ಕೊಡಗು ಸಂಪಾಜೆ ಪಯಸ್ವಿನಿ ಸಹಕಾರ ಸಂಘಕ್ಕೆ ಸಮಗ್ರ ಪ್ರಶಸ್ತಿ ಗೌರವ

ಸಂಪಾಜೆ : ಕೃಷಿಕರಿಗೆ ಕೃಷಿ ಯಂತ್ರೋಪಕರಣಗಳ ಪೂರೈಕೆ ಹಾಗೂ ಮಾರಾಟದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘ ಕೊಡಮಾಡುವ ‘ಸಮಗ್ರ ಪ್ರಶಸ್ತಿ’ ಲಭಿಸಿದೆ.ಸೆಪ್ಟೆಂಬರ್ 23ರಂದು ಮಂಗಳೂರಿನಲ್ಲಿ ನಡೆದ ಸ್ಕ್ಯಾಡ್ಸ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ರವೀಂದ್ರ ಕಂಬಳಿ ಅವರು ಪಯಸ್ವಿನಿ ಸಹಕಾರ ಸಂಘದ ಅಧ್ಯಕ್ಷ ಅನಂತ್ ಊರುಬೈಲು ಹಾಗೂ ಸಿಇಒ ಆನಂದ ಬಿ.ಕೆ. ಅವರಿಗೆ ಶಾಲು ಹೊದಿಸಿ, ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಹೊನ್ನಪ್ಪ ಕಾಸ್ಪಾಡಿ, ಪೆರಾಜೆ ಸೊಸೈಟಿ ನಿರ್ದೇಶಕಿ ಪ್ರಮೀಳಾ ಭಾರದ್ವಾಜ್ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading