ಶಾಂತಿನಗರ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಸ.ಉ.ಹಿ.ಪ್ರಾ ಶಾಲೆ ಶಾಂತಿನಗರದಲ್ಲಿ 80ನೇ ಸ್ವಾತಂತ್ರ ದಿನಾಚರಣೆಯನ್ನು ಅದ್ದೂರಿಯಾಗಿ ನಡೆಸಲಾಯಿತು. SDMC ಅಧ್ಯಕ್ಷರಾದ ಮೊಹಮ್ಮದ್ ನಝೀರ್ ಧ್ವಜಾರೋಹಣವನ್ನು ಮಾಡಿದರು. ನಂತರ ಪಥಸಂಚಲನ ಮೆರವಣಿಗೆಯು ಶಾಲೆಯಿಂದ ಪೈಚಾರ್ ವರೆಗೆ ಸಾಗಿತ್ತು. ನಂತರ ಸಭಾ ಕಾರ್ಯಕ್ರಮ ನಡೆಸಲಾಯಿತು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ SDMC ಅಧ್ಯಕ್ಷರಾದ ಮಹಮದ್ ನಝೀರ್, ಶ್ರೀ ಗೋಪಾಲಕೃಷ್ಣ ಭಟ್, ಅಬೂಬಕ್ಕರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಯಭಾರಿಯಾದ ಶ್ರೀ ಸುಧಾಕರ್ ರೈ , ನವೀನ್, ಚಂದ್ರಶೇಖರ ನೂಜಾಡಿ, ಶಾಲಾ ಮುಖ್ಯ ಗುರುಗಳಾದ ಪೂರ್ಣಿಮಾ ಎಂ.ಆರ್, ಹರ್ಷ ಕರ್ಣಾಕರ, ಶ್ರೀಮತಿ ಶಶಿಕಲಾ, ಉಪಸ್ಥಿತರಿದ್ದರು.

. . . . . . . . .

ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ಭಟ್, ಆರೋಗ್ಯ ಸಹಾಯಕಿಯಾದ ಶ್ರೀಮತಿ ಶಶಿಕಲಾ ಹಾಗೂ ಶಾಲಾ ಸಹ ಶಿಕ್ಷಕಿಯಾದ ಶ್ರೀಮತಿ ಪವಿತ್ರ ಇವರಿಗೆ ಗೌರವ ಸನ್ಮಾನವನ್ನು ಮಾಡಲಾಯಿತು. ನಂತರ ದತ್ತಿನಿಧಿ ವಿತರಣೆ ಹಾಗೂ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಸಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ದೇಶಪ್ರೇಮವನ್ನು ಸಾರುವ ನೃತ್ಯಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಮನೋಜ್ಞವಾಗಿ ಪ್ರದರ್ಶನಗೊಂಡವು. ಶಾಲೆಯ ಶಿಕ್ಷಕರು, ನಿವೃತ್ತ ಶಿಕ್ಷಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಯವರು, ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

. . . . . . .

ಶಾಲಾ ಮುಖ್ಯ ಗುರುಗಳು ಅತಿಥಿಗಳನ್ನು ಸ್ವಾಗತಿಸಿ, ಶಾಲಾ ಸಹಶಿಕ್ಷಕಿ ಭಾಗ್ಯಶ್ರೀ ವಂದಿಸಿದರು, ಹಾಗೂ ದತ್ತಿನಿಧಿ ಮತ್ತು ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಶಿಕ್ಷಕಿ ರಮ್ಯಶ್ರೀ ವಾಚಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಹೇಮಾವತಿ.ಬಿ ಇವರು ನಿರ್ವಹಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading