ಸುಳ್ಯದ ಜನ ಆಶಾ ಶಾಖೆಯಲ್ಲಿ ಮಾಹಿತಿ ಕಾರ್ಯಾಗಾರ ಹಾಗೂ ಸಾಧಕರಿಗೆ ಸನ್ಮಾನ

ಜನ ಆಶಾ ಸೌತ್ ನಿಧಿ ಲಿಮಿಟೆಡ್ ನ ಕಾರ್ಯಕರ್ತರಿಗೆ ಮಾಹಿತಿ ಕಾರ್ಯಾಗಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಆ.13ರಂದು ಸುಳ್ಯ ಜನಾಆಶಾ ಶಾಖೆಯಲ್ಲಿ ನಡೆಯಿತು.

. . . . . . . . .

ಕಾರ್ಯಕ್ರಮದ ವೇದಿಕೆಯಲ್ಲಿ ಜನಆಶಾ ಸಂಸ್ಥೆಯ ಡಿ.ಎಂ ನಂದೀಶ್ ಮೈಸೂರು, ಸೀನಿಯರ್ ಪಿ.ಆರ್.ಒ ರಾಜೇಶ್ ಚೊಕ್ಕಾಡಿ, ಪಿ.ಆರ್.ಒ ಪ್ರತಿಷ್ ಮಡಿಕೇರಿ ಹಾಗೂ ಸುಳ್ಯ ಶಾಖಾ ಪ್ರಬಂಧಕರಾದ ಸುಧಾಕರ್ ಅವರು ಉಪಸ್ಥಿತರಿದ್ದರು. ಶಾಖಾ ಪ್ರಬಂಧಕರಾದ ಸುಧಾಕರ್ ಪ್ರಸ್ತಾವನೆ ಮಾಡಿದರು. ಡಿ.ಎಂ ನಂದೀಶ್ ರವರು ಬ್ಯಾಂಕಿನ ಬಗ್ಗೆ ಸಂಪೂರ್ಣ ಮಾಹಿತಿ ಮಾರ್ಗದರ್ಶನ ನೀಡಿ ಕಾರ್ಯಗಾರ ನಡೆಸಿಕೊಟ್ಟರು. ಪಿ.ಆರ್.ಒ ರಾಜೇಶ್ ರವರು ಮಾಹಿತಿಯೊಂದಿಗೆ ಕಾರ್ಯಕರ್ತರ ಪ್ರಗತಿ ಪರಿಶೀಲಿಸಿ ಪ್ರೋತ್ಸಾಹಿಸಿದರು. ಪಿ.ಆರ್.ಒ ಪ್ರತೀಶ್ ರವರು ಶುಭ ಹಾರೈಕೆಯ ಮಾತುಗಳನ್ನಾಡಿದರು.

. . . . . . .

ಈ ಸಂದರ್ಭದಲ್ಲಿ ಕಾರ್ಯಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಾರ್ಯಕರ್ತರನ್ನು ಅತಿಥಿಗಳ ಮುಖೇನ ಶಾಖೆಯ ಪ್ರಬಂಧಕರು ಗೌರವಿಸಿ ಪ್ರೋತ್ಸಾಹಿಸಿದರು. ಕಾರ್ಯಕ್ರಮಕ್ಕೆ ಭಾಗವಹಿಸಿದ ಅತಿಥಿಗಳನ್ನು ಜನಾಆಶಾ ಟೀಂ ಸುಳ್ಯ ಶಾಖೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಖೆಯ ಸಿ.ಆರ್.ಒ ಗಳಾದ ಚಂಪ.ಎನ್ ಉಬರಡ್ಕ, ಮನೋಹರ್ ಸುಳ್ಯ, ಸೌಮ್ಯ ಕೇರ್ಪಳ, ಯೋಗೀಶ್ ಸುಳ್ಯ ಸೇರಿದಂತೆ ಸುಮಾರು 40 ಮಂದಿ ಬಿ.ಎ ಗಳು ಉಪಸ್ಥಿತರಿದ್ದರು.

ಶಾಖೆಯ ಅಡ್ಮಿನ್ ಸ್ಟಾಫ್ ಗಳಾದ ದಿವ್ಯ ಹಾಗೂ ಜ್ಯೋತಿರವರು ಕಾರ್ಯಕ್ರಮದಲ್ಲಿ ಸಂಪೂರ್ಣ ಸಹಕರಿಸಿ ಯಶಸ್ವಿಗೊಳಿಸಿದರು. ಸಿ.ಆರ್.ಒ ನಿತ್ಯಾನಂದ ಭೀಮಗುಳಿ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಶಾಖಾ ಪ್ರಬಂಧಕರಾದ ಸುಧಾಕರ್ ಅವರು ಸಹ ಭೋಜನದ ವ್ಯವಸ್ಥೆ ಮಾಡಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading