿಶ್ವಾಸ ಗಳಿಸಿಕೊಳ್ಳಿ,
ಗಮನಿಸಿ:-ಸೃಜನಶೀಲತೆ ಮತ್ತು ಉತ್ಸಾಹ ನಿಮ್ಮನ್ನು ಮತ್ತೊಂದು ಅನುಕೂಲಕರ ದಿನಕ್ಕೆ ಕೊಂಡೊಯ್ಯುತ್ತದೆ,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ನೀಡಿ,
*04,🦀ಕಟಕ ರಾಶಿ🦀*
📃,ನಿಮ್ಮಿಂದಲೇ ಸಮಗ್ರ ವಿಷಯವನ್ನು ತಿಳಿದುಕೊಂಡು ಅದಕ್ಕೆ ಬಣ್ಣ ಹಚ್ಚಿ ನಿಮ್ಮ ವಿರುದ್ಧ ಪಿತೂರಿ ನಡೆಸುವ ಜನರಿದ್ದಾರೆ. ಹಾಗಾಗಿ ಅಂತಹ ವ್ಯಕ್ತಿಗಳಿಂದ ದೂರ ಇರುವುದು ಒಳ್ಳೆಯದು. ನಿಮ್ಮ ಬಾಸ್ ಇಂದು ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು,
ಗಮನಿಸಿ:-ದೂರಪ್ರಯಾಣದಿಂದತೊಂದರೆಯುಂಟಾಗುವುದು,
ಪರಿಹಾರ:-ಮನೆ ದೇವರನ್ನು ಮನದಲ್ಲಿ ನೆನೆಯಿರಿ,
*05,🦁ಸಿಂಹ ರಾಶಿ🦁*
📃,ನಿಮ್ಮ ಅನೇಕ ವಿಚಾರಗಳನ್ನು ಸುಮ್ಮನೆ ಯಾರ ಜತೆಗೂ ಹಂಚಿಕೊಳ್ಳದಿರಿ. ಹೊರಳು ದಾರಿಯಲ್ಲಿರುವ ನಿಮ್ಮ ದಾರಿ ತಪ್ಪಿಸಲು ಹಲವರು ಕಾದಿದ್ದಾರೆ. ಆದರೆ ಸತ್ಯ ನಿಷ್ಠೆಗೆ ಯಾವಾಗಲು ಜಯ. ಹಾಗಾಗಿ ನೀವು ಗೆಲುವಿನ ನಗು ಬೀರುವಿರಿ,
ಗಮನಿಸಿ:-ಇಂದು ನಿಮಗೆ ಸಂತೋಷದ ವಿಷಯ ತಿಳಿಯುತ್ತದೆ,
ಪರಿಹಾರ:-ಶ್ರೀಗುರುರಾಘವೇಂದ್ರರ ಸ್ಮರಣೆ ಮಾಡಿ,
*06,👩‍🦳ಕನ್ಯಾ ರಾಶಿ👩‍🦳*
📃,ನೀವುಶಾಂತವಾಗಿದ್ದರೂ ನಿಮ್ಮನ್ನು ಅಶಾಂತ ರೂಪಕ್ಕೆ ತಳ್ಳುವವರನ್ನು ನೀವು ಎದುರಿಸಬೇಕಾಗುತ್ತದೆ. ಗೆಲ್ಲುವುದು ನಿಮಗೆ ಸಾಧ್ಯವಾದರೂ ನಿಮ್ಮ ಚೈತನ್ಯವನ್ನು ಕಲಕುವ ವಿಚಾರ ಹೆಚ್ಚಾಗವು ಸಾಧ್ಯತೆ ಇದೆ. ಬಯಸಿದ ಕಾರ್ಯವು ಈಡೇರಲು ಅಧಿಕ ಶ್ರಮ ಪಡುತ್ತಿದ್ದೀರಿ. ಆದರೆ ಯಶಸ್ಸು ಮರೀಚಿಕೆ ಆಗುತ್ತಿದೆ,
ಗಮನಿಸಿ:- ಸಹೋದರರ ಸಂಗಡ ಹೊಂದಿಕೊಂಡು ಹೋಗುವುದು ಉತ್ತಮ,
ಪರಿಹಾರ:-ಮನೆ ದೇವರ ಪ್ರಾರ್ಥನೆ/ದರ್ಶನ ಮಾಡಿ,
*07,⚖️ತುಲಾ ರಾಶಿ⚖️*
📃,ಕಾಡಿನ ಸಿಂಹಕ್ಕೆ ಹಸಿವಿದ್ದರೂ ಅದು ಹುಲ್ಲು ತಿನ್ನುವುದಿಲ್ಲ. ಅಂತೆಯೇ ಕೆಲವೊಮ್ಮೆ ನಿಮ್ಮಿಂದ ತಪ್ಪಾದರೂ ನೀವು ಕ್ಷಮೆಯಾಚಿಸುವುದಿಲ್ಲ. ಇದರಿಂದಾಗಿ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವರು, ನಡೆನುಡಿಯಲ್ಲಿ ಸೌಮ್ಯತೆ ಇರಲಿ, ಹಣದ ಪರಿಸ್ಥಿತಿ ಈ ದಿನ ಸುಧಾರಿಸುತ್ತದೆ,
ಗಮನಿಸಿ:-ವಿಳಂಬಿತ ಸಾಲವನ್ನುತಪ್ಪದೆ ಈ ದಿನ ಪಾವತಿ ಮಾಡುವುದು ಒಳಿತು,
ಪರಿಹಾರ:-ಶ್ರೀಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ,
*08,🦂ವೃಶ್ಚಿಕ ರಾಶಿ🦂*
📃,ಮಾನಸಿಕ ಕಸಿವಿಸಿ ಇದ್ದರೂ ಅದೇ ನಿಮ್ಮ ಬೆಂಗಾವಲಿಗೆ ಬರುವುದು. ಒಂದು ನಿರ್ದಿಷ್ಟ ಕಾರ್ಯವನ್ನು ಮಾಡಲು ಹವಣಿಸುತ್ತಿದ್ದ ನಿಮಗೆ ಭಗವಂತನೇ ಅದನ್ನು ಒಳ್ಳೆಯ ಉದ್ದೇಶಕ್ಕಾಗಿ ತಪ್ಪಿಸುವನು. ಇದರಿಂದ ಮುಂದೆ ಒಳಿತಾಗುವುದು,
ಗಮನಿಸಿ:-ಧೈರ್ಯದಿಂದ ತೆಗೆದುಕೊಂಡ ವಿಚಾರಗಳು ನಿಮಗೆ ಗೌರವ ಮತ್ತು ಕೀರ್ತಿಯನ್ನು ತಂದು ಕೊಡುವುದು,
ಪರಿಹಾರ:-ತಾಯಿ ದುರ್ಗೆಯನ್ನು ಪ್ರಾರ್ಥಿಸಿ,
*09,🏹ಧನುಸ್ಸುರಾಶಿ🏹*
📃,ಮನುಷ್ಯ ಮನುಷ್ಯನ ಸಂಬಂಧದ ನೆಲೆಯನ್ನು ನೀವು ಅರಿಯುವಿರಿ. ನೀವು ನಿಮ್ಮದೆ ಆದ ತರ್ಕ ಕುತರ್ಕಗಳಿಂದ ಬಾಹ್ಯ ಜಗತ್ತಿನ ಜನರ ಸಂಪರ್ಕವನ್ನು ಕಳೆದುಕೊಳ್ಳುವಿರಿ. ಮನುಷ್ಯ ಸಂಘಜೀವಿ ಎಲ್ಲರ ಸಹಕಾರವು ಮುಖ್ಯ ಎಂದು ತಿಳಿಯಿರಿ. ನೂತನ ಮಿತ್ರರು ಸೇರ್ಪಡೆ ಮಾಡಿಕೊಳ್ಳಿ. ಅವರೊಂದಿಗಿನ ಮಾತುಕತೆಯು ಹೊಸ ಉದ್ಯಮಕ್ಕೆ ನಾಂದಿಹಾಡಿ,
ಗಮನಿಸಿ:-ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಕಿರಿಕಿರಿ ಸಂಭವ ಇದೆ, ಪರಿಹಾರ:-ಶಿವನ ಮಂತ್ರವನ್ನು ಪಠಿಸಿ,
*10,🐊ಮಕರ ರಾಶಿ🐊*
📃,ದುಡ್ಡೇ ದೊಡ್ಡಪ್ಪ ವಿದ್ಯೆ ಅವರಪ್ಪ. ಹಾಗಾಗಿ ನೀವು ಜಾಣ್ಮೆಯಿಂದ ಕೆಲಸ ನಿರ್ವಹಿಸುವ ಮುಂಚೆ ಮುಂಗಡ ಹಣವನ್ನು ಪಡೆದೆ ಆರಂಭಿಸಿ. ಇದರಿಂದ ನಿಮಗೂ ನೆಮ್ಮದಿ ಉಂಟಾಗುವುದು. ಮಾನಸಿಕ ಭಯ ನೀಮ್ಮ ದೈರ್ಯಗೆಡಿಸಬಹುದು,
ಗಮನಿಸಿ:-ಸಕಾರಾತ್ಮಕ ಚಿಂತನೆಯಿಂದ ಭವಿಷ್ಯದ ಬಗ್ಗೆ ಚಿಂತಿಸಿ ಮುನ್ನಡೆಯಿರಿ,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ,
*11,⚱️ಕುಂಭ ರಾಶಿ⚱️*
📃,ಮನಸ್ಸಿನ ಹೊಯ್ದಾಟ ಇದ್ದರೂ ಸಂಕಲ್ಪಿತ ಕಾರ್ಯಸಿದ್ಧಿಗೆ ಅವಕಾಶ ಕೂಡಿ ಬರುವುದು. ಆರೋಗ್ಯದ ಮೇಲೆ ಗಮನವಿರಲಿ. ಇಂದಿನ ಎಲ್ಲಾ ಕೆಲಸ ಕಾರ್ಯಗಳು ಕೈಗೂಡುವವು. ರಿಯಲ್ ಎಸ್ಟೇಟ್ ಮತ್ತು ಆರ್ಥಿಕ ವ್ಯವಹಾರಗಳಿಗೆ ಒಳ್ಳೆಯ ದಿನ,
ಗಮನಿಸಿ:-ನಿಮ್ಮಜ್ಞಾನನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು,
ಪರಿಹಾರ:-ಗುರುಗಳ ಮಾರ್ಗ ದರ್ಶನ ಪಡೆಯಿರಿ,
*12,🐬ಮೀನ ರಾಶಿ🐬*
📃,ಎಲ್ಲಾ ಸಕಲ ಸಂಪತ್ತು ಇದ್ದರೂ ಅದನ್ನು ಅನುಭವಿಸಲು ಆಗುತ್ತಿಲ್ಲ. ಎಲ್ಲವೂ ಎದುರಿಗೆ ಇದ್ದರೂ ಅದು ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ ನಿತ್ಯ ಜೀವನಕ್ಕೆ ಉಪಯೋಗಕ್ಕೆ ಬರುತ್ತಿಲ್ಲ.ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ,
ಗಮನಿಸಿ:-ನಿಮ್ಮ ಕೆಲಸದ ಮೇಲೆ ಗಮನಹರಿಸಿ,
ಪರಿಹಾರ:-ಸಾಯಿಬಾಬಾರ ದರ್ಶನ ಮಾಡಿ,

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading