ಇಂದು ಸೆಪ್ಟೆಂಬರ್ 02 – ವಿಶ್ವ ತೆಂಗಿನಕಾಯಿ ದಿನ

ಇತಿಹಾಸ : 1969, ಸೆಪ್ಟೆಂಬರ್ 2 ರಂದು UN-ESCAP ಆಶ್ರಯದಲ್ಲಿ ಏಷ್ಯನ್ ಅಂಡ್ ಪೆಸಿಫಿಕ್ ಕಮ್ಯುನಿಟಿ (APCC) ಸಂಸ್ಥೆಯನ್ನು ಇಂಡೋನೇಷ್ಯಾದ ಜಕಾರ್ತಾದಲ್ಲಿ ಸ್ಥಾಪಿಸಲಾಯಿತು. ಈ ದಿನದ ನೆನಪಿಗಾಗಿ 2009 ರಿಂದ ಪ್ರತಿ ವರ್ಷ ಸೆಪ್ಟೆಂಬರ್ 2 ರಂದು ವಿಶ್ವ ತೆಂಗಿನಕಾಯಿ ದಿನ ಆಚರಿಸಲು ಶುರು ಮಾಡಿದರು. ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್, ಮಲೇಷ್ಯಾ, ಥಾಯ್ಲೆಂಡ್ ಸೇರಿದಂತೆ 18 ದೇಶಗಳು ಇದರ ಸದಸ್ಯರು.
ಏಕೆ ಆಚರಿಸುತ್ತಾರೆ? : ತೆಂಗನ್ನು *ಕಲ್ಪವೃಕ್ಷ* ಎಂದು ಕರೆಯುತ್ತಾರೆ – ಇದರ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಬರುತ್ತದೆ.
ಮಹತ್ವ – ಧಾರ್ಮಿಕವಾಗಿ : ಹಿಂದೂ ಧರ್ಮದಲ್ಲಿ ಶ್ರೀಫಲ ಎಂದು ಪೂಜಿಸುತ್ತಾರೆ, ದೇವರಿಗೆ ಅರ್ಪಿಸುತ್ತಾರೆ.
ಆರೋಗ್ಯ : ಪ್ರೋಟೀನ್, ಪೊಟ್ಯಾಸಿಯಮ್, ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಸಮೃದ್ಧ. ಕೊಲೆಸ್ಟ್ರಾಲ್ ಇಲ್ಲ, ತೆಂಗಿನ ನೀರು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ.
ಆರ್ಥಿಕವಾಗಿ : ನಾರಿನಿಂದ ಹಗ್ಗ, ಚಾಪೆ, ಗರಿಯಿಂದ ಪೊರಕೆ, ಚಪ್ಪರ, ಚಿಪ್ಪಿನಿಂದ ಇದ್ದಿಲು, ಎಣ್ಣೆ, ಸೌಂದರ್ಯವರ್ಧಕ, ಅಡುಗೆ ಎಣ್ಣೆ – ಎಲ್ಲದಕ್ಕೂ ಬಳಕೆ.
ಭಾರತದಲ್ಲಿ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರದಲ್ಲಿ ಪ್ರಮುಖ ಬೆಳೆ. ಪ್ರಪಂಚದ 90% ತೆಂಗಿನ ಉತ್ಪಾದನೆ ಏಷ್ಯಾದಿಂದಲೇ ಬರುತ್ತದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading