ಪೆರಾಜೆ : ಜ್ಯೋತಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಜ್ಯೋತಿ ಪ್ರೌಢಶಾಲೆ ಪೆರಾಜೆ ಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಿಂದ ನಡೆಯಿತು. ರಾಷ್ಟ್ರಧ್ವಜಾರೋಹಣವನ್ನು ಜ್ಯೋತಿ ವಿದ್ಯಾಸಂಘದ ನಿರ್ದೇಶಕರಾದ ಶ್ರೀ ಎನ್ ಈ ರಾಮಚಂದ್ರ ನೆರವೇರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷರಾದ ಶ್ರೀ ರಾಕೇಶ್ ರೈ ಅವರು ವಹಿಸಿದ್ದರು . ಮುಖ್ಯ ಶಿಕ್ಷಕರಾದ ಶ್ರೀ ಜಿ ಆರ್ ನಾಗರಾಜ್ ಅವರು ಸರ್ವರನ್ನು ಸ್ವಾಗತಿಸಿದರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಶ್ರೀ ಕರುಣಾಕರ ನಿಡಿಂಜಿ ನಿವೃತ ಕನ್ನಡ ಪ್ರಾಧ್ಯಾಪಕರು ಎಫ್ ಎಂ ಸಿ ಕಾಲೇಜು, ಮಡಿಕೇರಿ ಇವರು ಉಪನ್ಯಾಸ ನೀಡಿದರು ಕಾರ್ಯಕ್ರಮದಲ್ಲಿ ಜ್ಯೋತಿ ವಿದ್ಯಾ ಸಂಘದ ಉಪಾಧ್ಯಕ್ಷರಾದ ರಕ್ಷಿತ್ ಕೆ ಪಿ ನಿರ್ದೇಶಕರುಗಳಾದ ಶ್ರೀ ಎನ್ ಎ ರಾಮಚಂದ್ರ ಶ್ರೀಮತಿ ಶಕುಂತಲಾ ಯು ರೈ ಶ್ರೀಮತಿ ಅರ್ಚನಾ ಜೋಶಿ, ಶಾಲಾ ಸಂಚಾಲಕರಾದ ಶ್ರೀ ಮಹೇಶ್ ಕುಮಾರ್ ಮೇನಾಲ ಪ್ರಣವ್ ಫೌಂಡೇಶನ್ ಗೌರವ ಸಲಹೆಗಾರರಾದ ಶ್ರೀ ಪ್ರಸಾದ್ ಜೋಶಿ, ಪೋಷಕ ಸಮಿತಿ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನ ಕಾರ್ಯಕ್ರಮ ನಡೆಯಿತು ಆಂಗ್ಲ ಮಾಧ್ಯಮ ಶಿಕ್ಷಕಿ ಶ್ರೀಲತಾ ವಂದಿಸಿದರು ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ಅರ್ಚನಕುಮಾರಿ ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮದಲ್ಲಿ ಪೋಷಕ ಸಮಿತಿಯ ಎಲ್ಲ ಸದಸ್ಯರುಗಳು ಆಂಗ್ಲ ಮಾಧ್ಯಮ ವಿದ್ಯಾರ್ಥಿ ಪೋಷಕರು ಹಾಗೂ ಪ್ರೌಢಶಾಲೆ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕ ವೃಂದ ಭಾಗವಹಿಸಿದ್ದರು

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading