ಕೊಡಗು ಪತ್ರಕರ್ತರ ಸಂಘದ ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತ ವಿನೋದ್ ಮೂಡಗದ್ದೆ ಆಯ್ಕೆ

ಕೊಡಗು ಪತ್ರಕರ್ತರ ಸಂಘದ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಅಂಗವಾಗಿ ನೀಡಲಾಗುವ ವಾರ್ಷಿಕ ದತ್ತಿನಿಧಿ ಪ್ರಶಸ್ತಿಗೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ನಿವಾಸಿ ಪತ್ರಕರ್ತ ವಿನೋದ್ ಮೂಡಗದ್ದೆ ರವರು ಆಯ್ಕೆಯಾಗಿದ್ದಾರೆ. ಗುಂಡುಕಟ್ಟಿ ಎಸ್ಟೇಟ್ ಮ್ಹಾಲಕರಾದ ಜಿ.ಎಂ ಮಹೇಂದ್ರ ರವರು ತಮ್ಮ ತಂದೆ ಜಿ.ಎಂ ಮೋಹನ್ ರವರ ಹೆಸರಿನಲ್ಲಿ ನೀಡುತ್ತಿರುವ ದತ್ತಿನಿಧಿ ಪ್ರಶಸ್ತಿಗೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವಿನೋದ್ ಮೂಡಗದ್ದೆ ರವರು ಬರೆದ ಕಾಫಿ ಉದ್ಯಮದ ಕುರಿತ “ಕಾಫಿ ಬೆಳೆಯಿಂದ ಹಸನಾದ ಕೃಷಿಕ” ಎಂಬ ಕೃಷಿ ವರದಿ ಆಯ್ಕೆಯಾಗಿದೆ. ಆ.19 ಬುಧವಾರದಂದು ಕೊಡಗು ಪತ್ರಕರ್ತರ ಸಂಘ ಹಾಗೂ ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ತಿಳಿದುಬಂದಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading