ದಿ| ರಾಮಕೃಷ್ಣ ಆಲಂಕಳ್ಯ ಅವರಿಗೆ ಗೌಡ ಸಮಾಜದಿಂದ ಶ್ರದ್ಧಾಂಜಲಿ

ಸೆ. 18ರಂದು ವಾಹನ ಅಪಘಾತಕ್ಕೀಡಾಗಿ 19ರಂದು ಸ್ವರ್ಗಸ್ಥರಾದ ಸಂಘಟಕ, ವಿವಿಧ ಸಂಘ ಸಂಸ್ಥೆಗಳ ಒಡನಾಡಿಯಾಗಿ ಜನಾನುರಾಗಿಯಾಗಿದ್ದ ದಿ| ರಾಮಕೃಷ್ಣ ಆಲಂಕಳ್ಯ ಅವರಿಗೆ ಗೌಡ ಸಮಾಜದಿಂದ ಶ್ರದ್ಧಾಂಜಲಿಯ ನುಡಿ ನಮನ ಕಾರ್ಯಕ್ರಮವನ್ನು ಸೆಪ್ಟೆಂಬರ್ 21 ರಂದು ಸಂಜೆ ವೆಂಕಟ್ರಮಣ ಟವರ್ಸ್‌ನ ಮದುವೆಗದ್ದೆ ಭೋಜಪ್ಪ ಸಭಾಭವನದಲ್ಲಿ ಏರ್ಪಡಿಸಲಾಯಿತು.

. . . . . . . . .

ದಿವಂಗತ ರಾಮಕೃಷ್ಣರವರು ಧೈರ್ಯಶಾಲಿ, ಸಂಘಟನೆಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲರಾಗಿ ಯಾವುದೇ ಕೆಲಸ ಕಾರ್ಯಕ್ರಮಗಳ ಜವಾಬ್ದಾರಿಯನ್ನು ವಹಿಸಿಕೊಂಡು ಎಲ್ಲರಿಗೂ ಆತ್ಮೀಯರಾಗಿದ್ದ ಆಲಂಕಳ್ಯ ಅವರ ಅಗಲುವಿಕೆಯ ನೋವು ತುಂಬ ದುಃಖಕರವೆಂದು ಸುಳ್ಯ ನಗರ ಗೌಡ ಸಮಿತಿಯ ಅಧ್ಯಕ್ಷ ರಾಕೇಶ್ ಕುಂಟಿಕಾನ, ತಾಲೂಕು ಅಧ್ಯಕ್ಷ ಪಿ.ಎಸ್. ಗಂಗಾಧರ, ವೆಂಕಟ್ರಮಣ ಸೊಸೈಟಿಯ ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಸುಳ್ಯ ನಗರ ಮಹಿಳಾ ಘಟಕದ ಅಧ್ಯಕ್ಷ ಹರ್ಷಕರುಣಾಕರ, ನಗರ ಪಂಚಾಯತ್ ಮಾಜಿ ಸದಸ್ಯೆ ಶೀಲಾ ಅರುಣ ಕುರುಂಜಿ, ನಿವೃತ್ತ ಬ್ಯಾಂಕ್ ಪ್ರಬಂಧಕರಾದ ಜನಾರ್ಧನ ಕೊಳಂಜಿರೋಡಿ, ಹಳೆಗೇಟು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆಯವರು. ಸಮಾಜದ ಪರವಾಗಿ ನುಡಿನಮನ ಸಲ್ಲಿಸಿದರು.

. . . . . . .

ಕಾರ್ಯಕ್ರಮದಲ್ಲಿ ಗೌಡ ಯುವ ಸಂಘದ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ತಾಲೂಕು ತರುಣ ಘಟಕದ ಅಧ್ಯಕ್ಷ ಪ್ರೀತಮ್ ಡಿ.ಕೆ. ನ್ಯಾಯವಾದಿ ಸತೀಶ್ಚಂದ್ರ ಡಿ.ಎಸ್, ವಿಠಲ ಗೌಡ ಬಾಣೂರು, ಬೆಳ್ಯಪ್ಪ ಗೌಡ ಬಳ್ಳಡ್ಕ, ಕರುಣಾಕರ ಸೇರ್ಕಜೆ, ರಾಧಾಕೃಷ್ಣ ಕುಂತಿನಡ್ಕ, ಬಾಲರಾಜ್ ದೇಂಗೋಡಿ, ವಿಶ್ವನಾಥ ಕುಂಚಡ್ಕ, ಧರ್ಮಪಾಲ ಕುಂತಿನಡ್ಯ ಅಶೋಕ ಪೀಚೆ, ಸುಪ್ರೀತ್ ಮೋಂಟಡ್ಕ, ಜೇಸೀ ಲತಾ ಸುಪ್ರೀತ್ ಮೋಂಟಡ್ಕ , ನಿವೃತ್ತ ಶಿಕ್ಷಕಿ ಚಂದ್ರಮತಿ ಕೆ., ವೇದಾವತಿ ಮಾಣಿಬೆಟ್ಟು, ರವೀಶ್ ಪಡ್ಡಂಬೈಲು, ಭೋಜಪ್ಪ ಗೌಡ ಮಾಣಿಬೆಟ್ಟು, ಬಾಲಕೃಷ್ಣ ನೆಡ್ಡಿಲು, ಕಿರಣ್ ಕುರುಂಜಿ, ತೀರ್ಥರಾಮ ಹೊಸೊಳಿಕೆ. ಡಾ| ಸವಿನ್ ಚಾಂತಾಳ ಉಪಸ್ಥಿತರಿದ್ದರು.

ಸುಳ್ಯ ನಗರ ಘಟಕದ ಅಧ್ಯಕ್ಷ ರಾಕೇಶ್ ಕುಂಟಿಕಾನ ಸ್ವಾಗತಿಸಿ, ತಾಲೂಕು ತರುಣ ಘಟಕ ಅಧ್ಯಕ್ಷ ಪ್ರೀತಮ್ ಡಿ.ಕೆ. ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading