ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜ್‌ನಲ್ಲಿ “ಉತ್ಸವ್-2026” ಸಾಂಸ್ಕೃತಿಕ ಸಂಭ್ರಮ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ “ಉತ್ಸವ್-2026” ಸಾಂಸ್ಕೃತಿಕ ಸಂಭ್ರಮ ಸೆ. 26ರಂದು ನಡೆಯಿತು. ಅಕಾಡೆಮಿಆಫ್ ಲಿಬರಲ್ ಎಜ್ಯುಕೇಶನ್(ರಿ), ಕಮಿಟಿ ‘ಬಿ’ ಇದರ ಅಧ್ಯಕ್ಷರಾಗಿರುವ ಡಾ. ರೇಣುಕಾಪ್ರಸಾದ್ ಕೆ.ವಿ., ಸೆಕ್ರೆಟರಿ, ಎ.ಒ.ಎಲ್.ಇ (ರಿ) ಕಮಿಟಿ ‘ಬಿ’ ಡಾ. ಜ್ಯೋತಿ ಆರ್. ಪ್ರಸಾದ್ ಇವರ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಆಯೋಜಿಸಲಾಯಿತು.

. . . . . . . . .

ಪ್ರಾಂಶುಪಾಲ ಡಾ. ಸುರೇಶ ವಿ. ಕಾರ್ಯಕ್ರಮವನ್ನು ಉದ್ಘಾಟಿಸಿ, ಕಲೆ, ಸಂಸ್ಕೃತಿ, ಪರಂಪರೆ ಮತ್ತು ವಿದ್ಯಾರ್ಥಿಗಳ ಪ್ರತಿಭೆಗಳ ಸಂಗಮವಾಗಿ ಉತ್ಸವ ಮೂಡಿಬರಲಿ ಎಂದು ಶುಭ ಹಾರೈಸಿದರು. ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ಹಾಗೂ ಎಲ್ಲಾ ವಿಭಾಗ ಮುಖ್ಯಸ್ಥರುಗಳ ಸಮ್ಮುಖದಲ್ಲಿ ಉತ್ಸವದ ಬ್ಯಾನರ್ ವಾದ್ಯ ಘೋಷಗಳೊಂದಿಗೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭದ್ರತಾ ಸಿಬ್ಬಂದಿ ಕುಶಾಲಪ್ಪ ಎನ್. ಹಾಗೂ ಸ್ವಚ್ಚತಾ ಸಿಬ್ಬಂಧಿಗಳ ಕೆಲಸವನ್ನು ಶ್ಲಾಘಿ ಸುತ್ತಾ ಉಡುಗೆಯನ್ನು ವಿದ್ಯಾರ್ಥಿಗಳು ಉಡುಗೊರೆಯಾಗಿ ವಿತರಿಸಿದ್ದು ವಿಶೇಷವಾಗಿತ್ತು. ಮಧ್ಯಾಹ್ನದ ಬೋಜನಕ್ಕಾಗಿ ಕೇರಳದ ಸಾಂಪ್ರದಾಯಿಕ ಓಣಂ ಸದ್ಯವನ್ನು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸವಿದು ಸಂಭ್ರಮಿಸಿದರು. ಕಾಲೇಜಿನ ಪರಿಸರವನ್ನು ತಳಿರು ತೋರಣಗಳಿಂದ ಸಿಂಗರಿಸಿ, ಕೇರಳದ ಚೆಂಡೆ ವಾದನ, ಪೂಕಳಂ, ತಿರುವಾದಿರ, ಗರುಡ ನೃತ್ಯ, ನಾಸಿಕ್ ಬ್ಯಾಂಡ್, ಫೋಟೋ ಬೂತ್, ಗೊಂಬೆ ಕುಣಿತದೊಂದಿಗೆ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ಮೂಡಿ ಬಂದಿತು. ವಿದ್ಯಾರ್ಥಿಗಳು ಹಾಗೂ ಸಿಬ್ಬಂಧಿಗಳಿಗೆ ವಿವಿಧ ಆಕರ್ಷಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರೊ.ಕೃಷ್ಣರಾಜ್ ಎಂ.ವಿ. ಕಾರ್ಯಕ್ರಮ ಸಂಯೋಜಕರು ನಿರೂಪಣೆ ಮತ್ತು ಗಾಯನದ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading