ಗುತ್ತಿಗಾರು: ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುತ್ತಿಗಾರು ವಲಯ.. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಗುತ್ತಿಗಾರು ವಲಯದ ನೇತೃತ್ವದಲ್ಲಿ  ಗುತ್ರಿಗಾರು ಸರಕಾರಿ ಪ್ರೌಢ ಶಾಲಾ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗುತ್ತಿಗಾರು ವಲಯದ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ  ಮಿತ್ರದೇವ ಮಡಪ್ಪಾಡಿ ಇವರು.. ದೀಪ ಬೆಳಗಿಸಿ ಉದ್ಘಾಟನೆ ಮಾಡಿ. ಜನಜಾಗೃತಿ ಕಾರ್ಯಕ್ರಮ ಮತ್ತು ದುಶ್ಚಟ ಮುಕ್ತ ಸಮಾಜದಲ್ಲಿ ಮಕ್ಕಳು.. ಉತ್ತಮ ಪ್ರಜೆಗಳಾಗಿ.. ದೇಶ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತಾವು ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

. . . . . . . . .


ಜನಜಾಗೃತಿ ತಾಲೂಕು ಸದಸ್ಯರಾದ  ವಿಜಯಕುಮಾರ್ ಚಾರ್ಮತ ಮಾತನಾಡಿ  ಆರೋಗ್ಯದ ಮೇಲೆ ಧೂಮಪಾನ, ಗುಟ್ಕಾ ಹಾಗೂ ಮಾದಕ ದ್ರವ್ಯ ಸೇವನೆಯಿಂದ ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆ, ಮಾನಸಿಕ ಒತ್ತಡ ಹಾಗೂ ನೆನಪಿನ ಶಕ್ತಿ ಕುಂಠಿತಗೊಳ್ಳುತ್ತದೆ “ಆರೋಗ್ಯವಂತ ಶರೀರವೇ ಆತ್ಮದ ಅರಮನೆ, ಅನಾರೋಗ್ಯ ಶರೀರವೇ ಆತ್ಮದ ಸೆರೆಮನೆ” ಎಂಬ ಮಾತಿನಂತೆ ಶರೀರ ಮತ್ತು ಮನಸ್ಸಿನ ಆರೋಗ್ಯ ಕಾಪಾಡುವುದು ಮುಖ್ಯ ಎಂದರು
ಶಾಲಾ ಮುಖ್ಯ ಶಿಕ್ಷಕರಾದ ಪೂರ್ಣಿಮಾ ಮಡಪ್ಪಾಡಿ ಸಭಾ ಅಧ್ಯಕ್ಷತೆಯನ್ನು ವಹಿಸಿ.. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉತ್ತಮ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದ್ದರು.. ವಲಯ ಮೇಲ್ವಿಚಾರಕರಾದ  ರಾಜೇಶ್ ಪ್ರಾಸ್ತಾವಿಕ ಮಾತುಗಳನ್ಬಾಡಿದರು. ಕಾರ್ಯಕ್ರಮದಲ್ಲಿ ಗುತ್ತಿಗಾರು ಒಕ್ಕೂಟ ಅಧ್ಯಕ್ಷರಾದ  ಅಜಿತ್ ಬಾಕಿಲ, ಶಾಲಾ ಶಿಕ್ಷಕ ವೃಂದ ಉಪಸ್ತಿರಿದ್ದರು. ಗುತ್ತಿಗಾರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಲೋಕೇಶ್ವರ ಡಿ.ಆರ್ ಸ್ವಾಗತಿಸಿ ಶಾಲಾ ಶಿಕ್ಷಕಿಯಾದ ಶ್ರೀಮತಿ ಪುನೀತಾ ಕಲ್ಮಕಾರು ಕಾರ್ಯಕ್ರಮ ನಿರೂಪಿಸಿ
ಶಿಕ್ಷಕಿ ಶ್ರೀಮತಿ ಅಶ್ವಿನಿರವರು ಧನ್ಯವಾದ ಸಮರ್ಪಿಸಿದರು..

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading