ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಚೊಕ್ಕಾಡಿ ವಿದ್ಯಾಸಂಸ್ಥೆಗೆ ವಿವಿಧ ಕೊಡುಗೆ – ತರಬೇತಿ ಹಾಗೂ ವನಮಹೋತ್ಸವ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ವಿವಿಧ ಕೊಡುಗೆ, ತರಬೇತಿ ಕಾರ್ಯಕ್ರಮ ಹಾಗೂ ವನಮಹೋತ್ಸವ ಕಾರ್ಯಕ್ರಮ ಸೆ. 12 ರಂದು ನಡೆಯಿತು.

. . . . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷರಾದ ರೋಟರಿಯನ್ ಆರಿಫ್ ಬೆಳ್ಳಾರೆ ವಹಿಸಿದ್ದರು. ವೇದಿಕೆಯಲ್ಲಿ ಜೋನಲ್ ಲೆಫ್ಟಿನೆಂಟ್ ಚಂದ್ರಶೇಖರ್ ರೈ, ಭಜನಿ ಚೊಕಾಡಿ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ನಿರಂಜನ್ ಕೊಳ್ತುಗುಳಿ, ಸಂಚಾಲಕರಾದ ಸುಪ್ರೀತ್ ಮೋಂಟಡ್ಕ,, ಅರುಣ್ ಕುಮಾರ್ ನಾಯರ್ಕಲ್ಲು, ಮಹೇಶ್ ಮೇರ್ಕಜೆ, ಮುಖ್ಯಗುರುಗಳಾದ ಸಂಕೀರ್ತನ್ ಚೊಕ್ಕಾಡಿ, ರೋಟರಿಯನ್ ಪದ್ಮನಾಭ ಬೀಡು ಹಾಗೂ ರೋಟರಿಯನ್ ಹರ್ಷಿತ್ ಉಪಸ್ಥಿತರಿದ್ದರು. ರೋಟರಿಯನ್ ಆರಿಫ್ ಬೆಳ್ಳಾರೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

. . . . . . .

ವಿವಿಧ ಕೊಡುಗೆಗಳ ವಿತರಣೆ, ಸನ್ಮಾನ ಹಾಗೂ ತರಬೇತಿ ಕಾರ್ಯಕ್ರಮ ಮತ್ತು ವನಮಹೋತ್ಸವ ನಡೆಯಿತು. ರೋಟರಿ ಫೋರ್-ವೇ ಟೆಸ್ಟ್ ಕುರಿತು ತರಬೇತಿಯನ್ನು ರೋಟರಿಯನ್ ವಿನಯ್ ಕುಮಾರ್ ಹಾಗೂ ಹೈಜೀನಿಕ್ ತರಬೇತಿಯನ್ನು ರೋಟರಿಯನ್ ಅನ್ನಪೂರ್ಣಾ ಪುತ್ತೂರು ಅವರು ನಡೆಸಿಕೊಟ್ಟರು. ದಾನಿಗಳಾಗಿ ಸಹಕರಿಸಿದ ರೋಟರಿಯನ್ ಪದ್ಮನಾಭ ಬೀಡು ಹಾಗೂ ರೋಟರಿಯನ್ ಹರ್ಷಿತ್ ಅವರನ್ನು ಗೌರವಿಸಲಾಯಿತು. ಕೊನೆಯಲ್ಲಿ ಕಾರ್ಯದರ್ಶಿ ರೋಟರಿಯನ್ ಪ್ರಶಾಂತ್ ಟಿ. ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್‌ನ ಸದಸ್ಯರು, ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ವಿದ್ಯಾಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading