ಸುಳ್ಯ : ಸಂಸದ ಕ್ಯಾ. ಬ್ರಿಜೇಶ್ ಚೌಟ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಅಮೃತ್ 2 ರಸ್ತೆಗೆ ಡಾಮರೀಕರಣ ಆರಂಭ

ಸುಳ್ಯ: ಅಮೃತ್ 2.0 ಯೋಜನೆಯ ಕಾಮಗಾರಿಯಿಂದ ಹದಗೆಟ್ಟಿದ್ದ ಸುಳ್ಯ ನಗರದ ಮುಖ್ಯ ರಸ್ತೆಗಳ ದುರಸ್ತಿ ಕಾರ್ಯ ಆರಂಭವಾಗಿದೆ.

. . . . . . . . .

ಸುಳ್ಯ ನಗರ ವ್ಯಾಪ್ತಿಯ ಹಳೇಗೇಟು, ಜ್ಯೋತಿ ಸರ್ಕಲ್ ಮತ್ತು ಗಾಂಧಿನಗರ ಬಳಿ ರಸ್ತೆಯಲ್ಲಿ ದೊಡ್ಡ ಹೊಂಡಗಳು ಬಿದ್ದು ಸಾರ್ವಜನಿಕರು, ವಾಹನ ಸವಾರರು ಪರದಾಡುತ್ತಿದ್ದರು. ಈ ಹಿಂದೆ ಒಂದು ಬಾರಿ ತಾತ್ಕಾಲಿಕವಾಗಿ ದುರಸ್ತಿ ನಡೆಸಿದ್ದರೂ ಮಳೆಯ ಕಾರಣದಿಂದ ಕಾಂಕ್ರೀಟ್ ಕಿತ್ತು ಹೋಗಿತ್ತು.

. . . . . . .

ಇದೀಗ ಮತ್ತೆ ಹೊಂಡ ಮುಚ್ಚಿ ಡಾಮರೀಕರಣ ನಡೆಸಿ ದುರಸ್ತಿ ಕಾರ್ಯ ನಡೆಸಲಾಗಿದೆ. ಮೊನ್ನೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯ ಅವರ ಗಮನಕ್ಕೆ ತರಲಾಗಿತ್ತು. ತಕ್ಷಣವೇ ರಸ್ತೆ ದುರಸ್ತಿಪಡಿಸುವಂತೆ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.

ಸಂಸದರ ಸೂಚನೆಯ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತು ದುರಸ್ತಿ ಕಾರ್ಯ ಆರಂಭಿಸಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ಸಂಸದರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading