ದ್ವಾದಶ ರಾಶಿಗಳ ದಿನ ಭವಿಷ್ಯ = ದಿನಾಂಕ :29-09-2026 = ವಾರ : ಮಂಗಳವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

*01,🐏ಮೇಷರಾಶಿ🐏*📃,ಈ ದಿನ ನಿಮಗೆ ಶುಭವಾಗಿದೆ ಹೊಸ ವಾಹನ ಮನೆ ಖರೀದಿಯ ವಿಚಾರವಾಗಿ ಎಲ್ಲವೂ ಸಕಾರಾತ್ಮಕವಾಗಿ ನಡೆಯಲಿವೆ, ಅಥವಾ ಮನೆಗೆ ಸಂಬಂದಿಸಿದ ವಸ್ತುಗಳನ್ನು ಖರೀದಿ ಮಾಡಬಹುದು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಜಾಗೃತ ವಹಿಸುವುದು ಉತ್ತಮ,ಗಮನಿಸಿ:-ನಿಮ್ಮ ವಿರೋಧಿಗಳು ನಿಮ್ಮ ದಿಕ್ಕು ಬದಲಿಸುವ ಕೆಲಸ ಮಾಡಬಹುದು, ಪರಿಹಾರ:-ಈದಿನಗಣಪತಿಯ ಆರಾಧನೆ ಮಾಡಿ,

. . . . . . .

*02,🐂ವೃಷಭರಾಶಿ🐂*📃,ಇಂದು ನೀವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವಿರಿ, ಅನವಶ್ಯಕವಾಗಿ ಮಾತನಾಡುವುದರಿಂದ ಸಮಸ್ಯೆಗೆ ಸಿಲುಕುವಿರಿ, ಮಾತನಾಡುವಾಗ ನಕಾರಾತ್ಮಕ ಪದಗಳನ್ನು ಬಳಸಬೇಡಿ, ನಿಮ್ಮ ಮಕ್ಕಳ ಕಡೆ ಸ್ವಲ್ಪ ಕಾಳಜಿ ವಹಿಸಿ,ಗಮನಿಸಿ:-ಇಂದು ನಿಮ್ಮ ಕುಟುಂಬದ ಜೊತೆ ಸಮಯವನ್ನು ಕಳೆಯುವುದುಉತ್ತಮ,ಪರಿಹಾರ:-ಹನುಮಾನ್ ಚಾಲೀಸ ಓದಿ,

*03,👥ಮಿಥುನರಾಶಿ👥*📃,ಈ ದಿನ ನೀವು ಕುಟುಂಬ ಸಮೇತ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ, ಇಂದು ನೀವು ವಿಶೇಷ ಸ್ಥಾನಮಾನವನ್ನು ಪಡೆಯಬಹುದು ಇದರಿಂದ ಮಾನಸಿಕ ತೃಪ್ತಿಯನ್ನು ಪಡೆಯಬಹುದು, ನಿಮ್ಮ ನಂಬಿಕೆಯೇ ನಿಮ್ಮ ನೈತಿಕತೆಯನ್ನು ಹೆಚ್ಚಿಸುತ್ತದೆ,ಗಮನಿಸಿ:- ಇಂದು ಗುರು ಹಿರಿಯರ ಮುಂದೆ ಮಾತನಾಡುವಾಗ ವಾದ ಮಾಡುವುದು ಬೇಡ,ಪರಿಹಾರ:-ಈಶ್ವರನನ್ನು ಪ್ರಾರ್ಥಿಸಿ,

*04,🦀ಕಟಕ ರಾಶಿ🦀*📃,ಈ ದಿನ ಯಾವುದೇ ಹಣಕಾಸಿನ ವ್ಯವಹಾರನ್ನು ಮಾಡಬೇಡಿ. ಸಾಲ ಕೊಡುವುದು ತರುವುದು ಬೇಡ. ನಿಮ್ಮ ಯಾವುದಾದರು ಒಂದು ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಹೆದರಾಗುವ ಸಾಧ್ಯತೆ ಇದೆ,ಗಮನಿಸಿ:-ಶುಭ ಕಾರ್ಯಗಳು ಮತ್ತು ಧಾರ್ಮಿಕ ಕಾರ್ಯಗಳನ್ನು ಮುಂದೂಡುವದು ಉತ್ತಮ,ಪರಿಹಾರ:-ಲಲಿತ ಸಹಸ್ರ ನಾಮ ಅಥವಾ ಶ್ರೀಸೂಕ್ತ ಪಾರಾಯಣ ಮಾಡಿ,

*05,🦁ಸಿಂಹ ರಾಶಿ🦁*📃,ನಿಮ್ಮ ಕೋಪವೂ ಹೆಚ್ಚು ಸಮಸ್ಯೆಗಳನ್ನು ಉಂಟುಮಾಡಬಹುದು. ಗಂಡ ಹೆಂಡತಿಯರ ಮಧ್ಯದಲ್ಲಿ ಅಥವಾ ಬಂಧುಮಿತ್ರರೊಂದಿಗೆ ಜಗಳಗಳಾಗುವ ಸಂಭವವಿದೆ,ಉದ್ಯೋಗದ ವಿಚಾರದಲ್ಲಿ ನಿಮ್ಮ ಮೇಲಾಧಿಕಾರಿಗಳ ಸಹಾಯ ಮತ್ತು ಸಲಹೆ ಪಡೆದು ಕೆಲಸ ಮಾಡುವುದು ಒಳ್ಳೆಯದು,ಗಮನಿಸಿ:-ನಿಮ್ಮ ಮುಂದಿನ ಹೊಸ ಕಾರ್ಯಾ ಆರಂಭದ ಬಗ್ಗೆ ಯಾರೊಂದಿಗೂ ಚರ್ಚಿಸಬೇಡಿ,ಪರಿಹಾರ:-ಶ್ರೀ ಕೃಷ್ಣನನ್ನು ಆರಾಧಿಸಿ ಉತ್ತಮ ಫಲ ಸಿಗುವುದು,

*06,👩‍🦳ಕನ್ಯಾ ರಾಶಿ👩‍🦳*📃,ಈ ದಿನ ನೀವು ಮಾಡುವ ಕೆಲಸ ಕಾರ್ಯಗಳು ಕೆಲವು ತೊಂದರೆಗಳಿಂದ ಕೂಡಿರಬಹುದು, ಈ ಸಮಯದಲ್ಲಿ ಉದ್ಯೋಗ ಸ್ಥಳದಲ್ಲಿ ನಿಮ್ಮ ಮೇಲೆ ನಕಾರಾತ್ಮಕ ಮಾತುಗಳು ಕೇಳಿ ಬರಬಹುದು, ಆದರೆ ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತವಾಗಿಯೂ ಬರಬಹುದು,ಗಮನಿಸಿ:-ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ,ಪರಿಹಾರ:-ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಪೂಜಿಸಿ,

*07,⚖️ತುಲಾ ರಾಶಿ⚖️*📃,ಈ ದಿನ ಯಾವುದೇ ರೀತಿಯ ಸವಾಲು ಮತ್ತು ಸ್ಪರ್ಧೆಗಳಿಂದ ದೂರವಿರಿ, ಇಲ್ಲವಾದರೆ ಸೋಲನ್ನು ಅನುಭವಿಸಬೇಕಾಗುವುದು. ಬಂಧು ಮಿತ್ರರು ಹಾಗು ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ. ನಿರ್ಮಾಣ ಕಾರ್ಯಗಳನ್ನು ಮಾಡುವವರಿಗೆ ಸ್ವಲ್ಪದರ ಮಟ್ಟಿಗೆ ಶುಭ ಫಲಗಳು ಲಭಿಸುತ್ತವೆ,ಗಮನಿಸಿ:-ಷೇರು ಮಾರುಕಟ್ಟೆಗೆ ಸಂಬಂಧಿಸಿ ವ್ಯವಹಾರದಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ,ಪರಿಹಾರ:-ಶ್ರೀ ಲಲಿತ ಸಹಸ್ರನಾಮ ಪಾರಾಯಣ ಮಾಡಿ,

*08,🦂ವೃಶ್ಚಿಕ ರಾಶಿ🦂*📃,ಪ್ರೀತಿ ಪ್ರೇಮದ ವ್ಯವಹಾರಗಳಿಗೆ ಈ ದಿನವೂ ಸೂಕ್ತವಾಗಿದೆ. ಪಾಲುದಾರರು ಹಾಗು ಸಹೋದ್ಯೋಗಿಗಳೊಂದಿಗೆ ಯಾವುದೇ ರೀತಿಯ ಜಗಳಗಳನ್ನು ಮಾಡಿಕೊಳ್ಳಬೇಡಿ. ನಿಮ್ಮ ದೈಹಿಕ ಕಾಮನೆಗಳು ಇಂದು ಈಡೇರಲಿವೆ,ಗಮನಿಸಿ:- ಈ ದಿನ ಮಿಶ್ರ ವರ್ಣದ ವಸ್ತ್ರಗಳನ್ನಧಾರಣೆ ಮಾಡುವದು ಬೇಡ,ಪರಿಹಾ:- ನಿಮ್ಮ ಗ್ರಾಮ ದೇವತೆಯನ್ನು ಪೂಜಿಸಿ,

*09,🏹ಧನುಸ್ಸುರಾಶಿ🏹*📃,ಇಂದು ನಿಮ್ಮ ರಾಶಿಯವರಿಗೆ ಮಿಶ್ರ ಫಲಗಳು ಇರುತ್ತವೆ, ವ್ಯಪಾರ ವ್ಯವಹಾರ ಅಥವಾ ಕೆಲಸದ ಸ್ಥಳಗಳಲ್ಲಿ ಜಾಗುರೂಕರಾಗಿರಿ, ಉತ್ತಮ ಆಹಾರ ಸೇವನೆಯ ಕಡೆ ಗಮನ ಹರಿಸಿ ಉತ್ತಮ ಇಲ್ಲವಾದರೆ ಉದರ ಸಂಬಂದಿ ತೊಂದರೆಗಳು ಕಾಡಬಹುದು, ಬಟ್ಟೆ ವ್ಯಾಪಾರ ಮಾಡುವವರಿಗೆ ಈ ದಿನ ವಿಶೇಷವಾದ ಲಾಭವಾಗಲಿದೆ,ಗಮನಿಸಿ:- ಖನಿಜ ಸಂಬಂಧಿತ ಶೇರುಗಳಿಂದಲಾಭ ಬರುವ ಸಾಧ್ಯತೆ ಇದೆ,ಪರಿಹಾರ:-ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ,

*10,🐊ಮಕರ ರಾಶಿ🐊*📃,ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ನಿಮ್ಮ ಹರ್ಷ ಚಿತ್ತದ ಮನಸ್ಸು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮ ಮಕ್ಕಳ ಆರೋಗ್ಯದ ಕಡೆ ಗಮನಹರಿಸಿ. ವಾಹನ ಚಾಲನೆ ಮಾಡುವುದು ಅಥವಾ ದೂರ ಪ್ರಯಾಣ ಮಾಡುವುದು ಸೂಕ್ತವಲ್ಲ. ಸಹೋದ್ಯೋಗಿಗಳೊಡನೆ ಮನಸ್ತಾಪ ಬರಬಹುದು,ಗಮನಿಸಿ:- ಇಂದು ನಿಮ್ಮ ಕುಟುಂಬದ ಜೊತೆ ಸಮಯ ಕಳೆಯುವುದು ಉತ್ತಮ,ಪರಿಹಾರ:-ತಾಯಿ ದುರ್ಗೆಯನ್ನು ಪ್ರಾರ್ಥಿಸಿ,

*11,⚱️ಕುಂಭ ರಾಶಿ⚱️*📃,ಈ ದಿನ ನಿಮಗೆ ಶುಭ ಸುದ್ದಿಯೊಂದಿಗೆ ಆರಂಭವಾಗಲಿದೆ ನಿಮ್ಮ ಸಕಾರಾತ್ಮಕ ಚಿಂತನೆಯು ನಿಮ್ಮ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ.ನಿಮ್ಮ ಮುಂದಿನ ಕನಸುಗಳ ಬಗ್ಗೆ ಯಾರಿಗೂ ಹೇಳಬೇಡಿ. ಕಚೇರಿಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ,ಗಮನಿಸಿ:-ಈ ದಿನ ಯಾರಾದರೂ ನಿರ್ಗತಿಕರಿಗೆ ಸಹಾಯ ಮಾಡಿ,ಪರಿಹಾರ:-ನಿಮ್ಮತಂದೆ ತಾಯಿಯಆಶೀರ್ವಾದವನ್ನು ಪಡೆಯಿರಿ,

*12,🐋ಮೀನ ರಾಶಿ🐋*📃,ಈ ದಿನ ನಿಮಗೆ ನಿಮ್ಮ ಸ್ನೇಹಿತರಿಂದ ಸಹಾಯ ಸಿಗಬಹುದ, ಗುರುಗಳ ದರ್ಶನ ಮತ್ತು ಅವರ ಮಾರ್ಗದರ್ಶನದಿಂದ ಮುಂದಿನ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯವಾಗಬಹುದು, ಕುಟುಂಬದಲ್ಲಿ ಜಗಳಗಳಾಗುವ ಸಂಭವವಿದೆ, ಈ ದಿನ ಕುಟುಂಬದ ವಾದ ವಿವಾದಗಳಿಗೆ ತಲೆಕೆಡಿಸಿಕೊಳ್ಳದೆ ಇರುವುದು ಒಳ್ಳೆಯದು,ಗಮನಿಸಿ:-ಆರೋಗ್ಯದ ಕಡೆ ಗಮನ ಕೊಡಿ,ಪರಿಹಾರ:- ಶ್ರೀ ಭಗವಂತ ಸೂರ್ಯನಾರಾಯಣ ಪ್ರಾರ್ಥನೆ ಮಾಡಿ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading