ಸೆ. 3ರಂದು ಅಜ್ಜಾವರದಲ್ಲಿ ನೂರುಲ್ ಇಸ್ಲಾಂ ಮದರಸ ನೂತನ ಕಟ್ಟಡ ಉದ್ಘಾಟನೆ

ಸುಳ್ಯ: ಅಜ್ಜಾವರ ಮೇನಾಲ ಮುಹಿನುದ್ದೀನ್ ಜುಮಾ ಮಸೀದಿ ಅಧೀನದ ನೂರುಲ್ ಇಸ್ಲಾಂ ಮದರಸ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಸೆ. 3ರಂದು ಸಂಜೆ 4.30ಕ್ಕೆ ನಡೆಯಲಿದೆ ಎಂದು ಕಟ್ಟಡ ಸಮಿತಿ ಜತೆ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಯಂಬು ತಿಳಿಸಿದ್ದಾರೆ.

. . . . . . . . .

ಸುಳ್ಯದ ಪತ್ರಿಕಾಭವನದಲ್ಲಿ ಆ. 29ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜ್ಜಾವರದಲ್ಲಿ ಸುಮಾರು ರೂ. 60 ಲಕ್ಷ ವೆಚ್ಚದಲ್ಲಿ ನೂತನ ಮದರಸ ಕಟ್ಟಡ ನಿರ್ಮಿಸಲಾಗಿದೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಅಧ್ಯಕ್ಷ ಹಾಗೂ ಅಜ್ಜಾವರ ಮೇನಾಲ ಮುಹಿನುದ್ದೀನ್ ಜುಮಾ ಮಸೀದಿಯ ಖಾಝಿ ಶೈಖುನಾ ಸಯ್ಯಿದ್ ಮಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

. . . . . . .

ಪತ್ರಿಕಾಗೋಷ್ಠಿಯಲ್ಲಿ ಕಟ್ಟಡ ಸಮಿತಿ ಅಧ್ಯಕ್ಷ ಮುಸ್ತಫ ಹಾಜಿ ಡೆಲ್ಮ, ಖತೀಬ್ ಕೆ.ಎಂ. ಹಸೈನಾರ್ ಫೈಝಿ, ಎಂಜೆಎಂ ಅಜ್ಜಾವರ ಅಧ್ಯಕ್ಷ ಎ.ಪಿ. ಅಬ್ದುಲ್ ಕುಂಞಿ ಹಾಜಿ ಪಳ್ಳಿಕೆರೆ, ಉಪಾಧ್ಯಕ್ಷ ಇಬ್ರಾಹಿಂ ಹಾಜಿ ಕೊಳಂಬೆ, ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಶಾಫಿ ದಾರಿಮಿ, ಕಟ್ಟಡ ಸಮಿತಿ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಹಾಜಿ ಹಾಗೂ ಉಪಾಧ್ಯಕ್ಷ ಶರೀಪ್ ರಿಲಾಕ್ಸ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading