ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಬಗ್ಗೆ ಬೆಳ್ಳಾರೆಯಲ್ಲಿ ಪೂರ್ವಭಾವಿ ಸಭೆ

ಐತಿಹಾಸಿಕ ಸ್ಥಳವಾದ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆಯು ಆ.10 ರಂದು ಬೆಳ್ಳಾರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಪಿ.ಡಿ.ಓ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅರೆಭಾಷೆ ಅಕಾಡೆಮಿ ಅಧ್ಯಕ್ಷರು ಸದಾನಂದ ಮಾವಜಿ, ಅಮರ ಸುಳ್ಯ ಸಮರ 1837 ಸಮಿತಿ ಅಧ್ಯಕ್ಷ ಚಂದ್ರ ಕೋಲ್ಚಾರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ.ವಿ ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ರೂಪರೇಷೆಗಳನ್ನು, ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಾಜಿ, ಬೆಳ್ಳಾರೆಯ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಪದ್ಮನಾಭ ಬೀಡು, ವಕೀಲರಾದ ಮಹಾಬಲ, ಕೂಸಪ್ಪ ಗೌಡ ಮುಗುಪ್ಪು, ಜೈಪ್ರಸಾದ್ ಇಂಜಿನಿಯರ್, ವಸಂತ ಪಡ್ಪು, ನಿವೃತ್ತ ಸೈನಿಕ ರವೀಂದ್ರ ಗೌಡ,ಬೆಳ್ಳಾರೆಯ ಕೆಪಿಎಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಮಾಯಿಲಪ್ಪ ಜಿ, ಬೆಳ್ಳಾರೆ ಕೆಪಿಎಸ್ ಉಪ ಪ್ರಾಂಶುಪಾಲೆ ಉಮಾಕುಮಾರಿ, ಜಯರಾಮ್ ಗೌಡ ಉಮಿಕ್ಕಳ,ಬೆಳ್ಳಾರೆ ಸಂಜೀವಿನಿ ಸಂಘದ ಪದಾಧಿಕಾರಿಗಳಾದ ಗೀತಾಪ್ರೇಮ್, ಲೀಲಾ,ದಿವ್ಯ ಆನಂದ್, ಪ್ರೇಮ್ ಬೆಳ್ಳಾರೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ಆಗಸ್ಟ್ 15 ರಂದು ಬೆಳಿಗ್ಗೆ 8:15ಕ್ಕೆ ಗ್ರಾಮ ಪಂಚಾಯಿತಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ, ಆನಂತರ ಬಂಗ್ಲೆಗುಡ್ಡೆಯಲ್ಲಿ 8:30ಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಸಾರ್ವಜನಿಕರು ಸೇರಿ ಧ್ವಜಾರೋಹಣ ಕಾರ್ಯಕ್ರಮ, ಅದಾದ ನಂತರ ಎಲ್ಲ ಗಣ್ಯರು ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಮತ್ತು ಕೆಪಿಎಸ್ ಸಭಾಂಗಣದಲ್ಲಿ ಶಾಲಾ ಮಕ್ಕಳಿಂದ ಊರಿನ ಗಣ್ಯರಿಂದ ಧ್ವಜಾರೋಹಣ ನಡೆಸಲಾಗುವುದು ಎಂದು ಗಣ್ಯರ ಸಮ್ಮುಖದಲ್ಲಿ ತಿಳಿಸಿರುವರು‌. ಕಾರ್ಯಕ್ರಮಗಳು ಪಂಚಾಯತ್ ನ ಸಂಯೋಗದೊಂದಿಗೆ ನಡೀತದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದ ಸ್ವಾಗತವನ್ನು ಮಹಾಬಲ ಗೌಡ ನಡೆಸಿ ಧನ್ಯವಾದವನ್ನು ಕೂಸಪ್ಪ ಗೌಡ ಮುಗುಪ್ಪು ನೆರವೇರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading